ಪ್ರಯಾಣಿಕರಿಂದ 'ಅನುಭೂತಿ' ಕಾಣದ ಶತಾಬ್ಧಿ ರೈಲು

ಬೆಂಗಳೂರು, ಮಾರ್ಚ್ 21: ರೈಲಿನಲ್ಲಿ ವಿಮಾನ ಪ್ರಯಾಣದ ಅನುಭವವನ್ನು ಪ್ರಯಾಣಿಕರಿಗೆ ನೀಡಲು ರೈಲ್ವೆ ಇಲಾಖೆಯು ಅನುಭೂತಿ ಬೋಗಿಯನ್ನು ಅಳವಡಿಸಿತ್ತು. ಆದರೆ ಅನುಭೂತಿಗೆ ನೀರಸ ಪ್ರತಿಕ್ರಿಯೆ ಲಭ್ಯವಾಗಿದೆ.
ವಿಮಾನದಲ್ಲಿ ಇರುವ ಎಲ್ಲಾ ಸೌಕರ್ಯಗಳು ಆ ಬೋಗಿಯಲ್ಲಿ ಇದ್ದರೂ ಜನರು ಆಕರ್ಷಿತರಾಗಿಲ್ಲ. ಇದಕ್ಕೆ ಸಾಮಾನ್ಯ ಟಿಕೆಟ್ ದರಕ್ಕಿಂತ ಹೆಚ್ಚು ದರ ನಿಗದಿಪಡಿಸಿದ್ದು ಕಾರಣ ಎನ್ನಲಾಗಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ವಿಶೇಷ ಸೌಲಭ್ಯಗಳ ಅನುಭೂತಿ ಬೋಗಿಗಳನ್ನು ಮೂರು ತಿಂಗಳು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ. ಜನವರಿ 26ರಂದು ಆರಂಭವಾದ ಈ ವ್ಯವಸ್ಥೆ ಮಾ.26ಕ್ಕೆ ಮುಕ್ತಾಯವಾಗಲಿದೆ. ಮದ್ರಾಸ್ ನಿಂದ ಮೈಸೂರಿಗೆ ಸಂಚರಿಸುವ ಈ ರೈಲಿನ ಅನುಭೂತಿ ಬೋಗಿಯಲ್ಲಿ ಸಂಚರಿಸುವವರ ಸಂಖ್ಯೆ ಶೇ.60-70ರಷ್ಟಿದೆ.

ವಾರಾಂತ್ಯದಲ್ಲಿ ಕೊಂಚ ಹೆಚ್ಚು, ಆದರೆ ಬೆಂಗಳೂರು ಹಾಗೂ ಮೈಸೂರು ನಡುವೆ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಶೇ.30ರಿಂದ 40ರಷ್ಟಿದೆ. ಒಮ್ಮೆ ಅನುಭೂತಿ ಬೋಗಿಯಲ್ಲಿ ಸಂಚರಿಸಿದಾಗ ಬೆರಳೆಣಿಕೆಯಷ್ಟು ಮಂದಿ ಮಾತ್ರ ಇದ್ದರು. ಪ್ರಮುಖವಾಗಿ ಬೆಂಗಳೂರು ಮತ್ತು ಮೈಸೂರು ನಡುವೆಯೂ ಹೆಚ್ಚು ಜನರ ಇರಲಿಲ್ಲ ಎಂದು ಪ್ರಯಾಣಿಕರು ತಿಳಿಸಿದ್ದಾರೆ.

Poor response for Anubhuti coaches in Shatabdhi rail

ಎಕ್ಸಿಕ್ಯುಟಿವ್ ಕ್ಲಾಸ್ ಪ್ರಯಾಣ ದರ: ಚೆನ್ನೈ-ಮೈಸೂರು-1835ರೂ, ಚೆನ್ನೈ-ಬೆಂಗಳೂರು-1445ರೂ ಹಾಗೂ ಅನುಭೂತಿ ಬೋಗಿಯ ಪ್ರಯಾಣ ದರ: ಚೆನ್ನೈ-ಮೈಸೂರು-2200ರೂ, ಚೆನ್ನೈ-ಬೆಂಗಳೂರು-1735ರೂ ಇದೆ.

ಬೋಗಿಯ ವಿಶೇಷತೆ: ಶಾಸಕ ಸಂಸದರಿಗೆ ಪಾಸ್ ವಿತರಣೆ, ಬೇರೆ ವಿಶೇಷ ರೈಲುಗಳಿಗಿಂತ 1.2ರಷ್ಟು ದರ ಹೆಚ್ಚಳ, ಆಧುನಿಕ ಶೌಚಾಲಯ, ವಿಶೇಷ ಆಸನಗಳು, ಎಲ್‌ಇಡಿ ಅಳವಡಿಕೆ, ಪ್ರತಿ ಪ್ರಯಾನಿಕರಿಗೂ ಹೆಡ್ ಫೋನ್ ಸೌಲಭ್ಯ, ಮೊಬೈಲ್ ಚಾರ್ಜ್ ಗೆ ಪ್ರತ್ಯೇಕ ಸೌಲಭ್ಯ, ಸ್ವಯಂ ಚಾಲಿತ ತೆರೆಯುವ-ಮುಚ್ಚುವ ಬಾಗಿಲುಗಳುಯ, ಓದಲು ವಿಶೇಷ ದೀಪಗಳು, ಜಿಪಿಎಸ್ ಸೌಲಭ್ಯ ಇನ್ನು ಮುಂತಾದ ವ್ಯವಸ್ಥೆಯನ್ನು ಒಳಗೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+