ಬೆಂಗಳೂರಿನ ಮೊದಲ ಸೈಕಲ್ ಡೇ ಯಶಸ್ವಿ

ಬೆಂಗಳೂರು, ಅ, 28 : ನಗರದಲ್ಲಿ ಸೈಕಲ್ ಸವಾರರ ಸಂಖ್ಯೆ ಹೆಚ್ಚಳವಾದರೆ, ಸಂಚಾರ ಸಮಸ್ಯೆ ಕಡಿಮೆಯಾಗಲಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಕಟ್ಟೆ ಸತ್ಯನಾರಾಯಣ ಹೇಳಿದ್ದಾರೆ. ಸೈಕಲ್ ದಿನ ಕಾರ್ಯಕ್ರಮಕ್ಕೆ ಬಿಬಿಎಂಪಿಯ ಎಲ್ಲಾ ಸದಸ್ಯರನ್ನು ಕರೆತರಲು ಪ್ರಯತ್ನಿಸುತ್ತೇನೆ ಎಂದು ಅವರು ಭರವಸೆ ನೀಡಿದ್ದಾರೆ.

ನಗರದ ಕಬ್ಬನ್‌ ಪಾರ್ಕ್‌ ಆವರಣದಲ್ಲಿ ಭಾನು­ವಾರ ಏರ್ಪಡಿಸಲಾಗಿದ್ದ ಸೈಕಲ್‌ ದಿನ ಕಾರ್ಯಕ್ರಮದಲ್ಲಿ ಸೈಕಲ್ ಸವಾರಿ ಮಾಡಿ, ಹೊಸ ಸೈಕಲ್‌ ನಿಲ್ದಾಣ ಉದ್ಘಾಟಿಸಿ ಮಾನಾಡಿದ ಮೇಯರ್, ನಗರದಲ್ಲಿ ಸೈಕಲ್‌ಗಳು ಹೆಚ್ಚಿ ಇತರ ವಾಹನಗಳು ಕಡಿಮೆ ಆದಷ್ಟು ಸಂಚಾರ ಸಮಸ್ಯೆ ಕಡಿಮೆಯಾಗಲಿದೆ ಎಂದು ಹೇಳಿದರು.

ಸೈಕಲ್‌ ದಿನ ಕಾರ್ಯಕ್ರಮಕ್ಕೆ ಬಿಬಿಎಂಪಿ ಎಲ್ಲಾ ರೀತಿಯ ಬೆಂಬಲ ನೀಡುತ್ತದೆ. ಮುಂದಿನ ತಿಂಗಳು ಕೊನೆಯ ಭಾನುವಾರ ನಡೆಯಲಿರುವ ‘ಸೈಕಲ್‌ ದಿನ' ಕಾರ್ಯಕ್ರಮಕ್ಕೆ ಬಿಬಿಎಂಪಿ ಎಲ್ಲ ಸದಸ್ಯರನ್ನು ಸೈಕಲ್‌ ಸವಾರಿಗೆ ಕರೆ­ತರಲು ಪ್ರಯತ್ನಿಸುತ್ತೇನೆ ಎಂದು ಮೇಯರ್ ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

ಸೈಕಲ್ ಬಳಕೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಆಯೋಜಿಸಲಾದ ‘ಫೀಲ್‌ ಬೆಂಗಳೂರು ಸೈಕಲ್‌ ಡೇ' ಕಾರ್ಯಕ್ರಮಕ್ಕೆ ಡಲ್ಟ್‌, ಬಿಎಂಟಿಸಿ, ತೋಟಗಾರಿಕೆ ಇಲಾಖೆ, ಬಿಟಿಪಿ, ಬಿಎಂಆರ್‌ಸಿಎಲ್‌ ಸಹ ಬೆಂಬಲ ನೀಡಿದ್ದವು. ಮೊದಲ ದಿನದ ಸೈಕಲ್ ಡೇ ಅಭಿಯಾನ ಯಶಸ್ವಿಯಾಗಿ ಮುಕ್ತಾಯವಾಗಿದೆ. ಇನ್ನು ಮುಂದೆ ಪತ್ರಿ ತಿಂಗಳ ಕೊನೆಯ ಭಾನುವಾರ ಸೈಕಲ್ ಡೇ ಆಚರಿಸಲಾಗುತ್ತದೆ. ಚಿತ್ರಗಳಲ್ಲಿ ಸೈಕಲ್ ಡೇ

ಮೊದಲ ಸೈಕಲ್ ಡೇ ಯಶಸ್ವಿ

ಮೊದಲ ಸೈಕಲ್ ಡೇ ಯಶಸ್ವಿ

ಕಬ್ಬನ್‌ ಪಾರ್ಕ್‌ನಲ್ಲಿ ಸೈಕಲ್ ಡೇ ಅಭಿಯಾನಕ್ಕೆ ಬಿಬಿಎಂಪಿ ಮೇಯರ್ ಕಟ್ಟೆ ಸತ್ಯನಾರಾಯಣ ಚಾಲನೆ ನೀಡಿದರು. ಅಭಿಯಾನದಲ್ಲಿ ಸುಮಾರು 1,200 ಜನರು ಪಾಲ್ಗೊಂಡಿದ್ದರು. ಎಲ್ಲರೂ 5 ಕಿ.ಮೀ.ಯಷ್ಟು ದೂರ ಸೈಕಲ್‌ ಸವಾರಿ ಮಾಡಿ ಅಭಿಯಾನಕ್ಕೆ ಬೆಂಬಲ ಸೂಚಿಸಿದರು. ಕಬ್ಬನ್‌ ಪಾರ್ಕ್‌ ಮಾತ್ರವಲ್ಲದೆ ಕಸ್ತೂರಬಾ ರಸ್ತೆ, ನೃಪತುಂಗ ರಸ್ತೆ ಮತ್ತು ಹಡ್ಸನ್‌ ಸರ್ಕಲ್‌ಗಳಲ್ಲಿ ಸೈಕಲ್‌ ಮೆರವಣಿಗೆ ನಡೆಯಿತು.

