ನಟ ದರ್ಶನ್‌ & ಗ್ಯಾಂಗ್‌ ಚಾಪೆ ಕೆಳಗೆ ನುಗ್ಗಿದ್ರೆ, ಪೊಲೀಸರು ಮಾತ್ರ ರಂಗೋಲಿ ಕೆಳಗೆ ತೂರೇಬಿಟ್ರು.!

Actor Darshan: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌, ಪವಿತ್ರಾ & ಪಟಾಲಂ ಗ್ಯಾಂಗ್‌ ಜೈಲು ಪಾಲಾಗಿದ್ದಾರೆ. ಈ ಸಂಬಂಧ ಪೊಲೀಸರು ತನಿಖೆ ಚುರುಕುಗೊಳಿಸಿ ಮಹತ್ವದ ಸಾಕ್ಷ್ಯಗಳ ಸಂಗ್ರಹಕ್ಕೆ ಮುಂದಾಗಿದ್ದಾರೆ. ಮತ್ತೊಂದೆಡೆ ಜೈಲುಪಾಲಾಗಿರುವ ದರ್ಶನ್‌ನನ್ನು ಹೊರತರಲು ಪತ್ನಿ ವಿಜಯಲಕ್ಷ್ಮಿ ಹಾಗೂ ಕುಟುಂಬಸ್ಥರು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇದರ ನಡುವೆಯೇ ದರ್ಶನ್‌ ಗ್ಯಾಂಗ್‌ನ ಸ್ಫೋಟಕ ಮಾಹಿತಿಯನ್ನು ಪೊಲೀಸರು ಜಲಾಡಿದ್ದಾರೆ. ವಿವರ ಇಲ್ಲಿದೆ ತಿಳಿಯಿರಿ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್‌ನನ್ನು ಆಪ್ತ ಕುಟುಂಬಸ್ಥರು ಜೈಲು ನಿಯಮದಡಿಯಲ್ಲೇ ವಾರಕ್ಕೆ ಮೂವರು ಎಂಬಂತೆ ಭೇಟಿಯಾಗುತ್ತಲೇ ಇದ್ದಾರೆ. ಜೈಲು ನಿಯಮದ ಪ್ರಕಾರ, ಕುಟುಂಬಸ್ಥರಿಗೆ ಮಾತ್ರ ವಾರಕ್ಕೆ ಒಂದು ಬಾರಿ ಮೂವರಿಗೆ ಮಾತ್ರ ಭೇಟಿಗೆ ಅವಕಾಶ ನೀಡಲಾಗುತ್ತದೆ. ಹಾಗೆಯೇ ಈಗಾಗಲೇ ಪುತ್ರ ವಿನೀಶ್‌, ಪತ್ನಿ ವಿಜಯಲಕ್ಷ್ಮಿ ಅಳಿಯ ದರ್ಶನ್‌ನನ್ನು ಭೇಟಿಯಾಗಿ ಬಂದಿದ್ದಾರೆ.

Police to retrieve deleted videos from actor Darshan Pavithra Gowda s house and shed

