ಮಹಿಳೆಯರ ಭಾವಯಾನ ತೆರೆದಿಟ್ಟ ಸುದ್ದಿ ಚಿತ್ರಗಳು
ಬೆಂಗಳೂರು, ಆಗಸ್ಟ್, 24 : ಜಗತ್ತಿನಲ್ಲಿ ಎಲ್ಲರದೂ ನಾನಾ ತೆರನಾದ ಪಯಣ. ಅದರಲ್ಲಿ ಮಹಿಳೆಯರದು ಯಾವಾಗಲೂ ಚೌಕಟ್ಟಿನ ಬದುಕು. ಆದರೂ ಬದುಕಿನಲ್ಲಿ ಇವರು ಉಣಿಸುತ್ತಿರುವ ಪ್ರೀತಿ, ಮಮತೆ, ಬಾಂಧವ್ಯದಲ್ಲಿ ಕೊಂಚವೂ ಕೊರತೆಯಿಲ್ಲ.
ಜೀವನದ ಎಡರು ತೊಡರುಗಳಲ್ಲಿ, ಸ್ವಾವಲಂಬಿ ಬದುಕನ್ನು ಕಂಡುಕೊಳ್ಳಲು ಪ್ರತಿಯೊಬ್ಬ ಮಹಿಳೆಯೂ ಪ್ರಯತ್ನ ಪಡುತ್ತಿರುವುದು, ನಾನಾ ಕ್ಷೇತ್ರಗಳಲ್ಲಿ ತನ್ನ ಛಾಪನ್ನು ಮೂಡಿಸಲು ತೋರಿಸುತ್ತಿರುವ ಇವರ ಸ್ಥೈರ್ಯ ಮೆಚ್ಚುವಂತದ್ದು.[ಮಹಿಳೆ ಸುರಕ್ಷತೆಗೆ ಹೊಸ ಆಪ್ ಜಾರಿಗೆ ತಂದ ಭಾರತೀಯ ರೈಲ್ವೆ]
ಇಲ್ಲಿರುವ ಪ್ರತಿಯೊಂದು ಭಾವಚಿತ್ರಗಳು ಮಹಿಳೆಯರ ಬದುಕಿನ ನಾನಾ ಹೆಜ್ಜೆಗಳು, ಹಲವು ಭಾವ ತರಂಗಗಳು. ತಾಯಿಯ ಪ್ರೀತಿ, ತಂಗಿಯ ಹಾರೈಕೆ, ಕ್ರಿಯಾಶೀಲ ಯೋಚನೆ, ಭಗವಂತನೊಂದಿಗಿನ ಬದುಕು ಹೀಗೆ ನಾನಾ ಸಂಗತಿಗಳನ್ನು ಅನಾವರಣಗಳಗೊಳಿಸುವ ಚಿತ್ರ ಪ್ರಪಂಚ ಇಲ್ಲಿದೆ ನೋಡಿ.[ಚಿತ್ರಗಳು: ಪಿಟಿಐ]

ಮನೆಯಿಲ್ಲದಿದ್ದರೇನು ಅಮ್ಮನ ಪ್ರೀತಿ ಇದೆ.
ಆಹಾ! ನನ್ನ ಅಮ್ಮನ ಕೈ ತುತ್ತು. ಅಸ್ಸಾಂನಲ್ಲಿ ಸುರಿದ ಧಾರಕಾರ ಮಳೆಗೆ ಮನೆ ಕಳೆದು ಕೊಂಡು ಒಂದು ಸಣ್ಣ ಟೆಂಟ್ ನಲ್ಲಿ ಇರುವ ತಾಯಿ ತನ್ನ ಮಗನಿಗೆ ತುತ್ತು ಕೊಡುತ್ತಿರುವುದು.

ನೋಡಿ ನನ್ನ ಗಣಪ ಹೆಂಗವ್ನೆ
ಗಣಪತಿ ಬರ್ತಾನೆ, ಕಾಯಿ ಕಡುಬು ತಿನ್ತಾನೆ..ಸೆಪ್ಟೆಂಬರ್ 17ರ ಗುರುವಾರದಂದು ಬರುವ ಗಣೇಶ ಚತುರ್ಥಿಯ ಸಂಭ್ರಮಾಚಾರಣೆಗೆ ಇನ್ನು 20 ದಿನಗಳು ಮಾತ್ರ ಉಳಿದಿವೆ. ಆಗಲೇ ಗಣಪ ವಿವಿಧ ಶೈಲಿಯಲ್ಲಿ ನಾನಾ ಕಡೆ ಕಂಗೊಳಿಸುತ್ತಿದ್ದಾನೆ. ಮಣ್ಣಿನಿಂದ ಮಾಡಿದ ಗಣಪತಿಗೆ ಬಣ್ಣದಿಂದ ಅಲಂಕೃತಗೊಳಿಸುತ್ತಿರುವ ಮಹಿಳಾ ಕಲಾವಿದೆ.

