ನಮ್ಮ ಮೆಟ್ರೋ ಕ್ರೆಡಿಟ್ ವಾರ್: ಕೇಂದ್ರ ಹಾಗೂ ರಾಜ್ಯದ ಅನುದಾನದ ಲೆಕ್ಕ ಬಿಚ್ಚಿಟ್ಟ ಸಂಸದ ಪಿ.ಸಿ. ಮೋಹನ್

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕ ಭೇಟಿ ಹಾಗೂ ನಮ್ಮ ಮೆಟ್ರೋ ಹೊಸ ಮಾರ್ಗ ತೆರೆಯುವ ಮೊದಲೇ ಯೋಜನೆಗಳಿಗೆ ಹಣಕಾಸು ಒದಗಿಸುವ ವಿಚಾರ ಭಾರೀ ಚರ್ಚೆ ಆಗುತ್ತಿದೆ. ನಮ್ಮ ಮೆಟ್ರೋ ಯೋಜನೆಗಳ ಕ್ರೆಡಿಟ್,ಅನುದಾನ ಹಂಚಿಕೆ ಸಂಬಂಧ ಉಭಯ ಪಕ್ಷಗಳ ನಾಯಕರು ದೂರಿದ್ದಾರೆ. ಇದೀಗ ಸಂಸದ ಪಿ.ಸಿ.ಮೋಹನ್ ಅವರು ರಾಜ್ಯ, ಕೇಂದ್ರ, ಸಾಲದ ಪಾಲಿನ ಅಂಕಿ ಅಂಶಗಳ ನೀಡಿದ್ದಾರೆ.

ಬೆಂಗಳೂರು ಮೆಟ್ರೋಗೆ ಹಣಕಾಸು ಒದಗಿಸುವ ವ್ಯವಸ್ಥೆ ಕುರಿತು ಅವರು ಗುರುವಾರ ಎಕ್ಸ್ ಮಾಡಿದ್ದು, ಮೆಟ್ರೋ ಯೋಜನೆಗಳಿಗೆ 20:20:60 ಮಾದರಿಯಲ್ಲಿ ಹಣ ನೀಡಲಾಗುತ್ತಿದೆ ಎಂದಿದ್ದಾರೆ. ಅದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಲಾ ಶೇ.20 ರಷ್ಟು ಕೊಡುಗೆ ನೀಡುತ್ತವೆ. ಉಳಿದ ಶೇ. 60 ರಷ್ಟು ಅನುದಾನವನ್ನು ಕೇಂದ್ರ ಸರ್ಕಾರದ ಖಾತರಿಯೊಂದಿಗೆ (sovereign guarantee) ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಅಥವಾ ಇತರ ಮೂಲಗಳಿಂದ ಸಂಗ್ರಹಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

Bengaluru Metro Funding

ನಮ್ಮ ಮೆಟ್ರೋ ಯೋಜನೆಗಳಿಗಾಗಿ ಇರುವ ನಿಯಮದಂತೆ ಕೇಂದ್ರ ಸರ್ಕಾರವು ₹41,557 ಕೋಟಿಗಳನ್ನು ನೀಡಲು ಬದ್ಧವಾಗಿದೆ. ಹಾಗೆಯೇ ಕರ್ನಾಟಕ ಸರ್ಕಾರವು ₹36,332 ಕೋಟಿಗಳನ್ನು ನೀಡುತ್ತಿದೆ'ಎಂದು ಹೇಳುವ ಮೂಲಕ ಸಿಎಂ ಡಿಕೆ ಶಿವಕುಮಾರ್ ಅವರಿಗೆ ತಿರುಗೇಟು ನೀಡಿದ್ದಾರೆ.

