ಪರಿಚಿತರಿಂದಲೇ ಅಪಹರಣವಾಗಿದ್ದ ಮಗುವನ್ನು ರಕ್ಷಿಸಿದ ಪೊಲೀಸರು

ಬೆಂಗಳೂರು, ಜನವರಿ 19: ಅಪಹರಣವಾಗಿದ್ದ ಮಗುವನ್ನು ರಕ್ಷಿಸಿ ಪೊಲೀಸರು ಪೋಷಕರಿಗೆ ಸುರಕ್ಷಿತವಾಗಿ ಒಪ್ಪಿಸಿದ್ದಾರೆ. ಮಲ್ಲತ್ತಹಳ್ಳಿಯಲ್ಲ ವಾಸವಿರುವ ಚಂದನ್ ಮತ್ತು ರಾಣಿ ದಂಪತಿಯ ಪುತ್ರಿ ಅರ್ನಭಿ ಕುಮಾರಿ ಸಿಂಗ್ ನನ್ನು ಪೊಲೀಸರು ರಕ್ಷಿಸಿದ್ದಾರೆ.

ಪರಿಚಿತರೇ ಅಪಹರಿಸಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಉತ್ತರ ಭಾರತ ಮೂಲದ ದಂಪತಿ ತಮ್ಮ 11 ತಿಂಗಳ ಮಗುವಿನೊಂದಿಗೆ ಬಾಡಿಗೆಮನೆಯಲ್ಲಿ ವಾಸವಿದ್ದರು. ರಾಣಿ ಅವರಿಗೆ ನೇಹಾ ಎಂಬುವವರ ಮೂಲಕ ಕುಮಾರ್ ಎಂಬಾತ ಪರಿಚಯವಾಗಿದ್ದ, ಆಗಾಗ ಮನೆಗೆ ಬಂದು ಹೋಗುತ್ತಿದ್ದ.

ಒಮ್ಮೆ ನಿಮ್ಮ ಮಗಳನ್ನು ನಾನು ಸಾಕುತ್ತೇನೆ ನನಗೆ ಕೊಡಿ ಎಂದು ಕೇಳಿದ್ದ, ಅದಕ್ಕೆ ದಂಪತಿ ನಿರಾಕರಿಸಿದ್ದರು.ಆದರೆ ಜನವರಿ 16ರಂದು ಚಂದನ್ ದಂಪತಿ ಬೇರೆ ಮನೆಗೆ ಶಿಫ್ಟ್ ಆಗುತ್ತಿದ್ದರು, ಅದಕ್ಕೆ ಕುಮಾರ್ ನೆರವನ್ನೂ ಕೂಡ ಕೇಳಿದ್ದರು, ನೆರವಿಗೆಂದು ಇಬ್ಬರನ್ನು ಕುಮಾರ್ ಕಳುಹಿಸಿದ್ದ ಶಿಫ್ಟ್ ಮಾಡುವ ವೇಳೆ ಮಗುವನ್ನು ಮನೆಯಲ್ಲಿ ಮಲಗಿಸಿದ್ದರು.

Police rescued kidnapped child

ರಾತ್ರಿ ಯಾರೂ ಇಲ್ಲದ ವೇಳೆ ನೋಡಿಕೊಂಡು ಮಗುವನ್ನು ಎತ್ತಿಕೊಂಡು ಕುಮಾರ್ ಪರಾರಿಯಾಗಿದ್ದ. ಕೆಲ ಹೊತ್ತಿನ ಬಳಿಕ ಮಗು ನಾಪತ್ತೆಯಾಗಿರುವುದು ಗೊತ್ತಾಗಿದೆ. ಬಳಿಕ ಅಕ್ಕಪಕ್ಕದ ಮನೆಯವರ ಬಳಿ ವಿಚಾರಿಸಿದಾಗ ಯಾರೋ ಇಬ್ಬರು ಮಗುವನ್ನು ಎತ್ತಿಕೊಂಡು ಹೋಗಿದ್ದು ಗೊತ್ತಾಗಿದೆ. ಬಳಿಕ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಇದೀಗ ಕುಮಾರ್‌ನಿಂದ ಮಗುವನ್ನು ರಕ್ಷಿಸಿ ತಾಯಿಯ ಮಡಿಲಿಗೆ ಸೇರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+