ಜನಾರ್ದನ ರೆಡ್ಡಿ ಸಿಸಿಬಿ ಕಚೇರಿಗೆ: ಪೊಲೀಸರು ಊಟಕ್ಕೆ ಹೋಗಿದ್ರು
ಬೆಂಗಳೂರು, ನವೆಂಬರ್ 10: ಮಾಜಿಸಚಿವ ಜನಾರ್ದನ್ ರೆಡ್ಡಿ ಸಿಸಿಬಿ ಕೇಂದ್ರ ಕಚೇರಿಗೆ ಬಂದು ವಿಚಾರಣೆಗೆ ಹಾಜರಾದರೂ ಅವರ ವಿಚಾರಣೆ ನಡೆಸಬೇಕಾದ ಪೊಲೀಸರು ಊಟಕ್ಕೆ ಹೋಗಿದ್ದರು ಸುದ್ದಿ ಬಂದಿದೆ.
ಮಾಜಿ ಸಚಿವ ಜರ್ನಾನ ರೆಡ್ಡಿ ತನ್ನ ವಕೀಲ ಚಂದ್ರಶೇಕರ್ ಅವರೊಂದಿಗೆ ಸಿಸಿಬಿ ಕಚೇರಿಗೆ ವಿಚಾರಣೆಗೆಂದು ತೆರಳಿದ್ದಾರೆ. ಆದರೆ ಅವರನ್ನು ವಿಚಾರಣೆಗೆ ಒಳಪಡಿಸಬೇಕಾದ ವೆಂಕಟೇಶ್ ಪ್ರಸನ್ನ, ಡಿಸಿಪಿ ಗಿರೀಶ್ ಎಲ್ಲರೂ ಕೂಡ ಊಟಕ್ಕೆಂದು ಕಚೇರಿಯಿಂದ ಹೊರಕ್ಕೆ ತೆರಳಿದ್ದಾರೆ. ಹೀಗಾಗಿ ಅವರೆಲ್ಲರೂ ಬರುವ ತನಕ ಸಿಸಿಬಿ ಕಚೇರಿಯಲ್ಲೇ ಜನಾರ್ದನ ರೆಡ್ಡಿ ಕಾಯಬೇಕಾಗಿರುವ ಪರಿಸ್ಥಿತಿ ಇದೆ.
ಜನಾರ್ದನ ರೆಡ್ಡಿ ಮಧ್ಯಾಹ್ನ 3.15ಕ್ಕೆ ಸಿಸಿಬಿ ಕಚೇರಿಗೆ ಹಾಜರಾಗುವುದಾಗಿ ವಿಡಿಯೋ ಒಂದರ ಮೂಲಕ ಮಾಹಿತಿ ನೀಡಿದ್ದರು ಆದರೆ 3.45ಆದರೂ ಕಚೇರಿಗೆ ಆಗಮಿಸದ ಹಿನ್ನೆಲೆಯಲ್ಲಿ ಪೊಲೀಸರು ಊಟಕ್ಕೆಂದು ಹೊರಗಡೆ ಹೋಗಿದ್ದಾರೆ. ಇದೀಗ ಜನಾರ್ದನ ರೆಡ್ಡಿ ಸಿಸಿಬಿ ಕಚೇರಿಯೊಳಗೆ ಅವರ ವಕೀಲ ಚಂದ್ರಶೇಖರ್ ಅವರೊಂದಿಗೆ ಕುಳಿತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗುತ್ತಿದೆ.

ಪೊಲೀಸರು ಬಂದ ನಂತರ ಅವರೇ ಜನಾರ್ದನ ರೆಡ್ಡಿ ಎನ್ನುವದಕ್ಕೆ ಒಂದು ಐಡಿ ಕಾರ್ಡ್, ಫೋಟೊ ಹಾಗೂ ಸಹಿ ಮಾಡಿಸಿಕೊಂಡ ಬಳಿಕ ವಿಚಾರಣೆ ನಡೆಯಲಿದೆ.
ಬಳಿಕ ಎಸಿಪಿ ವೆಂಕಟೇಶ್ ಪ್ರಸನ್ನ ಅವರಿಂದ ವಿಚಾರಣೆ ಆರಂಭವಾಯಿತು, ಅಲಖಾನ್ ಮತ್ತು ವಕೀಲರು ಹೊರಗಡೆಯೇ ಕುಳಿತಿದ್ದರು. ಇದೀಗ ಆಂಬಿಡೆಂಟ್ ಸಂಸ್ಥೆ ಮಾಲೀಕ ಫಿರೀದ್ ವಿಚಾರಣೆಗೆ ಹಾಜರಾಗಿದ್ದಾರೆ.












Click it and Unblock the Notifications