ಸಿದ್ದರಾಮಯ್ಯ ಊಬ್ಲೋ ವಾಚ್: ಪಿಐಎಲ್ ಹಿಂಪಡೆದ ಅನುಪಮಾ ಶೆಣೈ
ಬೆಂಗಳೂರು, ಜೂನ್ 11: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಡಿವೈಎಸ್‌ಪಿ ಅನುಪಮಾ ಶೆಣೈ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಾಪಾಸ್ ಪಡೆಯಲಾಗಿದ್ದು, ಊಬ್ಲೋ ವಾಚ್ ಪ್ರಕರಣವು ಸಾರ್ವಜನಿಕ ಹಿತಾಸಕ್ತಿ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಊಬ್ಲೋ ವಾಚ್ ವಿವಾದ ಕುರಿತ ಸಮಗ್ರ ಲೇಖನಗಳು
ಸಿದ್ದರಾಮಯ್ಯ ಸುಬಾರಿ ವಾಚ್ ಉಡುಗೊರೆ ಪಡೆದಿದ್ದ ಪ್ರಕರಣ ತನಿಖೆ ನಡೆಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮಾಜಿ ಡಿವೈಎಸ್‌ಪಿ ಅನುಪಮಾ ಶೆಣೈ ಹಿಂಪಡೆದಿದ್ದಾರೆ.
ಇದನ್ನು ಸಾರ್ವಜನಿಕ ಹಿತಾಸಕ್ತಿ ಆಗಿ ಪರಿಗಣಿಸುವುದು ಹೇಗೆ ಎಂದು ಪ್ರಶ್ನಿಸಿದ ಹೈಕೋರ್ಟ್ ಬೇರೆ ಯಾವುದಾದರೂ ಮಾರ್ಗದ ಅಡಿಯಲ್ಲಿ ಕ್ರಮಕ್ಕೆ ಮುಂದಾಗಲು ಹೈಕೋರ್ಟ್ ಅರ್ಜಿದಾರರಿಗೆ ಅವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ಅನುಪಮಾ ಶೆಣೈ ಪರ ವಕೀಲ ಪಿಐಎಲ್‌ನ್ನು ಹಿಂಪಡೆದಿದ್ದಾರೆ.

ಡಾ. ಗಿರೀಶ್ ಚಂದ್ರವರ್ಮಾ ಎಂಬವರಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದುಬಾರಿ ವಾಚ್ ಅನ್ನು ಉಡುಗೊರೆಯಾಗಿ ಪಡೆದಿದ್ದಾರೆ ಎಂಬ ಆರೋಪವಿದ್ದು, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಅನುಪಮಾ ಶೆಣೈ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದೇ ವಾಚ್ ವಿಚಾರವಾಗಿ ಸಿದ್ದರಾಮಯ್ಯ ಊಬ್ಲೋ ವಾಚ್ ಪ್ರಕರಣ ಎಂಬ ಮೋದಿ ಆರೋಪ ವಿಚಾರ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮೋದಿ ವಿರುದ್ಧ ನೂರು ಕೋಟಿ ಮಾನನಷ್ಟ ಮೊಕದ್ದಮೆಹಾಕಿದ್ದರು.












Click it and Unblock the Notifications