ಪವಿತ್ರಾ ಗೌಡಗೆ ಅಶ್ಲೀಲ ಸಂದೇಶದ ಕಳುಹಿಸಿದ್ದಾರೆ ಎಂಬ ಕಾರಣಕ್ಕೆ ರೇಣುಕಾಸ್ವಾಮಿಯನ್ನು ನಟ ದರ್ಶನ್‌ & ಗ್ಯಾಂಗ್‌ ಬೆಂಗಳೂರಿನ ಪಟ್ಟಣಗೆರೆ ಶೆಡ್‌ಗೆ ಕರೆದುಕೊಂಡು ಹೋಗಿ ಭೀಕರವಾಗಿ ಹತ್ಯೆಗೈದಿತ್ತು ಎನ್ನುವ ಮಾಹಿತಿ ತಿಳಿದುಬಂದಿತ್ತು. ಬಳಿಕ ಪೊಲೀಸರು ಪ್ರಕರಣದ ತನಿಖೆ ಮುಂದುವರೆಸಿದ್ದು, ಶೆಡ್‌ನಲ್ಲಿ ಯಾವುದೇ ಸಿಸಿಟಿವಿ ಪುಟೇಜ್‌ಗಳು ಸಿಗದಂತೆ ದರ್ಶನ್‌ ಗ್ಯಾಂಗ್‌ ಡಿಲೀಟ್‌ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಅಷ್ಟೇ ಅಲ್ಲದೆ, ಪವಿತ್ರಾ ಗೌಡ ಮನೆ, ರೆಸ್ಟೋರೆಂಟ್‌, ದರ್ಶನ್‌ ಮನೆಯ ಸಿಸಿಟಿವಿ ಪುಟೇಜ್‌ಗಳು ಡಿಲೀಟ್‌ ಆಗಿವೆ ಎನ್ನುವ ಮಾಹಿತಿ ತಿಳಿಯುತ್ತಿದ್ದಂತೆ, ಕೋರ್ಟ್‌ ಮಾಹಿತಿ ಮೇರೆಗೆ ದರ್ಶನ್‌ ಮನೆ, ಶೆಡ್‌, ಪವಿತ್ರಾ ಗೌಡ ಮನೆ ಹಾಗೂ ರೆಸ್ಟೋರೆಂಟ್‌ನ ಸಿಸಿಟಿವಿಯ ಡಿವಿಆರ್‌ ಅನ್ನು ವಶಕ್ಕೆ ಪಡೆದು ಎಫ್‌ಎಸ್‌ಎಲ್‌ಗೆ ಕಳುಹಿಸುವ ಮೂಲಕ ಡಿಲೀಟ್‌ ಆದಂತಹ ದತ್ತಾಂಶಗಳನ್ನು ರಿಟ್ರೀವ್‌ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ.

ಇದೀಗ ಮೊದಲೇ ಡಿಜಿಟಲ್‌ ಯುಗ.. ಡಿಲೀಟ್‌ ಮಾಡಿದರೆ ಆ ವಿಡಿಯೋಗಳು ಮತ್ತೆ ಸಿಗುವುದಿಲ್ಲ ಎಂದು ಭಾವಿಸುವುದು ತಪ್ಪು ಕಲ್ಪನೆ. ಡಿಲೀಟ್‌ ಆದಂತಹ ಎಲ್ಲವನ್ನೂ ಮತ್ತೆ ಮರಳಿ ಪಡೆಯುವ ತಂತ್ರಜ್ಞಾನವು ಕೂಡ ಇದೆ. ಈ ಮೂಲಕ ಪೊಲೀಸರು ಸಿಸಿಟಿವಿಯ ಡಿವಿಆರ್‌ಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿ ದರ್ಶನ್‌ & ಗ್ಯಾಂಗ್‌ ಮಾಡಿರುವ ಕಳ್ಳಾಟವನ್ನು ಬಯಲು ಮಾಡಲು ಮುಂದಾಗಿದೆ.

ಒಂದು ವೇಳೆ ನಟ ದರ್ಶನ್‌ ಸಾಕ್ಷ್ಯನಾಶ ಮಾಡಲು ಮುಂದಾಗಿದ್ದಾರೆ ಎನ್ನುವುದು ಸಾಬಿತಾದರೆ, ಕುಣಿಕೆ ಮತ್ತಷ್ಟು ಬಿಗಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಅದರಲ್ಲೂ ಸಾಕ್ಷ್ಯ ನಾಶ ಕೇಸ್‌ ಕೂಡ ದಾಖಲಾಗಲಿದೆ. ನಟ ದರ್ಶನ್‌ ಚಾಪೆ ಕೆಳಗೆ ತೂರಲು ಪ್ರಯತ್ನಿಸಿದರೆ, ಪೊಲೀಸರು ರಂಗೋಲಿ ಕೆಳಗೆ ತೂರುವ ಕೆಲಸ ಮಾಡುತ್ತಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+