ಯುವತಿ ಜೊತೆಗೆ ಸಂಬಂಧವಿದೆ ಎಂದು ಮದುವೆ ಮುರಿಯಲು ಯತ್ನಿಸಿದವ ಸೆರೆ

ಬೆಂಗಳೂರು, ಜನವರಿ 24: ಯುವತಿ ಜೊತೆಗೆ ತನಗೆ ಸಂಬಂಧವಿದೆ ಎಂದು ಸುಳ್ಳು ಹೇಳಿ ಮದುವೆ ನಿಲ್ಲಿಸಲು ಯತ್ನಿಸಿದವನನ್ನು ವೈಯಾಲಿಕಾವಲ್ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಮಲ್ಲೇಶ್ವರದ ನಿವಾಸಿ ಗೌತಮ್(25) ಬಂಧಿತ. ಮಲ್ಲೇಶ್ವರದ ನಿವಾಸಿ 24 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಆಧಾರದಲ್ಲಿ ಅರೋಪಿಯನ್ನು ಬಂಧಿಸಿದ್ದು, ಸದ್ಯ ಜಾಮೀನಿನ ಮೇಲೆ ಹೊರ ಬಂದಿದ್ದಾನೆ.

2018ರಲ್ಲಿ ಕಾರ್ಯಕ್ರಮವೊಂದರಲ್ಲಿ ಯುವತಿಗೆ ಗೌತಮ್ ಪರಿಚಯವಾಗಿದ್ದ, ಯುವತಿ ಮೊಬೈಲ್ ನಂಬರ್ ಪಡೆದು ಆಗಾಗ ಮಾತನಾಡುತ್ತಿದ್ದ, ಕೆಲ ದಿನಗಳ ನಂತರ ಪ್ರೇಮ ನಿವೇದನೆ ಮಾಡಿದ್ದ, ಆರೆ ಯುವತಿ ತಿರಸ್ಕರಿಸಿದ್ದಳು. ಇದರಿಂದ ಕೋಪಗೊಂಡ ಗೌತಮ್ ದೈಹಿಕ ಸಂಪರ್ಕಕ್ಕೆ ಸಹಕರಿಸದಿದ್ದರೆ ರೇಪ್ ಮಾಡಿ ಮುಖಕ್ಕೆ ಆಸಿಡ್ ಹಾಕಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ.

Police arrested a youth who tried to cancel friend marriage

2018ರ ಸೆ.5ರಂದು ಯುವತಿಯ ಪಾಲಕರನ್ನು ಭೇಟಿಯಾದ ಗೌತಮ್ ಮಗಳನ್ನು ವಿವಾಹ ಮಾಡಿಕೊಡಿ ಇಲ್ಲದಿದ್ದರೆ ತೊಂದರೆ ಕೊಡುವುದಾಗಿ ತಿಳಿಸಿದ್ದ ಆದರೆ ಪಾಲಕರು ತಲೆ ಕೆಡಿಸಿಕೊಂಡಿರಲಿಲ್ಲ, ಆದರೆ ಯುವತಿಯ ಭಾವಿ ಪತಿಗೆ ಬೇರೊಬ್ಬ ಯುವಕನ ಜೊತೆ ನಿಶ್ಚಿತಾರ್ಥ ನಡೆದಿತ್ತು.

ಜನವರಿ 6ರಂದು ಯುವತಿ ಭಾವಿ ಪತಿಗೆ ಕರೆ ಮಾಡಿದ ಗೌತಮ್ ತನಗೆ ಆಕೆಯೊಂದಿಗೆ ಸಂಬಂಧವಿದೆ ಇಬ್ಬರೂ ಮೂರು ದಿನ ಜೊತೆಯಲ್ಲೇ ಕಳೆದಿದ್ದೇವೆ ನನ್ನ ಬಳಿ ಇದಕ್ಕೆ ಸಾಕ್ಷಿಗಳಿವೆ ಎಂದು ಹೇಳಿದ್ದ, ಬಳಿಕ ವಿವಾಹ ರದ್ದು ಮಾಡಲು ಯತ್ನಿಸಿದ್ದ , ಈತನನ್ನು ಯುವತಿ ಕೊಟ್ಟ ದೂರಿನ ಮೇರೆಗೆ ಬಂಧಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+