ಬೆಂಗಳೂರು ಸೇರಿದಂತೆ 10 ನಗರಗಳಲ್ಲಿ ಕಳಪೆ ವಾಯು ಗುಣಮಟ್ಟ
ಬೆಂಗಳೂರು, ಜೂನ್ 12: ದೇಶದಾದ್ಯಂತ 11 ಪ್ರಮುಖ ನಗರಗಳಲ್ಲಿ ಮಾಲಿನ್ಯದ ಮಟ್ಟವು ಸುರಕ್ಷಿತ ಮಟ್ಟವನ್ನು ಮೀರಿದ್ದು, ಕಳೆದ 366 ದಿನಗಳಲ್ಲಿ ಬೆಂಗಳೂರಿನಲ್ಲಿ ಸರಾಸರಿ PM (ಮಾಲಿನ್ಯದ ಮಟ್ಟ) 2.5 ಮಟ್ಟವು ವಿಶ್ವ ಆರೋಗ್ಯ ಸಂಸ್ಥೆಯು ನಿಗದಿಪಡಿಸಿದ ಸುರಕ್ಷಿತ ಮಟ್ಟಕ್ಕಿಂತ 5.8 ಪಟ್ಟು ಹೆಚ್ಚಾಗಿದೆ.
ವಿಶ್ವ ಆರೋಗ್ಯ ಸಂಸ್ಥೆ ಪ್ರತಿ ಘನ ಮೀಟರ್‌ಗೆ 5 ಮೈಕ್ರೋಗ್ರಾಂ ಅನ್ನು ಸುರಕ್ಷಿತ ಮಟ್ಟವಾಗಿ ಇರಿಸಿದೆ. ಕಳವಳಕಾರಿ ವಿಷಯವೆಂದರೆ ಬೆಂಗಳೂರಿನ ಗಾಳಿಯಲ್ಲಿ ಕಣದಲ್ಲಿ ವಾರ್ಷಿಕ ಸರಾಸರಿ ಪ್ರತಿ ಘನ ಮೀಟರ್‌ಗೆ 29.01 ಮೈಕ್ರೋಗ್ರಾಂ ಮಾಲಿನ್ಯವಿದೆ. 24ಗಂಟೆಗಳ ಸಾಂದ್ರತೆಯು 283 ದಿನಗಳಲ್ಲಿ ಪ್ರತಿ ಘನ ಮೀಟರ್‌ಗೆ 60 ಮೈಕ್ರೋಗ್ರಾಂಗಿಂತ ಹೆಚ್ಚು ಎಂದು ಡಿಎಚ್ ವರದಿ ಮಾಡಿದೆ.

