ನಲಪಾಡ್ ಪ್ರಕರಣ: ತಲೆಮರೆಸಿಕೊಂಡ ಆರೋಪಿಗಾಗಿ ಹುಡುಕಾಟ
ಬೆಂಗಳೂರು, ಮಾರ್ಚ್ 07: ಮೊಹಮ್ಮದ್ ನಲಪಾಡ್ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಆರೋಪಿ ಶ್ರೀಕೃಷ್ಣ ಅವರಿಗಾಗಿ ಪೊಲೀಸರು ಲುಕೌಟ್ ನೊಟೀಸ್ ಜಾರಿ ಮಾಡಿದ್ದಾರೆ.
ವಿದ್ವತ್ ಮೇಲೆ ಹಲ್ಲೆ ಸಂಬಂಧ ಮೊಹಮ್ಮದ್ ನಲಪಾಡ್ ಸೇರಿ 8 ಮಂದಿಯ ಮೇಲೆ ಎಫ್‌ಐಆರ್ ದಾಖಲಾಗಿತ್ತು, ಆದರೆ ಏಳು ಜನ ಮಾತ್ರ ಪೊಲೀಸರಿಗೆ ಶರಣಾಗಿದ್ದು, ಮತ್ತೊಬ್ಬ ಆರೋಪಿ ಶ್ರೀಕೃಷ್ಣ ತಲೆಮರೆಸಿಕೊಂಡಿದ್ದಾನೆ ಪೊಲೀಸರಿಗೆ ಇನ್ನೂ ಈತನ ಸುಳಿವು ಪತ್ತೆ ಆಗಿಲ್ಲ. ಮೊಹಮ್ಮದ್ ನಲಪಾಡ್ ಜೊತೆಗೆ ಆತನ ಸಹಚರರಾದ ಅರುಣ್ ಬಾಬು, ಮಂಜುನಾಥ, ಅಶ್ರಪ್, ಬಾಲಕೃಷ್ಣ, ಅಭಿಷೇಕ್, ನಾಸಿರ್ ಅವರುಗಳು ಪೊಲೀಸರಿಗೆ ಶರಣಾಗಿದ್ದರು.
ಶ್ರೀಕೃಷ್ಣ ಮೊಬೈಲ್, ಕಂಪ್ಯೂಟರ್ ಬಳಸುವುದರಲ್ಲಿ ಪರಿಣಿತನಾಗಿದ್ದು, ಹ್ಯಾಕಿಂಗ್ ಕಲೆ ಕೂಡ ತಿಳಿದವನಾಗಿದ್ದಾನೆ ಎನ್ನಲಾಗಿದೆ. ಈತ 2014ರಿಂದಲೂ ಮೊಬೈಲ್ ಬಳಸುತ್ತಿಲ್ಲವಾದ್ದರಿಂದ ಈತನ ಸುಳಿವು ಸಿಗುವುದು ಕಷ್ಟಕರವಾಗಿದೆ ಎನ್ನಲಾಗಿದೆ. ಈತ ವಿದೇಶಕ್ಕೆ ಹಾರಿರುವ ಶಂಕೆ ಇದ್ದು, ಈತನ ಮೇಲೆ ಲುಕ್‌ಔಟ್ ನೊಟೀಸ್ ಜಾರಿ ಮಾಡಲಾಗಿದೆ.

ಇಂದು ನಲಪಾಡ್ ಅವರ ಜಾಮೀನು ಅರ್ಜಿ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯಲಿದ್ದು, ಹಿರಿಯ ವಕೀಲ C.V.ನಾಗೇಶ್ ಅವರು ನಲಪಾಡ್ ಪರ ವಾದ ಮಂಡಿಸಲಿದ್ದಾರೆ.












Click it and Unblock the Notifications