Get Updates
Get notified of breaking news, exclusive insights, and must-see stories!

ಓ ಮನಸೇ ಹಳೆ ಸಂಚಿಕೆ ಆನ್ ಲೈನ್ ನಲ್ಲಿ ಲಭ್ಯ

ಬೆಂಗಳೂರು, ಫೆ.14: ಹಿರಿಯ ಪತ್ರಕರ್ತ ಉದಯ ಮರಕಿಣಿ ಅವರ ಸಂಪಾದಕತ್ವದಲ್ಲಿ 'ಓ ಮನಸೇ' ಪಾಕ್ಷಿಕ ಮತ್ತೆ ಪ್ರಕಟಣೆಯಾಗುತ್ತಿದ್ದು, ಓ ಬೆಂಗಳೂರಿನ ಬೆಳೆಗೆರೆ ಬುಕ್ಸ್ ಅಂಡ್ ಕಾಫಿ ಪುಸ್ತಕ ಮಳಿಗೆಯಲ್ಲಿ ಡಿ.14 ರಂದು ಲೋಕಾರ್ಪಣೆಗೊಂಡ ಓ ಮನಸೇ ಪಾಕ್ಷಿಕವನ್ನು ಓದುಗರು ಮತ್ತೊಮ್ಮೆ ಒಪ್ಪಿ ಅಪ್ಪಿಕೊಂಡಿರುವುದು ಸಂತಸದ ಸಂಗತಿ ಎಂದು ಹಾಯ್ ಬೆಂಗಳೂರು ಸಂಪಾದಕ, ಜನಶ್ರೀ ಸಿಇಒ ರವಿ ಬೆಳೆಗೆರೆ ಹೇಳಿದ್ದಾರೆ.

ಓ ಮನಸೇ ಹಾಗೇ ಎಷ್ಟೋ ನಿಯತಕಾಲಿಕೆಗಳು ಮಾರುಕಟ್ಟೆಗೆ ಬಂದು ಹೋಗಿವೆ. ಆದರೆ "ಓ ಮನಸೇ...." ಪಾಕ್ಷಿಕ ಮನಸ್ಸಿಗೆ ನೀಡಿದ ತೃಪ್ತಿ, ಸಮಾಧಾನ ಯಾವುದು ಮಾಡಲಿಲ್ಲ ಎಂದು ಖ್ಯಾತ ಹಿರಿಯ ಪತ್ರಕರ್ತರಾದ ರವಿ ಬೆಳಗೆರೆ ಹೇಳಿದ್ದಾರೆ.

ಓ ಮನಸೇ... ಹಳೆಯ ಸಂಚಿಕೆಗಳನ್ನು ಓದುವ ಮನಸುಗಳು... ಸಾಕಷ್ಟಿವೆ... ಅಂಥ ಮನಸುಗಳಿಗೆ ಮುದ ನೀಡಲು ಇಲ್ಲಿದೇ ನೋಡಿ ಕೆಲವು ಸಂಚಿಕೆಗಳು..ಓದಿ ನಿಮ್ಮ ಅನಿಸಿಕೆಗಳನ್ನು ಇಮೇಲ್ ಮಾಡಿ ತಿಳಿಸಿ.

ಈಗ ವಿಷಯಕ್ಕೆ ಬರೋಣ.. ಓ ಮನಸೇ ಹಳೆ ಸಂಚಿಕೆಗಳನ್ನು ಓದುಗರು ಕೂಡಿಟ್ಟುಕೊಂಡು ಓದುವುದು ರೂಢಿಗತವಾಗಿದೆ. ಆದರೆ, ಕೆಲವು ಸಂಚಿಕೆ ಮಿಸ್ ಅಯ್ತು ಎಂದು ಹಲಬುವುದು ಸಾಮಾನ್ಯವಾಗಿದೆ. ಆದರೆ, ಈಗ ಈ ಸಮಸ್ಯೆಗೆ ಪರಿಹಾರ ಸಿಕ್ಕಿದೆ.

