Pizza 4P's ಬೆಂಗಳೂರಲ್ಲಿ ಶಾಂತಿಗಾಗಿ ಪಿಜ್ಜಾ ಎಂದಾಯ್ತು: ಜಪಾನ್ ಪಿಜ್ಜಾ ಸಂಸ್ಥೆ ಹೇಳಿದ್ದೇನು - ಕನ್ನಡಿಗರು ಏನಂದ್ರು
Pizza 4P's: ಬೆಂಗಳೂರಲ್ಲಿ ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದ ಮಾಡುವ ವಿಚಾರದಲ್ಲಿ ಹಲವರು ಎಡವಟ್ಟುಗಳನ್ನು ಮಾಡಿಕೊಳ್ಳುತ್ತಿರುವುದಿದೆ. ಅದರಲ್ಲೂ ನಾಮಫಲಕದಲ್ಲಿ ಕಡ್ಡಾಯ ಕನ್ನಡ ಬಳಕೆ ಮಾಡಬೇಕು ಎಂದು ಹೇಳಿದ ಮೇಲೆ ಹಲವು ಕಂಪನಿಗಳು ಒಬ್ಬ ಕನ್ನಡ ಅನುವಾದಕರನ್ನೂ ನೇಮಕ ಮಾಡಿಕೊಳ್ಳದೆ ತಪ್ಪುಗಳನ್ನು ಮಾಡಿಕೊಳ್ಳುತ್ತಿವೆ. ಈ ತಪ್ಪುಗಳಿಂದ ಕೆಲವೊಂದು ಕಂಪನಿಗಳು ನಗೆಪಾಟಲಿಗೆ ಗುರಿಯಾಗುವುದು ಸಹ ಇದೆ.
Pizza 4P's ಎನ್ನುವ ಪಿಜ್ಜಾ ಸಂಸ್ಥೆಯು ನಾಮಫಲಕದಲ್ಲಿ ಶಾಂತಿಗಾಗಿ ಪಿಜ್ಜಾ ಎಂದು ಬರೆದುಕೊಂಡಿರುವುದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕನ್ನಡಿಗರು ಈ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಸ್ತಾಪಿಸಿ ಹಾಸ್ಯ ಮಾಡುತ್ತಿರುವಾಗಲೇ ಜಪಾನ್ ಮೂಲದ ಪಿಜ್ಜಾ ಸಂಸ್ಥೆ Pizza 4P's ಇದಕ್ಕೆ ಪ್ರತಿಕ್ರಿಯೆ ನೀಡಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ.

ಮೊದಲಿಗೆ ಈ ವಿಚಾರವನ್ನು Out of Context Kannada (@OutOfContextKan) ಎನ್ನುವ ಖಾತೆಯಿಂದ ಹಂಚಿಕೊಳ್ಳಲಾಗಿತ್ತು. ಇದಕ್ಕೆ ಎ.ಆರ್. ಜೋಶಿ ಎನ್ನುವವರು, ಶಾಂತಿಗಾಗಿ ಪಿಜ್ಜಾ Pizza 4P's ✅ or ❎. ಪಿಜ್ಜಾ 4P's ಎಂಬ ಹೆಸರು ಅಧಿಕೃತವಾಗಿ "ಪಿಜ್ಜಾ ಫಾರ್ ಪೀಸ್" ಅನ್ನು ಸೂಚಿಸುತ್ತದೆ.
ಆದ್ದರಿಂದ ಕನ್ನಡ ಅನುವಾದ "ಶಾಂತಿಗಾಗಿ ಪಿಜ್ಜಾ" ಸೂಕ್ತವಾಗಿದೆ.. ಇದು ನೇಮ್ ಕಮ್ ಬ್ರಾಂಡ್ ಕಮ್ ಮಿಷನ್ ಸ್ಟೇಟ್‌ಮೆಂಟ್ ಆದರೆ "ಇದು ಒಂದು ಬ್ರ್ಯಾಂಡ್, ಅನುವಾದ ಅಗತ್ಯವಿಲ್ಲ, ಲಿಪ್ಯಂತರ ಮಾತ್ರ ಇರಬೇಕು" ಎಂಬ ವಾದವೂ ಸರಿಯಾಗಿದೆ.
ಬ್ರ್ಯಾಂಡ್‌ನ ದೃಷ್ಟಿಕೋನವು "ಜಗತ್ತನ್ನು ಶಾಂತಿಗಾಗಿ ನಗುವಂತೆ ಮಾಡುವುದು", ಸಂಸ್ಥಾಪಕ ಶ್ರೀ ಯೋಸುಕೆ ಮಸುಕೊ ತಮ್ಮ ಆಪ್ತ ಸ್ನೇಹಿತರೊಬ್ಬರನ್ನು ಕಳೆದುಕೊಂಡ ನಂತರ ಸ್ನೇಹಿತರೊಂದಿಗೆ ಮನೆಯಲ್ಲಿ ತಯಾರಿಸಿದ ಪಿಜ್ಜಾಗಳನ್ನು ಹಂಚಿಕೊಳ್ಳುವಲ್ಲಿ ಸಾಂತ್ವನ ಕಂಡುಕೊಂಡ ನಂತರ ಈ ಧ್ಯೇಯವನ್ನು ಪ್ರಾರಂಭಿಸಿದರು. ವೈಯಕ್ತಿಕ ಅಭಿಪ್ರಾಯವೆಂದರೆ ಅದು ಸರಿ ಎಂದು ಹೇಳಿದ್ದಾರೆ.