ತಿಂಗಳ ಕೊನೆಯ ಭಾನುವಾರ ಸೈಕಲ್ ಡೇ

ತಿಂಗಳ ಕೊನೆಯ ಭಾನುವಾರ ಸೈಕಲ್ ಡೇ

ಬೆಂಗಳೂರಿನಲ್ಲಿ ಇನ್ನು ಮುಂದೆ ಪ್ರತಿ ತಿಂಗಳ ಕೊನೆಯ ಭಾನುವಾರದಂದು ಸೈಕಲ್ ಡೇ ಆಚರಿಸಲಾಗುತ್ತದೆ. ಜನರಲ್ಲಿ ಸೈಕಲ್ ಸವಾರಿ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಅ.27ರ ಭಾನುವಾರ ಸೈಕಲ್ ಡೇ ಕಾರ್ಯಕ್ರಮಕ್ಕೆ ಚಾಲನೆ ದೊರಕಿದ್ದು, ಪ್ರತಿ ತಿಂಗಳ ಕೊನೆಯ ಭಾನುವಾರ ಸೈಕಲ್ ಡೇ ಆಚರಿಸಲಾಗುತ್ತದೆ.

ಆಯೋಜಿಸಿದ್ದು ಯಾರು?

ಆಯೋಜಿಸಿದ್ದು ಯಾರು?

ಡೈರೆಕ್ಟೊರೇಟ್ ಆಫ್ ಅರ್ಬನ್ ಲ್ಯಾಂಡ್ ಟ್ರಾನ್ಸ್ ಪೋರ್ಟ್ (DULT) ಸಂಸ್ಥೆ, ಬೆಂಗಳೂರಿನ ಸೈಕಲ್ ಓಡಿಸುವವರ ಸಮುದಾಯ, ನಾಗರಿಕ ಸಂಘಗಳು, ಸ್ವಯಂಸೇವಾ ಸಂಸ್ಥೆ, ತೋಟಗಾರಿಕೆ ಇಲಾಖೆ ಮತ್ತು ಬಿಎಂಟಿಸಿ ಸಹಭಾಗಿತ್ವದಲ್ಲಿ 'ಫೀಲ್ ಬೆಂಗಳೂರು ಸೈಕಲ್ ಡೇ' ಅಭಿಯಾನ ಆಯೋಜಿಸಿದೆ.

ಬಿಎಂಟಿಸಿ ಬೆಂಬಲ

ಬಿಎಂಟಿಸಿ ಬೆಂಬಲ

‘ಫೀಲ್‌ ಬೆಂಗಳೂರು ಸೈಕಲ್‌ ದಿನ'ಕ್ಕೆ ಬಿಎಂಟಿಸಿ ಬೆಂಬಲ ನೀಡಿದೆ. ಸೈಕಲ್ ಡೇ ಅಂಗವಾಗಿ ವೋಲ್ವೊ ಬಸ್‌ನಲ್ಲಿ (ಬೆಳಿಗ್ಗೆ 6ರಿಂದ 11ರವರೆಗೆ ಮಾತ್ರ) ಸೈಕಲ್‌ ಜತೆ ಕಬ್ಬನ್ ಪಾರ್ಕ್ ಗೆ ಜನರು ಆಗಮಿಸಿಲು ಅವಕಾಶ ನೀಡಲಾಗಿತ್ತು. ಸೈಕಲ್‌ ಇಲ್ಲದವರಿಗಾಗಿ, ಬಾಡಿಗೆಗೆ ಸೈಕಲ್‌ ನೀಡುವ ವ್ಯವಸ್ಥೆ ಮಾಡಲಾಗಿತ್ತು.

ಸವಾರರಿಗೆ ನಂದಿನಿ ಹಾಲು

ಸವಾರರಿಗೆ ನಂದಿನಿ ಹಾಲು

ಮೊದಲ ದಿನದ ಸೈಕಲ್ ಡೇಗೆ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಸಹ ಬೆಂಬಲ ನೀಡಿತ್ತು. ಸೈಕಲ್‌ ಸವಾರಿ ಮಾಡಿಬಂದವರಿಗೆ ಕೆಎಂಎಫ್ ವತಿಯಿಂದ ನಂದಿನಿ ಹಾಲಿನ ಆತಿಥ್ಯವಿತ್ತು.

ಬಿಬಿಎಂಪಿ ಬೆಂಬಲ

ಬಿಬಿಎಂಪಿ ಬೆಂಬಲ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸೈಕಲ್ ಡೇಗೆ ತನ್ನ ಬೆಂಬಲ ಸೂಚಿಸಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಸೈಕಲ್‌ ಸವಾರರಿಗೆ ಅಗತ್ಯವಾದ ಸೌಲಭ್ಯ ಕಲ್ಪಿಸಿಕೊಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+