ಕಪ್ಪು ಪಲ್ಸರ್, ಒಂಟಿಯಾಗಿ ಸರಗಳ್ಳತನ, ಇದು ಚಿನ್ನದ 'ಗಣಿ' ಕಥೆ

ಬೆಂಗಳೂರು, ಆಗಸ್ಟ್ 07 : ಕುಖ್ಯಾತ ಸರಗಳ್ಳ ಅಚ್ಯುತ್ ಕುಮಾರ್‌ನಿಂದ 1 ಕೋಟಿಗೂ ಅಧಿಕ ಮೌಲ್ಯದ ಚಿನ್ನದ ಸರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೂನ್ ತಿಂಗಳಿನಲ್ಲಿ ಪೊಲೀಸರು ಅಚ್ಯುತ್ ಕುಮಾರ್ ಬಂಧಿಸಿದ್ದರು.

ಅಚ್ಯುತ್ ಕುಮಾರ್ ಅಲಿಯಾಸ್ ಗಣಿ ವಿರುದ್ಧ ಬೆಂಗಳೂರಿನಲ್ಲಿಯೇ 70 ಸರಗಳ್ಳತನ ಪ್ರಕರಣ ದಾಖಲಾಗಿತ್ತು. ರಾಜ್ಯದ ಇತರ ಜಿಲ್ಲೆಗಳೂ ಸೇರಿ 105 ಪ್ರಕರಣಗಳಲ್ಲಿ ಈತ ಪೊಲೀಸರಿಗೆ ಬೇಕಾಗಿದ್ದ.

ಜೂನ್ 17ರಂದು ಜ್ಞಾನ ಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಚ್ಯುತ್ ಕುಮಾರ ಬಂಧಿಸಲಾಗಿತ್ತು. ಪೊಲೀಸರು ಬಂಧಿಸಲು ಹೋದಾಗ ಅವರ ಮೇಲೆ ದಾಳಿ ನಡೆಸಿದ್ದ, ಕಾಲಿಗೆ ಗುಂಡು ಹೊಡೆದು ಆತನನ್ನು ಬಂಧಿಸಿ, ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

Police recovers 3 kg of gold from chain snatcher Achyut Kumar

ಈಗ ಚೇತರಿಸಿಕೊಂಡಿರುವ ಅಚ್ಯುತ್ ಕುಮಾರ್ ವಿಚಾರಣೆಯನ್ನು ಪೊಲೀಸರು ನಡೆಸುತ್ತಿದ್ದಾರೆ. ಆತನಿಂದ 1 ಕೋಟಿಗೂ ಹೆಚ್ಚು ಬೆಲೆಬಾಳುವ ಚಿನ್ನದ ಸರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಒಂಟಿಯಾಗಿ ಸರಗಳ್ಳತನ ಮಾಡುತ್ತಿದ್ದ ಈತ, ಕದ್ದ ಸರವನ್ನು ಗವಿ ಸಿದ್ದೇಶ ಎಂಬುವವರ ಬಳಿ ಅಡವಿಡುತ್ತಿದ್ದನು.

ಅಚ್ಯುತ್ ಕುಮಾರ್ ಬಂಧಿಸಿದ ಪೊಲೀಸರು ಆತ ನೀಡಿದ ಮಾಹಿತಿಯಂತೆ ಗವಿ ಸಿದ್ದೇಶನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈತ ವಿಚಾರಣೆ ವೇಳೆ ಬೆಂಗಳೂರು, ತುಮಕೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಆತ ಸರಗಳ್ಳತನ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಪೇದೆಗೆ ಬಹುಮಾನ : ಜೂನ್ 17ರ ರಾತ್ರಿ ಪಲ್ಸರ್ ಬೈಕ್‌ನಲ್ಲಿ ಹೋಗುತ್ತಿದ್ದ ಕುಖ್ಯಾತ ಸರಗಳ್ಳ ಅಚ್ಯುತ್ ಕುಮಾರ್ ಅವರನ್ನು ಬೈಕ್ ಹಿಂಬಾಲಿಸಿದ್ದ ಚಂದ್ರಕುಮಾರ್ ಬೈಕ್‌ಗೆ ಡಿಕ್ಕಿ ಹೊಡೆದು ಅಚ್ಯುತ್ ಕುಮಾರ್ ಕೆಳಗೆ ಬೀಳಿಸಿ ಅವರನ್ನು ಬಂಧಿಸಿ ಸಾಹಸ ಮೆರೆದಿದ್ದರು. ಇದಕ್ಕಾಗಿ ಅವರಿಗೆ ಬಹುಮಾನವನ್ನು ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+