ಅಣ್ಣ ತಂಗಿಯರ ಈ ಬಂಧ ಜನುಜನುಮಗಳ ಅನುಬಂಧ
ನನ್ನ ಅಣ್ಣನಿಗೆ ಯಾವ ರಾಖಿ ತಗೊಂಡ್ಲಿ, ನನ್ನ ಅಣ್ಣನಿಗೆ ಯಾವ ಬಣ್ಣ ಒಪ್ಪುತ್ತೆ ಎಂದು ಮನದಲ್ಲೇ ಯೋಚನೆ ಮಾಡುತ್ತಾ, ಶನಿವಾರ ಆಗಸ್ಟ್, 29ರ ಶನಿವಾರದಂದು ಇರುವ ರಕ್ಷಾಬಂಧನಕ್ಕೆ ತನ್ನ ಅಣ್ಣನಿಗಾಗಿ ರಾಖಿ ಖರೀದಿಸುವಲ್ಲಿ ನಿರತವಾದ ಮಹಿಳೆ.

ನಾನು ಅಕ್ಷರ ಕಲಿತ್ತಿದ್ದೀನಿ, ನೀವು ಕಲಿಯಿರಿ.
ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಈ ಮಾತನ್ನು ಅರಿತ ಸಾಕ್ಷರತಾ ಮಿಷನ್ ಮಹಿಳೆಯರಿಗಾಗಿ ಪಶ್ಚಿಮ ಬಂಗಾಳದಲ್ಲಿ ಸಾಕ್ಷರತಾ ಯೋಜನೆ ಆಯೋಜಿಸಿತ್ತು. ಇದರಲ್ಲಿ ಪಾಲ್ಗೊಂಡ ಮಹಿಳೆಯರು ಕಲಿಕೆಯಲ್ಲಿ ತಲ್ಲೀನವಾಗಿರುವುದು.

ಮನೆಗೊಂದು ಹೆಣ್ಣು ಮಗುವಿರಲಿ
ಮನೆಗೊಂದು ಮಗುವಿರಲಿ ಎಂಬ ಮಾತು ಇದೀಗ ಮನೆಗೊಂದು ಮಗುವಿರಲಿ, ಅದು ಗಂಡು ಮಗುವೇ ಆಗಿರಲಿ ಎಂಬ ಮನೋಭಾವ ಅಧಿಕವಾಗಿದ್ದು, ಈ ಹಿನ್ನೆಲೆಯಲ್ಲಿ ಹೆಣ್ಣು ಭ್ರೂಣ ಹತ್ಯೆಗಳು ಎಗ್ಗಿಲ್ಲದೆ ಸಂಭವಿಸುತ್ತಿದೆ. ಹೆಣ್ಣು ಭ್ರೂಣ ಹತ್ಯೆ ನಿಷೇಧದ ಕುರಿತಾಗಿ ಜನತೆಯಲ್ಲಿ ಅರಿವು ಮೂಡಿಸುವ ಸಲುವಾಗಿ ಹರಿಯಾಣ ರಾಜ್ಯದ ಗುರ್ ಗಾಂವ್ ನಲ್ಲಿ ಏರ್ಪಡಿಸಿದ್ದ ಮ್ಯಾರಥಾನ್ ನಲ್ಲಿ ಜನರು ಜಾಗೃತಿ ಜಾಥದಲ್ಲಿ ಪಾಲ್ಗೊಂಡ ಕ್ಷಣ.

ಇದು ನನ್ನ ದೋಣಿ, ಹೇಗಿದೆ ಹೇಳಿ
ಅಸ್ಸಾಂ ರಾಜ್ಯದಲ್ಲಿ ಮಳೆ ತನ್ನ ಆರ್ಭಟವನ್ನು ನಿಲ್ಲಿಸಲೇ ಇಲ್ಲ. ಇದಕ್ಕೆ ರಸ್ತೆಗಳು ಲೀಟರ್‌ಗಟ್ಟಲೇ ನೀರನ್ನು ಹೊತ್ತು ನಿಂತಿರುವುದೇ ಸಾಕ್ಷಿ. ನೀರು ತುಂಬಿದ ರಸ್ತೆಯಲ್ಲಿ ಬಾಳೆ ದಿಂಡಿನಿಂದ ಪುಟ್ಟ ದೋಣಿ ಮಾಡಿಕೊಂಡು 'ದೋಣಿ ಸಾಗಲಿ ಮುಂದೆ ಹೋಗಲಿ, ದೂರ ತೀರವ ಸೇರಲಿ' ಎಂದು ಗುನುಗುತ್ತಾ ತನ್ನ ದೋಣಿಗೆ ತಾನೇ ಅಂಬಿಗಳಾಗಿದ್ದಾಳೆ ಈ ಬಾಲಕಿ.












Click it and Unblock the Notifications