• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪೇಜಾವರ ಶ್ರೀಗಳ ಬೆಂಗಾವಲು ವಾಹನಕ್ಕೆ ಕಾರು ಡಿಕ್ಕಿ, ಇಬ್ಬರು ಸಾವು

By ಬೆಂಗಳೂರು ಪ್ರತಿನಿಧಿ
|

ಪೇಜಾವರ ಮಠದ ವಿಶ್ವೇಶ ತೀರ್ಥರಿಗೆ ಭದ್ರತೆ ನೀಡುತ್ತಿದ್ದ ಬೆಂಗಾವಲು ವಾಹನ ಮತ್ತು ಇಂಡಿಗೋ ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿ, ದಂಪತಿ ಸಾವನ್ನಪ್ಪಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಕರಪನಹಳ್ಳಿ ಗೇಟ್ ಬಳಿ ಸಂಭವಿಸಿದೆ.

ರಸ್ತೆಯಲ್ಲಿ ತೆರಳುತ್ತಿದ್ದ ಪೇಜಾವರ ಶ್ರೀಗಳ ಎಸ್ಕಾರ್ಟ್ ವಾಹನದ ಮುಂದೆ ಸಾಗುತ್ತಿದ್ದ ಪೊಲೀಸ್ ಎಸ್ಕಾರ್ಟ್ ವಾಹನಕ್ಕೆ, ಚಿಂತಾಮಣಿ ಕಡೆಯಿಂದ ಎದುರಿನಿಂದ ಬಂದ ಇಂಡಿಗೋ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಇಂಡಿಗೋ ಕಾರಿನಲ್ಲಿದ್ದ ರಾಮಕೃಷ್ಣಯ್ಯ (65) ಮತ್ತು ಸರ್ವಲೋಚನಾ (55) ಸ್ಥಳದಲ್ಲೇ ದುರ್ಮಣರಕ್ಕೀಡಾಗಿದ್ದಾರೆ.

ಲಾರಿಗೆ ಆಂಬ್ಯುಲೆನ್ಸ್ ಡಿಕ್ಕಿ, ರೋಗಿಗಳು ಸೇರಿ ನಾಲ್ವರು ಸ್ಥಳದಲ್ಲಿಯೇ ಸಾವು

ಚಿಂತಾಮಣಿ ನಿವಾಸಿಗಳಾದ ರಾಮಕೃಷ್ಣಯ್ಯ ನಾಮಕರಣ ಕಾರ್ಯಕ್ರಮಕ್ಕೆ ಕುಟುಂಬ ಸಮೇತ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ರಾಮಕೃಷ್ಣಯ್ಯ ಸೊಸೆ- ನಳಿನಿ ಗಂಭೀರವಾಗಿ ಗಾಯಗೊಂಡಿದ್ದು, ಕಾರು ಚಾಲಕ ನಾಗೇಶ್ ಕಾಲುಗಳಿಗೆ ಗಂಭೀರ ಗಾಯಗಳಾಗಿವೆ.

ಇನ್ನು ಎಸ್ಕಾರ್ಟ್ ಕಾರಿನಲ್ಲಿದ್ದ ಎಎಸ್ ಐ ಶಂಭಯ್ಯ ಕಾಲಿಗೂ ಗಂಭೀರ ಗಾಯವಾಗಿದ್ದು, ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಬಸ್ಸಿಗೆ ಕಾಯುತ್ತಿದ್ದವರ ಮೇಲೆ ಹರಿದ ಕಾರು: ನಾಲ್ವರ ದುರ್ಮರಣ

ಪೇಜಾವರ ಶ್ರೀಗಳು ಚಿಂತಾಮಣಿ ತಾಲೂಕಿನ ಕೋನಕುಂಟ್ಲು ಗ್ರಾಮದಲ್ಲಿ ಸಮ್ಮೇಳನದಲ್ಲಿ ಭಾಗವಹಿಸಿಲು ಬೆಂಗಳೂರಿನಿಂದ ತೆರಳುತ್ತಿದ್ದರು. ದಂಪತಿಯಿದ್ದ ಕಾರು ಬಲ ಭಾಗದಲ್ಲಿ ಬಂದಿದ್ದ ಕಾರಣ ಈ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸುವ ತನಕ ಶ್ರೀಗಳು ಸ್ಥಳದಲ್ಲಿದ್ದು, ಆ ನಂತರ ಪ್ರಯಾಣ ಮುಂದುವರಿಸಿದ್ದಾರೆ.

English summary
Pejawar seer Vishwesha Tirtha escort vehicle met with accident in Hosakete, Bengaluru rural district on Sunday and two dead.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X