• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲಾಕ್ ಡೌನ್; ಬೆಂಗಳೂರು ನಗರಕ್ಕೆ ಬರುವವರ ಗಮನಕ್ಕೆ

|

ಬೆಂಗಳೂರು, ಮೇ 24 : ಕರ್ನಾಟಕದಲ್ಲಿ ಲಾಕ್ ಡೌನ್ ನಿಯಮ ಸಡಿಲಗೊಳಿಸಲಾಗಿದೆ. ಆದರೆ, ಬೇರೆ ರಾಜ್ಯದಿಂದ ಬೆಂಗಳೂರು ನಗರಕ್ಕೆ ಆಗಮಿಸುವವರು ಕೆಲವೊಂದು ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಹೊಸ ಮಾರ್ಗಸೂಚಿಯಂತೆ ಬೆಂಗಳೂರು ನಗರಕ್ಕೆ ಬ್ಯುಸಿನೆಸ್ ಟ್ರಿಪ್ ಬರುವವರು ಕಡ್ಡಾಯವಾಗಿ ಕೋವಿಡ್ - 19 ನೆಗೆಟೀವ್ ಆಗಿರುವ ಪ್ರಮಾಣ ಪತ್ರ ಹೊಂದಿರಬೇಕು.

ಅಂತರ ಜಿಲ್ಲಾ ಸಂಚಾರ ಪಾಸು; ಪೊಲೀಸರ ಮಹತ್ವದ ಆದೇಶ ಅಂತರ ಜಿಲ್ಲಾ ಸಂಚಾರ ಪಾಸು; ಪೊಲೀಸರ ಮಹತ್ವದ ಆದೇಶ

ಐಸಿಎಂಆರ್ ಮಾನ್ಯತೆ ಪಡೆದ ಲ್ಯಾಬ್‌ಗಳಿಂದ ಮಾನ್ಯತೆ ಪಡೆದ ಪ್ರಮಾಣ ಪತ್ರ ಹೊಂದಿರಬೇಕು. ಇಲ್ಲವಾದರೆ ಅವನ್ನು ಕ್ವಾರಂಟೈನ್‌ಗೆ ಹಾಕಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ. ನಗರಕ್ಕೆ ಬರುವ ಮನ್ನ ಇದನ್ನು ತಿಳಿದಿರಬೇಕು.

ದೇಶಿಯ ವಿಮಾನ ಸೇವೆ ಆರಂಭ; ರಾಜ್ಯಕ್ಕೆ ಆಗಮಿಸಿದರೆ ಕ್ವಾರಂಟೈನ್ ದೇಶಿಯ ವಿಮಾನ ಸೇವೆ ಆರಂಭ; ರಾಜ್ಯಕ್ಕೆ ಆಗಮಿಸಿದರೆ ಕ್ವಾರಂಟೈನ್

ಕೊರೊನಾ ಸೋಂಕು ಹೆಚ್ಚಿರುವ ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ದೆಹಲಿ, ರಾಜಸ್ಥಾನ, ಮಧ್ಯಪ್ರದೇಶದಿಂದ ಬೆಂಗಳೂರು ನಗರಕ್ಕೆ ಬರುವವರು ಕಡ್ಡಾಯವಾಗಿ 7 ದಿನದ ಸರ್ಕಾರಿ ಕ್ವಾರಂಟೈನ್, ಅವರ ಪರೀಕ್ಷಾ ವರದಿ ಬರುವ ತನಕ ಹೋಂ ಕ್ವಾರಂಟೈನ್‌ನಲ್ಲಿರಬೇಕು ಎಂದು ಸೂಚನೆ ನೀಡಲಾಗಿದೆ.

