ಬಾಣಸವಾಡಿ ಬಳಿ ದರೋಡೆಕೋರನ ಮೇಲೆ ಪೊಲೀಸರಿಂದ ಗುಂಡಿನ ದಾಳಿ
ಬೆಂಗಳೂರು, ಸೆಪ್ಟೆಂಬರ್ 3: ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲವಾರು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗುದ್ದ ಸುಹೇಲ್ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ.
ಭಾನುವಾರ ರಾತ್ರಿ 1.45ರ ವೇಳೆಗೆ ಬಾಣಸವಾಡಿ ಮುಖ್ಯರಸ್ತೆಯಲ್ಲಿ ಸ್ಕೂಟ್ ಮೇಲೆ ತೆರಳುತ್ತಿದ್ದ ಸುಹೇಲ್ ಬೈಕ್ ನಿಲ್ಲಿಸುವಂತೆ ಪೊಲೀಸರು ಎಚ್ಚರಿಕೆ ನೀಡಿದರು. ಆದರೆ ಬೈಕ್ ಸವಾರನಾದ ಸುಹೇಲ್ ಸಬ್ ಇನ್‌ಸ್ಪೆಕ್ಟರ್ ಶರತ್ ಕುಮಾರ್ ಹಾಗೂ ಮುಖ್ಯಪೇದೆ ರಫೀಕ್ ನಿಲ್ಲುವಂತೆ ಸೂಚಿಸಿದರೂ, ಪ್ರತಿದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದೆ. ಆತ್ಮರಕ್ಷಣೆಗಾಗಿ ಪೊಲೀಸರು ಎರಡು ಸುತ್ತಿನ ಫೈರಿಂಗ್ ನಡೆಸಿದ್ದಾರೆ.

ಆರೋಪಿ ಗಾಯಗೊಂಡಿದ್ದಾರೆ ಘಟನೆಯಲ್ಲಿ ಗಾಯಗೊಂಡ ಸಬ್‌ಇನ್‌ಸ್ಪೆಕ್ಟರ್ ಶರತ್ ಹಾಗೂ ಮುಖ್ಯಪೇದೆ ರಫೀಕ್‌ನನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ಮೇ 28ರಂದು ಬೆಳಗಿನ ಜಾವ 5.30ಗಂಟೆ ಸುಮಾರಿಗೆ ಚಂದ್ರಶೇಖರ್ ಎಂಬುವವರು ರಸ್ತೆಯಲ್ಲಿ ಹೋಗುತ್ತಿದ್ದಾಗ ಅವರಿಗೆ ಆಯುಧದಿಂದ ಇರಿದು ಅವರಿಂದ 60ಗ್ರಾಂ ಚಿನ್ನದ ಸರವನ್ನು ದೋಚಿದ್ದ ಅವನ ವಿರುದ್ಧ ಪ್ರಕರಣ ದಾಖಲಾಗಿತ್ತು.












Click it and Unblock the Notifications