Get Updates
Get notified of breaking news, exclusive insights, and must-see stories!

ಗ್ರಾಮಸ್ಥರ ನಿದ್ದೆ ಕಸಿದ ಮೀಸಗಾನಹಳ್ಳಿ ಸುತ್ತಮುತ್ತಲ ಚಿರತೆ ಓಡಾಟ

ದೇವನಹಳ್ಳಿ, ಜನವರಿ 30: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಮೀಸಗಾನಹಳ್ಳಿ ಬಳಿ 6 ತಿಂಗಳಿಂದ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಸುತ್ತಮುತ್ತಲಿನ ಗ್ರಾಮಸ್ಥರಲ್ಲೂ ಆತಂಕ ಸೃಷ್ಟಿ ಆಗಿದೆ.

ಮೀಸಗಾನಹಳ್ಳಿ ಗ್ರಾಮವು ನಂದಿಬೆಟ್ಟ ಗಿರಿ ಶ್ರೇಣಿಗಳ ತಪ್ಪಲಿನಲ್ಲಿರುವ ಕಾರಣ ಕಾಡು ಪ್ರಾಣಿಗಳು ಹೆಚ್ಚಾಗಿ ಅಡ್ಡಾಡುತ್ತವೆ. ಆದರೆ ಇಲ್ಲಿನ ಗ್ರಾಮಸ್ಥರಿಗೆ ಯಾವುದೇ ತೊಂದರೆಯನ್ನು ಕೊಟ್ಟಿರಲಿಲ್ಲ. ಆದರೆ 6 ತಿಂಗಳಿನಿಂದ ಚಿರತೆ ಕಾಟ ಹೆಚ್ಚಾಗಿದ್ದು, ಗ್ರಾಮಕ್ಕೆ ದಾಳಿಯಿಡುತ್ತಿದೆ.

ಗ್ರಾಮದಲ್ಲಿನ ಮೇಕೆ ಹಾಗೂ ಬೀದಿ ನಾಯಿಗಳನ್ನು ಎಳೆದೊಯ್ಯುತ್ತಿದೆ. ತುಮಕೂರಿನಲ್ಲಿ ಮನೆಯೊಂದಕ್ಕೆ ಚಿರತೆ ನುಗ್ಗಿದ ಘಟನೆ ನಡೆಯುವ ಮುನ್ನಾ ದಿನವೇ ಮೀಸಗಾನಹಳ್ಳಿಯಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಗ್ರಾಮದ ಜನತೆ ನೆಮ್ಮದಿ ಹಾಳಾಗಿದೆ. 6 ತಿಂಗಳ ಹಿಂದೆ ಚಿರತೆ ಕಾಣಿಸಿದಾಗ ಅರಣ್ಯ ಇಲಾಖೆಯವರು ಬೋನು ಇಟ್ಟರೂ ಯಾವುದೇ ಪ್ರಯೋಜನವಾಗಿಲ್ಲ.

People panic after leopard cited in Meesaganahalli

ಒಂದೇ ಬೋನು ಇಟ್ಟಿದ್ದರಿಂದ ಚಿರತೆ ಸಿಗುತ್ತಿಲ್ಲ. ಎರಡು- ಮೂರು ಬೋನುಗಳು ಇಡಬೇಕಿದೆ ಎಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ. ಒಟ್ಟಾರೆ ಚಿರತೆಯ ಭಯ 6 ಗ್ರಾಮಗಳ ಗ್ರಾಮಸ್ಥರ ನಿದ್ದೆಗೆಡಿಸಿದ್ದು, ಯಾವಾಗ ಚಿರತೆ ದಾಳಿ​ ಮಾಡುತ್ತದೋ ಎಂಬ ಭೀತಿಯಲ್ಲಿ ಜನರಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+