ಹೋಂ ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿದರೆ ಎಚ್ಚರ ಹೋಂ ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿದರೆ ಎಚ್ಚರ

ಬೆಂಗಳೂರಿಗೆ ಬರುವ ಮುನ್ನ ತಿಳಿಯಿರಿ

ಬೆಂಗಳೂರಿಗೆ ಬರುವ ಮುನ್ನ ತಿಳಿಯಿರಿ

* ಬೆಂಗಳೂರು ನಗರಕ್ಕೆ ಬರುವ ಮುನ್ನ ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಣಿ ಕಡ್ಡಾಯವಾಗಿದೆ.
* ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ದೆಹಲಿ, ರಾಜಸ್ಥಾನ, ಮಧ್ಯಪ್ರದೇಶದಿಂದ ಬರುವ ಜನರಿಗೆ 7 ದಿನದ ಸರ್ಕಾರಿ, 7 ದಿನದ ಹೋಂ ಕ್ವಾರಂಟೈನ್ ಕಡ್ಡಾಯ

* ಬೇರೆ ರಾಜ್ಯದಿಂದ ಬೆಂಗಳೂರಿಗೆ ಬರುವ ಜನರಿಗೆ ಹೋಂ ಕ್ವಾರಂಟೈನ್ ಕಡ್ಡಾಯ

ಕ್ವಾರಂಟೈನ್‌ನಿಂದ ವಿನಾಯಿತಿ

ಕ್ವಾರಂಟೈನ್‌ನಿಂದ ವಿನಾಯಿತಿ

* ಬೇರೆ ರಾಜ್ಯದಿಂದ ಬಂದವರನ್ನು 5 ಮತ್ತು 7ನೇ ದಿನ ಪರೀಕ್ಷೆ ಮಾಡಲಾಗುತ್ತದೆ

* ಸರ್ಕಾರಿ ಕ್ವಾರಂಟೈನ್‌ನಿಂದ ಗರ್ಭಿಣಿಯರು, 80 ವರ್ಷ ಮೇಲ್ಪಟ್ಟವರು, ಆರೋಗ್ಯ ಮತ್ತು ರಕ್ಷಣಾ ಇಲಾಖೆ ಸಿಬ್ಬಂದಿಗೆ ವಿನಾಯಿತಿ ಇದೆ.

ವರದಿ ತರುವುದು ಕಡ್ಡಾಯ

ವರದಿ ತರುವುದು ಕಡ್ಡಾಯ

ಬೇರೆ ರಾಜ್ಯದಿಂದ ತುರ್ತು ಕೆಲಸಕ್ಕೆ ಬರುವವರು, ಗುತ್ತಿಗೆದಾರರು, ಕೃಷಿ ಯಂತ್ರಗಳ ಮಾರಾಟಗಾರರು ಮುಂತಾದವರಿಗೆ ಕ್ವಾರಂಟೈನ್‌ನಿಂದ ವಿನಾಯಿತಿ ಇದೆ. ಆದರೆ, ತಮಗೆ ಕೋವಿಡ್ - 19 ಇಲ್ಲ ಎಂಬ ವರದಿಯನ್ನು ಅವರು ತರಬೇಕು. ಅದು 2 ದಿನಕ್ಕಿಂತ ಹಿಂದಿನದು ಆಗಿರಬಾರದು. ಐಸಿಎಂಆರ್ ಮಾನ್ಯತೆ ಪಡೆದ ಲ್ಯಾಬ್‌ನಿಂದ ವರದಿ ತಂದಿರಬೇಕು.

ಲಾಕ್ ಡೌನ್ ಮಾರ್ಗಸೂಚಿ

ಲಾಕ್ ಡೌನ್ ಮಾರ್ಗಸೂಚಿ

ಮೇ 25ರಿಂದ ವಿಮಾನ, ಜೂನ್ 1ರಿಂದ ರೈಲು ಸೇವೆ ಆರಂಭವಾಗುವ ಕಾರಣ ಆರೋಗ್ಯ ಇಲಾಖೆ ಈ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಅಂತರ ಜಿಲ್ಲಾ ಸಂಚಾರಕ್ಕೆ ಕರ್ನಾಟಕದಲ್ಲಿ ಈಗ ಪಾಸುಗಳ ಅಗತ್ಯವಿಲ್ಲ.

English summary
People who come to Bengaluru city for two or three days of the business trip must have a medical report stating that they are COVID - 19 negative to avoid quarantine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X