ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ 2.50 ರೂ.ಗೆ ಇಡ್ಲಿ, 5 ರೂ.ಗೆ ಬಿಸಿಬಿಸಿ ದೋಸೆ

|
Google Oneindia Kannada News

ಬೆಂಗಳೂರು, ಆಗಸ್ಟ್ 13: ಸಿಲಿಕಾನ್ ಸಿಟಿ ಮಂದಿಗೆ ಇದೊಂದು ಪ್ರದೇಶದಲ್ಲಿ ಜಸ್ಟ್ 2.50 ರೂಪಾಯಿಗೆ ಇಡ್ಲಿ, 5 ರೂಪಾಯಿಗೆ ಬಿಸಿಬಿಸಿ ದೋಸೆ ಸಿಗುತ್ತದೆ. ತಮ್ಮ ಇಳಿವಯಸ್ಸಿನಲ್ಲಿ ತಮ್ಮ ಸಮಾಜಸೇವೆಯ ಮೂಲಕ ಹಸಿದವರ ಪಾಲಿಗೆ ಇಲ್ಲೊಬ್ಬರು ಅನ್ನಪೂರ್ಣೆಯಾಗಿದ್ದಾರೆ.

ಸಾಮಾನ್ಯವಾಗಿ ಬೆಂಗಳೂರಿನ ಮಂದಿಗೆ ಬೆಳಗ್ಗೆ ಟಿಫನ್, ಮಧ್ಯಾಹ್ನ ಊಟ ಮತ್ತು ರಾತ್ರಿ ಊಟಕ್ಕೆ ಉತ್ತಮ ಹೋಟೆಲ್ ಎಲ್ಲಿದೆ ಎಂಬುದನ್ನು ಹುಡುಕುವುದೇ ದೊಡ್ಡ ಸವಾಲು. ಟಿಫನ್ ಮತ್ತು ಊಟ ಚೆನ್ನಾಗಿದ್ದರೆ, ಬೆಲೆ ಜಾಸ್ತಿಯಿರುತ್ತೆ. ಬೆಲೆ ಕಡಿಮೆಯಿದ್ದರೆ, ಆಹಾರದ ಗುಣಮಟ್ಟ ಅಷ್ಟಕಷ್ಟೇ ಆಗಿರುತ್ತದೆ. ಆದರೆ ವಿವಿ ಪುರದಲ್ಲಿರುವ ಇದೊಂದು ಸ್ಥಳದಲ್ಲಿ ಮಾತ್ರ ನಿಮಗೆ ಚೀಪ್ ಆಂಡ್ ಬೆಸ್ಟ್ ಫುಡ್ ಸಿಗುತ್ತದೆ.

ಹೀಗೊಂದು ಸಮೀಕ್ಷೆ: Work From Home ಬಳಸಿ, ಬೆಂಗಳೂರು ಉಳಿಸಿ!ಹೀಗೊಂದು ಸಮೀಕ್ಷೆ: Work From Home ಬಳಸಿ, ಬೆಂಗಳೂರು ಉಳಿಸಿ!

ಬೆಂಗಳೂರಿನ ವಿವಿ ಪುರಂನಲ್ಲಿ ಇರುವ ಪುಟ್ಟ ಅಂಗಡಿಯಲ್ಲಿ ಗ್ರಾಹಕರು ಕೇವಲ 2.50 ರೂಪಾಯಿಗೆ ಇಡ್ಲಿ, 5 ರೂಪಾಯಿಗೆ ದೋಸೆಯನ್ನು ಬಾಯಿ ಚಪ್ಪರಿಸಿಕೊಂಡು ಸವಿಯಬಹುದು. ಕಳೆದ 30 ವರ್ಷಗಳಿಂದಲೂ ಈ ಭಾಗದಲ್ಲಿ ಮಂಗಮ್ಮ ಹೋಟೆಲ್ ಸಖತ್ ಫೇಮಸ್ ಆಗಿದೆ.

30 ವರ್ಷದಿಂದ ಹೋಟೆಲ್ ಇಟ್ಟುಕೊಂಡಿರುವ ಮಂಗಮ್ಮ

30 ವರ್ಷದಿಂದ ಹೋಟೆಲ್ ಇಟ್ಟುಕೊಂಡಿರುವ ಮಂಗಮ್ಮ

ಸಿಲಿಕಾನ್ ಸಿಟಿಯ ವಿವಿಪುರಂ ನಿವಾಸಿ ಆಗಿರುವ 65 ವರ್ಷದ ಮಂಗಮ್ಮ ಇಂಥದೊಂದು ಸಮಾಜಸೇವೆಯಲ್ಲಿ ತಮ್ಮನ್ನು ತೊಡೆಗಿಸಿಕೊಂಡಿದ್ದಾರೆ. ಕಳೆದ 30 ವರ್ಷಗಳಿಂದ ಕಡಿಮೆ ಬೆಲೆಗೆ ಇಡ್ಲಿ ಮತ್ತು ದೋಸೆಯನ್ನು ಸಾರ್ವಜನಿಕರಿಗೆ ನೀಡುತ್ತಾ ಬಂದಿದ್ದಾರೆ. ರುಚಿರುಚಿಯಾದ ತಿಂಡಿ ಸವಿಯುವುದಕ್ಕೆ ನಿತ್ಯ ನೂರಾರು ಮಂದಿ ಮಂಗಮ್ಮ ಮನೆ ಎದುರಿಗೆ ಸೇರುತ್ತಾರೆ.

