Modi Food Menu: ಕರ್ನಾಟಕದಲ್ಲಿ ಪ್ರಧಾನಿ ಊಟ-ಉಪಹಾರದಲ್ಲಿ ಏನೆಲ್ಲಾ ಇದೆ?

ಬೆಂಗಳೂರು, ಜೂನ್ 20: ಎರಡು ದಿನದ ಕರ್ನಾಟಕ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯ ಊಟದ ಮೆನು ಸಿದ್ಧವಾಗಿದೆ. ಸೋಮವಾರ ಸಂಜೆ ವೇಳೆಗೆ ಮೈಸೂರಿಗೆ ತಲುಪಲಿರುವ ಪ್ರಧಾನಿಗೆ ಶುದ್ಧ ಸಸ್ಯಹಾರಿ ಊಟ ಅಣಿಯಾಗಿದೆ.

ಪ್ರಧಾನಿ ನರೇಂದ್ರ ಮೋದಿಗಾಗಿ ಸಿದ್ಧವಾಗುತ್ತಿರುವ ಆಹಾರದಲ್ಲಿ ಕಡಿಮೆ ಸಕ್ಕರೆ ಹಾಗೂ ಮಿತವಾಗಿ ಮಸಾಲೆಯನ್ನು ಬಳಸುವುದಕ್ಕೆ ಸೂಚಿಸಲಾಗಿದೆ. ಮಂಗಳವಾರ ಬೆಳಗ್ಗೆಯ ಉಪಹಾರಕ್ಕಾಗಿ ಅವಲಕ್ಕಿ, ಉಪ್ಪಿಟ್ಟು, ಇಡ್ಲಿ-ಸಾಂಬಾರ್, ಬ್ರೆಡ್ ಬಟರ್ ಮತ್ತು ಮಿಕ್ಸ್ ಫ್ರೂಟ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಮಂಗಳವಾರ ಬೆಳಗ್ಗೆ 8.30ಕ್ಕೆ ಅರಮನೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಅರಮನೆ ನಿವಾಸದಲ್ಲಿ ಪ್ರಧಾನಿಗೆ ಪ್ರಮೋದಾ ದೇವಿ ಒಡೆಯರ್ ಸ್ವಾಗತ ಕೋರಲಿದ್ದಾರೆ. ತದನಂತರದಲ್ಲಿ ಅರಮನೆಯಲ್ಲೇ ಉಪಹಾರ ಸವಿಯಲಿದ್ದಾರೆ. ತಿಂಡಿಯ ಜೊತೆಗೆ ಮೈಸೂರು ಬ್ರ್ಯಾಂಡಿನ ಮೈಸೂರ್ ಪಾಕ್ ಸಿಹಿ ತಿನಿಸುಗಳನ್ನು ತಯಾರಿಸಲಾಗುತ್ತಿದೆ.

PM Narendra Modi food menu during Karnataka visit

ಪ್ರಧಾನಿ ನರೇಂದ್ರ ಮೋದಿ ಮಧ್ಯಾಹ್ನದ ಊಟ: ಪ್ರಧಾನಮಂತ್ರಿ ನರೇಂದ್ರ ಮೋದಿಯ ಊಟಕ್ಕೂ ಭರ್ಜರಿ ಭೂರಿ ಭೋಜನವನ್ನು ಸಿದ್ಧಪಡಿಸಲಾಗುತ್ತಿದೆ. ಸಸ್ಯಹಾರಿ ಸೂಪ್, ಮಸಾಲಾ ಮಜ್ಜಿಗೆ, ಜೀರಾ ರೈಸ್, ರೋಟಿ, ದಾಲ್ ಹಾಗೂ ಮಿಕ್ಸ್ ಫ್ರೂಟ್ ಅನ್ನು ಅಣಿಪಡಿಸಲಾಗುತ್ತಿದೆ. ಇದರ ಜೊತೆಗೆ ಕಿಚಡಿ, ಗುಜರಾತಿ ಕರಿ, ರೋಟಿ, ದಾಲ್, ರೈಸ್, ಎರಡು ರೀತಿಯ ಸಬ್ಜಿ, ಮೊಸರಿನ ಜೊತೆಗೆ ಮಿಕ್ಸ್ ಫ್ರೂಟ್ ಅನ್ನು ಸಿದ್ಧಪಡಿಸಲಾಗಿದೆ.

ಪ್ರಧಾನಿಗಾಗಿ ವಿಶೇಷ ಮೈಸೂರು ಪಾಕ್ ಅಣಿ: ರಾಜ್ಯ ಪ್ರವಾಸದಲ್ಲಿರುವ ನರೇಂದ್ರ ಮೋದಿಗಾಗಿ ಭರ್ಜರಿ ಊಟ-ಉಪಹಾರದ ಜೊತೆಗೆ ವಿಶೇಷವಾಗಿ ಮೈಸೂರು ಪಾಕ್ ಅನ್ನು ತಯಾರಿಸಲಾಗುತ್ತಿದೆ. ಮೈಸೂರು ಅರಸರ ಕಾಲದಲ್ಲಿ ಮೈಸೂರು ಪಾಕ್ ತಯಾರಿಸುತ್ತಿದ್ದ ಕುಟುಂಬದವರು, ಪ್ರಧಾನಿಗಾಗಿ ವಿಶೇಷವಾಗಿ ಮೈಸೂರು ಪಾಕ್ ಅನ್ನು ತಯಾರಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+