ಕನ್ನಡ ಭಾಷೆಗೆ ಆದ್ಯತೆ ಕೊಟ್ಟಿದ್ದೇವೆ ಎಂದ ಸಂಸ್ಥೆ
Pizza4P's ಸಂಸ್ಥೆಯ ಸಂಸ್ಥಾಪಕರಾದ Masuko ಎನ್ನುವವರು Bengaluruನಲ್ಲಿ ಸ್ಥಳೀಯ ಭಾಷೆ ಕನ್ನಡದಲ್ಲಿ ಫಲಕ ಹಾಕುವುದು ಕಡ್ಡಾಯವಾಗಿದೆ. ಕಂಪನಿಯೊಳಗೆ ಇದನ್ನು "Pizza 4P's4P's" ಎಂದು ಬರೆಯಬೇಕಾ ಅಥವಾ "for peace" ಎಂದು ಅನುವಾದಿಸಬೇಕಾ ಎಂಬ ಬಗ್ಗೆ ಭಿನ್ನಾಭಿಪ್ರಾಯ ಇತ್ತು. ಆದರೆ ನಮ್ಮ ಬ್ರ್ಯಾಂಡ್ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು "for peace" ಅನ್ನು ಆಯ್ಕೆ ಮಾಡಿದೆವು. ಇದಕ್ಕಾಗಿ ಕೆಲವು ಟೀಕೆಗಳು ಬರುತ್ತಿದ್ದರೂ, "ಇದೇ ಸರಿಯಾದದ್ದು" ಎಂದು ಹೇಳುವ ಭಾರತೀಯರೂ ಇದ್ದಾರೆ. ಅದು ನನಗೆ ತುಂಬಾ ಸಂತೋಷ ಕೊಡುತ್ತದೆ 😊🙏 #Pizzaforpeace ಎಂದು ಬರೆದುಕೊಂಡಿದ್ದಾರೆ.
ನೆಟ್ಟಿಗರು ಹೇಳಿದ್ದೇನು
ಕರ್ನಾಟಕ ಸರ್ಕಾರವು ನಿಮ್ಮ ಬ್ರಾಂಡ್ ಹೆಸರನ್ನು ಕನ್ನಡದಲ್ಲಿ ಬರೆಯಲು ಆದೇಶಿಸಿದೆ ಎಂದು ನಾನು ಭಾವಿಸುತ್ತೇನೆ ಮತ್ತು ಯುಎ ಬ್ರಾಂಡ್ ಹೆಸರನ್ನು ಕನ್ನಡಕ್ಕೆ ಭಾಷಾಂತರಿಸಿ ಬರೆಯಬೇಡಿ. Pizza 4P ಗಳು ಪಿಜ್ಜಾ ಫಾರ್ ಪೀಸ್ ಅಥವಾ ಪಿಜ್ಜಾ 4 ಪೀಸ್ ಬದಲಿಗೆ ಶಾಂತಿಗಾಗಿ ಪಿಜ್ಜಾ ಎಂದು ಅನುವಾದ ಮಾಡುತ್ತವೆ ಎಂದು ಗೌತಮ್ ಎನ್ನುವವರು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬ ನೆಟ್ಟಿಗರು, ಟೀಕೆಗಳನ್ನು ನಿರ್ಲಕ್ಷಿಸಿ. ನೀವು ಕನ್ನಡ ಹೆಸರಿಗೆ ಚಿಂತನೆಯನ್ನು ಸೇರಿಸಿದ್ದೀರಿ ಮತ್ತು ಅದನ್ನು ಸ್ಥಳೀಯರಿಗೆ ಅರ್ಥಪೂರ್ಣಗೊಳಿಸಿದ್ದೀರಿ, ಅಷ್ಟೇ ಮುಖ್ಯ. ನಗರದಲ್ಲಿ ಮತ್ತು ಭಾರತದಲ್ಲಿ ನಿಮಗೆ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.
-
Prem: ಆಗ ಅಪ್ಪಾಜಿ-ಅಂಬರೀಷಣ್ಣ ಇದ್ರು, ಈಗ ಯಾರಿದ್ದಾರೆ; ಕೆಡಿ ವಿವಾದ ಆದಾಗಲೂ ಯಾರೂ ಸಪೋರ್ಟ್ಗೆ ಬರಲಿಲ್ಲ: ಪ್ರೇಮ್ ಬೇಸರ -
Dr BR Ambedkar: ಚುನಾವಣೆಯಲ್ಲಿ ಡಾ.ಬಿ ಆರ್ ಅಂಬೇಡ್ಕರ್ ಸೋಲಿಸಿದ್ದು ಕಾಂಗ್ರೆಸ್ ಪಕ್ಷವಲ್ಲ: ಸಿದ್ದರಾಮಯ್ಯ -
Viral: ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಪಾದಚಾರಿಗಳೇ ಕಾರಣವೆಂದ ಸಂಸ್ಥಾಪಕ: ಕಿಡಿಕಾರಿದ ನೆಟ್ಟಿಗರು -
Amruthadhare Serial: ಜೈದೇವ್ ಅಟ್ಟಹಾಸಕ್ಕೆ ಬ್ರೇಕ್ ಬೇಕು: ಗೌತಮ್ ದಿವಾನ್ಗೆ ಆಕ್ಷನ್ ಕೊಡಿ ಎಂದ ವೀಕ್ಷಕರು -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ












Click it and Unblock the Notifications