ರಾಜ್ಯಕ್ಕೆ ಪ್ರಧಾನಿ ಮೋದಿ: ನ.13ಕ್ಕೆ ಬೆಂಗಳೂರು-ಗೋವಾ ವಂದೇ ಭಾರತ್, ರೈಲ್ವೆ ಯೋಜನೆಗಳಿಗೆ ಗ್ರೀನ್ ಸಿಗ್ನಲ್!
ರಾಜ್ಯಕ್ಕೆ ಪ್ರಧಾನಿ ಮೋದಿ: ನ.13ಕ್ಕೆ ಬೆಂಗಳೂರು-ಗೋವಾ ವಂದೇ ಭಾರತ್, ರೈಲ್ವೆ ಯೋಜನೆಗಳಿಗೆ ಗ್ರೀನ್ ಸಿಗ್ನಲ್!

ಕ್ರೆಡಿಟ್ ತಗೊಳ್ಳುವವರು, ದರ ಏರಿಕೆ ಹೊಣೆ ನಿಮ್ಮದೇ!

ಸಂಸದರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು, 'ಬೆಂಗಳೂರು ಮೆಟ್ರೋಗೆ ಯಾವುದೇ ಅನುದಾನ ನೀಡಿಲ್ಲ. ಪ್ರಯಾಣಿಕರ ಕೊರತೆಯಿಂದಾಗಿ ಈಗಾಗಲೇ ನಷ್ಟದಲ್ಲಿರುವ ಜೈಪುರ ಮೆಟ್ರೋದ 2ನೇ ಹಂತಕ್ಕೆಕೇಂದ್ರ ಸರ್ಕಾರ ಹಣ ನೀಡಿದೆ' ಎಂದು ಬೇಸರ ಹೊರ ಹಾಕಿದ್ದಾರೆ.

ಮತ್ತೊಬ್ಬರು, 'ಬೆಂಗಳೂರು ಮೆಟ್ರೋಗೆ ನೀಡಲಾಗುತ್ತಿರುವ ಹಣವು ಪ್ರಧಾನಿ ಮೋದಿ ಸರ್ಕಾರದಿಂದ ಸಿಕ್ಕ ಉಚಿತ ಅನುದಾನ ಅಲ್ಲ. ಅದನ್ನು ರಾಜ್ಯವು ಮರುಪಾವತಿಸಬೇಕಾಗುತ್ತದೆ. ಸಾರ್ವಭೌಮ ಖಾತರಿಯನ್ನು (sovereign guarantee) ನೇರ ಆರ್ಥಿಕ ನೆರವು ಎಂದು ತಪ್ಪಾಗಿ ಭಾವಿಸಬೇಡಿ. ಆ ಶೇ.60 ಹಣವು ಮರುಪಾವತಿಸಬೇಕಾದ ಅಂತಾರಾಷ್ಟ್ರೀಯ ಸಾಲಗಳೇ ಹೊರತು, ಮೋದಿಯವರ ಸ್ವಂತ ಜೇಬಿನಿಂದ ಬಂದಿದ್ದಲ್ಲ. ಕರ್ನಾಟಕ ಸರ್ಕಾರವು ಇಲ್ಲಿನ ತೆರಿಗೆದಾರರ ಹಣವನ್ನು ನೀಡುತ್ತಿದೆ. ಬೆಂಗಳೂರಿನ ಹಣಕ್ಕೆ ರಾಜಕೀಯ ಶ್ರೇಯಸ್ಸನ್ನು ಪಡೆಯುವುದನ್ನು ನಿಲ್ಲಿಸಿ' ಎಂದು ಕಿವಿ ಮಾತು ಹೇಳಿದ್ದಾರೆ.

20 ನಗರಗಳಲ್ಲಿ ಮೆಟ್ರೋಗೆ ಇದೇ ಮಾದರಿಯ ಹಣಕಾಸು ವ್ಯವಸ್ಥೆ

ದೇಶದಲ್ಲಿ ಅಸ್ತಿತ್ವದಲ್ಲಿರುವ 20ಕ್ಕೂ ಹೆಚ್ಚು ಮಹಾನಗರಗಳಲ್ಲಿ ನಿರ್ಮಿಸಿದ ಪ್ರತಿಯೊಂದು ಮೆಟ್ರೋ ಯೋಜನೆಯಲ್ಲೂ ಇದೇ ಮಾದರಿಯ ಹಣಕಾಸು ವ್ಯವಸ್ಥೆ ಇದೆ. ಆದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಂಘರ್ಷವಿದೆ ಎಂದು ಬಿಂಬಿಸಲು ಕಾಂಗ್ರೆಸ್ ರಾಜ್ಯ ಸರ್ಕಾರವು ಗೊಂದಲ ಸೃಷ್ಟಿಸುತ್ತಿದೆ, ನಾಟಕವಾಡುತ್ತಿದೆ ಅಂತಲೂ ದೂರಿದ್ದಾರೆ.

