ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಯ್ಸಳ ಸಿಬ್ಬಂದಿಗೆ ವಾರ್ನಿಂಗ್ ಕೊಟ್ಟ ಕಮಲ್ ಪಂತ್

|
Google Oneindia Kannada News

ಬೆಂಗಳೂರು, ಡಿಸೆಂಬರ್ 09: ಸಾರ್ವಜನಿಕರ ದೂರಿಗೆ ಸ್ಪಂದಿಸದೇ ಹೊಯ್ಸಳ ವಾಹನ ಸಿಬ್ಬಂದಿ ಸಬೂಬು ಹೇಳುತ್ತಿರುವುದು ಗಮನಕ್ಕೆ ಬಂದಿದ್ದು, ನಗರದ ಎಲ್ಲಾ ಪೊಲೀಸ್ ಠಾಣೆಗಳಿಗೆ ಪೊಲೀಸ್ ಕಮಿಷನರ್ ಕಮಲ್ ಪಂತ್ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಬೆಂಗಳೂರು ನಗರದ ಎಲ್ಲಾ ಠಾಣೆಗಳಿಗೆ ಈ ಕುರಿತು ಸುತ್ತೋಲೆಯನ್ನು ಹೊರಡಿಸಿರುವ ಪೊಲೀಸ್ ಆಯುಕ್ತ ಕಮಲ್ ಪಂತ್, ಕಾರಣಗಳನ್ನು ಹೇಳಿ ತಪ್ಪಿಸಿಕೊಳ್ಳಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನ ವಾಹನಗಳ ಮಾಲೀಕರೆ ಇಲ್ಲಿ ಗಮನಿಸಿ!ಬೆಂಗಳೂರಿನ ವಾಹನಗಳ ಮಾಲೀಕರೆ ಇಲ್ಲಿ ಗಮನಿಸಿ!

ಇತ್ತೀಚೆಗೆ ನಡೆದ ಮಾಸಿಕ ಜನ ಸಂರ್ಪಕ ಸಭೆಯಲ್ಲಿ ಹೊಯ್ಸಳ ವಾಹನ ಸಿಬ್ಬಂದಿ ವಿರುದ್ಧ ಸಾರ್ವಜನಿಕರಿಂದ ದೂರು ಕೇಳಿಬಂದಿತ್ತು. ನಮಗೇನಾದರೂ ತೊಂದರೆಯಾಗಿ ಕರೆ ಮಾಡಿದರೆ, ಇದು ನಮ್ಮ ಲಿಮಿಟ್ಸ್ ನಲ್ಲಿಲ್ಲ, ದೂರು ಇದ್ದರೆ ಠಾಣೆಗೆ ಬನ್ನಿ ಎನ್ನುತ್ತಾರೆ. ಕೆಲವೊಮ್ಮೆ ಬರುವುದೇ ಇಲ್ಲ ಎಂದು ಸಾರ್ವಜನಿಕರು ದೂರಿದ್ದರು.

 Bengaluru: Police Commissioner Warned Hoysala Staff

Recommended Video

Virat Kohli ಮಾಡಿದ ತಪ್ಪಿಗೆ ಇಡೀ ತಂಡಕ್ಕೆ ಶಿಕ್ಷೆ | Oneindia Kannada

ಈ ಹಿನ್ನೆಲೆಯಲ್ಲಿ ಎಚ್ಚರಿಕೆ ನೀಡಿದ ಪೊಲೀಸ್ ಆಯುಕ್ತರು, ಸಾರ್ವಜನಿಕರ ದೂರಿಗೆ ಸ್ಪಂದಿಸದೇ ಸಬೂಬು ಹೇಳುತ್ತಿರುವ ಹೊಯ್ಸಳ ವಾಹನ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇಂಥ ಕಾರಣಗಳನ್ನು ಜನರಿಗೆ ನೀಡಬೇಡಿ. ದೂರು ಬಂದ ಏಳು ನಿಮಿಷದ ಒಳಗೆ ರೀಚ್ ಆಗಬೇಕು. ಲಿಮಿಟ್ ಚೆಕ್ ಮಾಡದೇ ಕಾರ್ಯನಿರ್ವಹಿಸಿ ನಂತರ ವರದಿ ನೀಡಬೇಕು ಎಂದು ಸೂಚಿಸಿದ್ದಾರೆ. ಸಂಬಂಧಪಟ್ಟ ಠಾಣೆಯ ಇನ್ಸ್ ಪೆಕ್ಟರ್ ಗಳಿಗೆ ಅಲರ್ಟ್ ಆಗಲು ಸೂಚನೆ ನೀಡಿದ್ದಾರೆ.

English summary
Police Commissioner Kamal Pant warned hoysala staff to work hard without giving any reasons
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X