ಇದಲ್ಲದೆ ಕೆಲವು ನಗರಗಳಲ್ಲಿ ವಾರ್ಷಿಕ ಸರಾಸರಿ PM 2.5 ಸಾಂದ್ರತೆಯು ಕೆಟ್ಟದಾಗಿದೆ. ಪಟ್ನಾ (89.76 ಮೈಕ್ರೋಗ್ರಾಂ/ಕ್ಯೂಬಿಕ್ ಮೀಟರ್) ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ನಂತರ ಲಕ್ನೋ (79.24), ಜೈಪುರ (59.06), ಕೋಲ್ಕತ್ತಾ (49.1), ಭೋಪಾಲ್ (45.45), ಮುಂಬೈ ( 43.26), ಪುಣೆ (42.25), ಹೈದರಾಬಾದ್ (40.91), ಕೊಚ್ಚಿ (24.11) ಮತ್ತು ಚೆನ್ನೈ (23.81) ಆಗಿದೆ.
ಭಾರತದ ಎಲ್ಲಾ 11 ನಗರಗಳಲ್ಲಿ ದೊಡ್ಡ ಕಣಗಳು ಮತ್ತು ಸಾರಜನಕ ಡೈಆಕ್ಸೈಡ್ (NO2) ವಾರ್ಷಿಕ ಸರಾಸರಿ ಸಾಂದ್ರತೆಯು ಸುರಕ್ಷಿತ ಮಟ್ಟಕ್ಕಿಂತ ಹೆಚ್ಚಾಗಿದೆ. ಸಾರ್ವಜನಿಕ ಆರೋಗ್ಯ ಮತ್ತು ರಾಷ್ಟ್ರದ ಆರ್ಥಿಕತೆಯನ್ನು ಕಾಪಾಡಲು ನಾವು ವಾಯು ಮಾಲಿನ್ಯದ ಬಿಕ್ಕಟ್ಟಿನ ಮೇಲೆ ಕಾರ್ಯನಿರ್ವಹಿಸಬೇಕು ಎಂದು ಗ್ರೀನ್‌ಪೀಸ್ ಹೇಳಿದೆ.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು ವಾಯು ಮಾಲಿನ್ಯ ಪೀಡಿತ ಪ್ರದೇಶಗಳಲ್ಲಿ ವಾಯು ಗುಣಮಟ್ಟ ಮೇಲ್ವಿಚಾರಣಾ ಕೇಂದ್ರಗಳನ್ನು ಸಮಾನ ರೀತಿಯಲ್ಲಿ ಸ್ಥಾಪಿಸುವ ಅಗತ್ಯವಿದೆ ಎಂದು ಅಧ್ಯಯನವು ಹೇಳಿದೆ. ವಿದ್ಯುತ್, ಸಾರಿಗೆ ಮತ್ತು ಉದ್ಯಮ ಕ್ಷೇತ್ರಗಳಿಗೆ ಪಳೆಯುಳಿಕೆ ಇಂಧನಗಳಿಗೆ ಪರ್ಯಾಯಗಳನ್ನು ತುರ್ತಾಗಿ ಹುಡುಕುವಂತೆ ಸರ್ಕಾರಗಳನ್ನು ಒತ್ತಾಯಿಸಿದೆ.

ಕಳೆದ ಮೇ ತಿಂಗಳಲ್ಲಿ ವಾಯುಮಾಲಿನ್ಯದ ಮೇಲ್ವಿಚಾರಣೆಯಲ್ಲಿ ಸಮಗ್ರ ವಿಧಾನದ ಕೊರತೆಯು ನಗರದ ಮಾಲಿನ್ಯದ ಮಟ್ಟಗಳ ಬಗ್ಗೆ ನಮ್ಮ ತಿಳುವಳಿಕೆಯನ್ನು ಸೀಮಿತಗೊಳಿಸಿದೆ ಮತ್ತು ದೇಶದಾದ್ಯಂತ 131 ನಗರಗಳಲ್ಲಿ ಹದಗೆಡುತ್ತಿರುವ ಗಾಳಿಯ ಗುಣಮಟ್ಟವನ್ನು ಪರಿಹರಿಸಲು ಪ್ರಾರಂಭಿಸಲಾದ ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮದಲ್ಲಿ (NCAP) ಅಂತರವನ್ನು ಸೃಷ್ಟಿಸಿದೆ ಎಂದು ಐಐಟಿ ದೆಹಲಿಯ ಸಂಶೋಧಕರು ತಿಳಿಸಿದ್ದರು.
ವಾಯು ಮಾಲಿನ್ಯ ಸಂಬಂಧ ಇತರ ವಿಶ್ವವಿದ್ಯಾನಿಲಯಗಳು ಭಾರತವು ಅಗತ್ಯವಿರುವ ಸಂಖ್ಯೆಯ ಮೇಲ್ವಿಚಾರಣಾ ಕೇಂದ್ರಗಳಲ್ಲಿ ಕೇವಲ 32% ಅನ್ನು ಮಾತ್ರ ಹೊಂದಿದೆ ಎಂದು ತಮ್ಮ ಅಂಕಿ ಅಂಶಗಳನ್ನು ನೀಡಿ ವಿವರ ನೀಡಿದ್ದರು.












Click it and Unblock the Notifications