Popular Kannada Magazine O Manase old issues online

ತಡೆದ ಮಳೆ ಜಡಿದು ಬಂದಂತೆ : ಆಗಾಗ ಬಿಟ್ಟು ಬಿಟ್ಟು ಮಳೆ ಬರುವ ಹಾಗೆ ಬರ್ತಿದೆ ಓ ಮನಸೇ ಅನ್ನೋದು ಅಸಂಖ್ಯಾತ ಓದುಗರ ದೂರಾಗಿತ್ತು. ಹಾಗಿರುವಾಗಲೇ "ಮತ್ತೆ ಬರಲಿದೆ ಜೀವದ ಗೆರೆ" ಹೀಗೆ ಬರೆದಾಗ ಓ ಮನಸೇ ಮತ್ತೆ ಬರೋಲ್ಲ ಅನ್ನೊರ ಮನಸಿಗೆ ಜೀವ ಬಂದಂತಾಗಿತ್ತು.... ಇನ್ನು ಕೆಲ ದಿನಗಳಲ್ಲಿ ರವಿ ಬೆಳಗೆರೆಯವರು ತಮ್ಮ ಸಾಫ್ಟ್ ಕಾರ್ನರ್ ಅಂಕಣದಲ್ಲಿ "ತಡೆದ ಮಳೆ ಜಡಿದು ಬರುತ್ತೆ" ಎಂದು ಬರೆದಾಗ ಗುಡುಗು ಸದ್ದು ಕೇಳಿ ಬಂದದ್ದು ಸತ್ಯ.

ಕೆಲ ವರ್ಷಗಳ ನಂತರ ಹೊಸ ಹುರುಪಿನೊಂದಿಗೆ ಶುರುವಾಗುತ್ತಿದ್ದ ಓ ಮನಸೇ ಪತ್ರಿಕೆಗೆ ಮೊದಲು ಮುಖಪುಟವಾದದ್ದು ಟಿವಿ 9 ಖ್ಯಾತಿಯ ಶೀತಲ್ ಶೆಟ್ಟಿ. "ಆಂಕರ್ ಆಗುವುದು ಹೇಗೆ?" ಎಂಬ ಶಿರೋನಾಮೆ ಹೊತ್ತು ಬಂದ ಓ ಮನಸೇ ಪತ್ರಿಕೆ ಬಿಡುಗಡೆ ದಿನಾಂಕಕ್ಕೂ ಮುನ್ನ ಮಾರುಕಟ್ಟೆಯಲ್ಲಿ ಲಭ್ಯವಿತ್ತು.

ಬಿಡುಗಡೆ ದಿನದೊಳಗೆ ಮುದ್ರಿಸಿದ್ದ ಮುಕ್ಕಾಲು ಪ್ರತಿಗಳು ಆಗಲೇ ಮಾರಾಟವಾಗಿ ಹೋಗಿದ್ದವು. ಇದೊಂತರ ಜಡಿದ ಮಳೆಯಲ್ಲಿ ಆಲಿಕಲ್ಲು ಸುರಿದಂತಿತ್ತು.. ಸಿಕ್ಕಿದವರಿಗೆ ಸೀರುಂಡೆಯಂತೆ ಪತ್ರಿಕೆ ಕೊಂಡವರ ಖುಷಿ ಪಟ್ಟಿದ್ದರು. ಇನ್ನು ಕೆಲವರಿಗೆ ಸಿಕ್ಕ ಉತ್ತರ SOLD OUT. ಮತ್ತಷ್ಟು ಪ್ರತಿ ಮುದ್ರಿಸಿ ಅನ್ನೋದು ಓದುಗರ ಅಂಬೋಣವಾಗಿತ್ತು.. ಆದರೆ ಅದೇ ಪ್ರತಿ ಮುದ್ರಿಸಿದರೆ ಹೊಸ ಸಂಚಿಕೆಗಳನ್ನು ನೋಡೊದು ಹೇಗೆ.. ಹಾಗಾಗಿ ಅದು ಹಾಗೇ ಉಳಿಯಿತು. ಆಗ ಓದುಗರಿಗೆ ತಪ್ಪಿದ ಸಂಚಿಕೆ ಈಗ ಆನ್ ಲೈನ್ ಮೂಲಕ ಓದಿಕೊಳ್ಳುಲು ಇಲ್ಲೊಂದು ಅವಕಾಶವಿದೆ. ಓದಿ ನಿಮ್ಮ ಅನಿಸಿಕೆ ತಿಳಿಸಿ. ಓ ಮನಸೇ ಓದಬೇಕೆ. ನಿಮ್ಮದೊಂದು ಹೊಸ ಅಕೌಂಟ್ ಮಾಡಿ ಹಳೆ ಸಂಚಿಕೆಗಳನ್ನು ಓದಿ :

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+