ಬೆಳಿಗ್ಗೆ 8 ಗಂಟೆಗೆ ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ

ಬೆಂಗಳೂರು, ಸೆಪ್ಟೆಂಬರ್ 07: ಬೆಂಗಳೂರಿನ ಇಸ್ರೋ ಕಂಟ್ರೋಲ್ ಸೆಂಟರ್ ನಲ್ಲಿ ಶನಿವಾರ ಬೆಳಿಗ್ಗೆ 8:00 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಚಂದ್ರಯಾನ 2 ಕೊನೆಯ ಕ್ಷಣದಲ್ಲಿ ಸಂವಹನ ಕಳೆದುಕೊಂಡಿದ್ದರೂ, ಅದು ತಮ್ಯವನ್ನು ಯಶಸ್ವಿಯಾಗಿ ತಲುಪಿರಬಹುದು ಎಂದು ಅಂದಾಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿ, ಧೈರ್ಯ ನೀಡಿದ ಮೋದಿ, ಇಂದು ಇಸ್ರೋದ ಸಾಧನೆಯ ಕುರಿತು ಮಾತನಾಡಬಹುದು ಎಂದು ನಿರೀಕ್ಷಿಸಲಾಗಿದೆ.

PM Narendra Modi to address nation at 8 am today from ISRO

ತನ್ನ ಗುರಿ ತಲುಪಲು ಕೆಲವೇ ಕಿ.ಮೀ.ದೂರದಲ್ಲಿದ್ದ ಚಂದ್ರಯಾನ ನೌಕೆ ಸಂಪರ್ಕ ಕಳೆದುಕೊಂಡಿತು. ಆದರೆ ಇಸ್ರೋದ ಅವಿರತ ಶ್ರಮಕ್ಕೆ ಇಡೀ ದೇಶವೂ ಅಭಿನಂದನೆ ಸಲ್ಲಿಸಿದ್ದಲ್ಲದೆ, ಭರವಸೆ ಕಳೆದುಕೊಳ್ಳಬೇಡಿ ಎಂದು ಅಭಯ ನೀಡಿದೆ.

ಪ್ರಧಾನಿ ಮೋದಿ ಅವರೂ, "ಧೃತಿಗೆಡಬೇಡಿ, ದೇಶವೇ ನಿಮ್ಮೊಂದಿಗಿದೆ. ನೀವು ಮಾಡಿರುವ ಸಾಧನೆ ಕಡಿಮೆಯೇನಲ್ಲ. ದೇಶ ಸಂತಸಗೊಳ್ಳುವಂಥ ಕೆಲಸ ಮಾಡಿದ್ದೀರಿ" ಎಂದು ಇಸ್ರೋ ವಿಜ್ಞಾನಿಗಳಲ್ಲಿ ಧೈರ್ಯ ತುಂಬಿದ್ದರು.

ಶುಕ್ರವಾರ ರಾತ್ರಿ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿ, ಇಸ್ರೋ ವಿಜ್ಞಾನಿಗಳೊಂದಿಗೆ ಚಂದ್ರಯಾನ 2 ರ ನೇರಪ್ರಸಾರವನ್ನು ವೀಕ್ಷಿಸುತ್ತಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಉಂಟಾದ ಅನಿರೀಕ್ಷಿತ ಬೆಳವಣಿಗೆಯಿಂದ ನಿರಾಸೆ ಅನುಭವಿಸಿದ ಇಸ್ರೋ ವಿಜ್ಞಾನಿಗಳಿಗೆ ಧೈರ್ಯ ತುಂಬಿದ ಮೋದಿ, ಇಂದು ಸಹ ಚಂದ್ರಯಾನ 2 ರ ಬಗ್ಗೆ ಮಾತನಾಡಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+