ನಾಲ್ಕು ಹೆಣ್ಣು ಮಕ್ಕಳನ್ನು ಹೊಂದಿರುವ ಮಂಗಮ್ಮ

ನಾಲ್ಕು ಹೆಣ್ಣು ಮಕ್ಕಳನ್ನು ಹೊಂದಿರುವ ಮಂಗಮ್ಮ

ಹೃದಯ ಸಂಬಂಧಿ ಕಾಯಿಲೆ ಹೊಂದಿರುವ ಮಂಗಮ್ಮ ಕಳೆದ 20 ವರ್ಷಗಳ ಹಿಂದೆ ತಮ್ಮ ಪತಿಯನ್ನು ಕಳೆದುಕೊಂಡರು. ನಾಲ್ಕು ಹೆಣ್ಣು ಮತ್ತು ಒಬ್ಬ ಗಂಡು ಮಗನನ್ನು ಹೊಂದಿದ್ದ ಕುಟುಂಬದ ಜವಾಬ್ದಾರಿ ಇವರ ಮೇಲೆ ಬಿತ್ತು. ಅಂದಿನಿಂದಲೂ ಸಮಾಜಸೇವೆಯೊಂದಿಗೆ ಕುಟುಂಬದ ನೊಗವನ್ನು ಹೊತ್ತುಕೊಂಡು ಸಾಗುತ್ತಿದ್ದಾರೆ. ಆದರೆ ಬಡತನದ ಬೇಗೆ ಇಂದಿಗೂ ಕುಟುಂಬವನ್ನು ಬೆನ್ನು ಬಿಡದ ಭೂತದಂತೆ ಕಾಡುತ್ತಿದೆ.

ಬಡತನದಿಂದ ಮೊಮ್ಮಕ್ಕಳಿಗೆ ಶಿಕ್ಷಣ ನೀಡಲು ಆಗುತ್ತಿಲ್ಲ

ಬಡತನದಿಂದ ಮೊಮ್ಮಕ್ಕಳಿಗೆ ಶಿಕ್ಷಣ ನೀಡಲು ಆಗುತ್ತಿಲ್ಲ

ಮಂಗಮ್ಮಗೆ ಇರುವ ಒಬ್ಬ ಮಗ ದಿನಗೂಲಿ ಕಾರ್ಮಿಕನಾಗಿದ್ದು, ಅವನ ದುಡಿಮೆ ಕುಟುಂಬವನ್ನು ನಡೆಸಲು ಸಾಕಾಗುವುದಿಲ್ಲ. ಹೀಗಾಗಿ ಇಬ್ಬರು ಮೊಮ್ಮಕ್ಕಳ ಶಿಕ್ಷಣವನ್ನು ಮುಂದುವರಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. 10ನೇ ತರಗತಿವರೆಗೂ ಓದಿರುವ ಹಿರಿಯ ಮೊಮ್ಮಗ ಸಂದೀಪ್ ಮತ್ತು 3ನೇ ತರಗತಿ ಓದುತ್ತಿದ್ದ ವಿಷ್ಣು ತಮ್ಮ ವಿದ್ಯಾಭ್ಯಾಸವನ್ನು ನಿಲ್ಲಿಸಿದ್ದಾರೆ. ಅಲ್ಲಿಂದ ಮುಂದೆ ಓದುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಮಂಗಮ್ಮ ಹೇಳಿದ್ದಾರೆ.

ದೋಸೆ ಮತ್ತು ಇಡ್ಲಿ ಬಗ್ಗೆ ಗ್ರಾಹಕರು ಹೇಳಿದ್ದೇನು?

ದೋಸೆ ಮತ್ತು ಇಡ್ಲಿ ಬಗ್ಗೆ ಗ್ರಾಹಕರು ಹೇಳಿದ್ದೇನು?

ಬೆಳಗ್ಗೆ 5 ಗಂಟೆಗೆ ಎದ್ದು ಹಿಟ್ಟು ಕಲಿಸಿ, ಚಟ್ನಿ ರುಬ್ಬಿ, ಇಡ್ಲಿ ಮತ್ತು ದೋಸೆಯನ್ನು ಮಾಡುವುದಕ್ಕೆ ಎಲ್ಲ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ. ಮೇಲಿನ ಮನೆಯಿಂದ ದೋಸೆ ಮತ್ತು ಇಡ್ಲಿಯನ್ನು ಪುಟ್ಟ ಬಕೇಟ್ ಮೂಲಕ ಮನೆ ಮುಂಭಾಗಕ್ಕೆ ಇಳಿಸಲಾಗುತ್ತದೆ. ಬೆಳಗ್ಗೆ 7.30ರಿಂದ ಮಧ್ಯಾಹ್ನ 12.30ರವರೆಗೂ ಬಿಸಿಬಿಸಿ ದೋಸೆ ಮತ್ತು ಇಡ್ಲಿ ಸಿಗುತ್ತದೆ. ಕಳೆದ 30 ವರ್ಷಗಳಿಂದಲೂ ಮಂಗಮ್ಮ ಅಂಗಡಿಯಲ್ಲಿ ರುಚಿ ಸವಿದ ಗ್ರಾಹಕರು ಬೊಂಬಾಟ್ ಎನ್ನುವ ರಿಸಲ್ಟ್ ಕೊಟ್ಟಿದ್ದಾರೆ.

English summary
Bengaluru people get idli in 2.50 and doas in just 5 rupees at VV Pura Mangamma Hotel. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X