ಸುಳ್ಳು ಭರವಸೆಗಳ ನಡೆಯದು. ಹೊಸ ಮಾರ್ಗಗಳಿಗೆ ಶ್ರೇಯಸ್ಸು ಪಡೆಯುವುದಾದರೆ, ಮೆಟ್ರೋ ಪ್ರಯಾಣ ದರ ಏರಿಕೆಯ ಜವಾಬ್ದಾರಿಯನ್ನೂ ನೀವೇ ತೆಗೆದುಕೊಳ್ಳಿ. ರಾಜ್ಯ ಸರ್ಕಾರವು ದೊಡ್ಡ ಪ್ರಮಾಣದ ಕೊಡುಗೆ ನೀಡುತ್ತಿದೆ ಎಂಬುದು ಎಲ್ಲರಿಗೂ ತಿಳಿದಿದೆ. ರಾಜ್ಯದ್ದು ಶೇ.5ರಷ್ಟು, ಕೇಂದ್ರದ್ದು ಶೇ.1 ಅನುಪಾತದ ಅನುದಾನ' ಎಂದು ಮೂರನೇಯವರು ತಿಳಿಸಿದ್ದಾರೆ.

Metro Pink Line ಪ್ರಧಾನಿಯಿಂದ ಚಾಲನೆ: 2027ರಲ್ಲಿ 4 ಹೊಸ ಮೆಟ್ರೋ ಲೈನ್‌ಗಳ ಉದ್ಘಾಟನೆ?: ಕೃಷ್ಣ ಬೈರೇಗೌಡ
Metro Pink Line ಪ್ರಧಾನಿಯಿಂದ ಚಾಲನೆ: 2027ರಲ್ಲಿ 4 ಹೊಸ ಮೆಟ್ರೋ ಲೈನ್‌ಗಳ ಉದ್ಘಾಟನೆ?: ಕೃಷ್ಣ ಬೈರೇಗೌಡ

ಡಿಕೆ ಶಿವಕುಮಾರ್ ಕೊಟ್ಟ ಲೆಕ್ಕ ಇಲ್ಲಿದೆ

ಇತ್ತೀಚೆಗೆ ಡಿಕೆ ಶಿವಕುಮಾರ್ ಅವರು, ಕೇಂದ್ರ ನೀಡುವ ಪ್ರತಿ 1 ರೂ.ಗೆ ರಾಜ್ಯವು ಪ್ರತಿಯಾಗಿ 5 ರೂ. ನೀಡುತ್ತದೆ. ಒಟ್ಟು ಶೇ.84ರಷ್ಟು ಹಣ ರಾಜ್ಯ ಸರ್ಕಾರ ನೀಡುತ್ತಿದೆ. ಸಾಲವನ್ನು ರಾಜ್ಯವೇ ಭರಿಸುತ್ತಿದೆ ಎಂದರು. ಸಾಲ ಮರುಪಾವತಿ, ನಿರ್ವಹಣೆ ಎಲ್ಲವು ರಾಜ್ಯದ್ದೇ ಜವಾಬ್ದಾರಿ. ಈಗಾಗಲೇ 28,950 ಕೋಟಿ ಸಾಲವನ್ನು ರಾಜ್ಯವೇ ತೀರಿಸಿದೆ. ಮೆಟ್ರೋಗೆ 7892 ಕೋಟಿ ರೂ. ಆರ್ಥಿಕ ನೆರವು ಒದಗಿಸಿದೆ ಎಂದು ಸಿಎಂ ಲೆಕ್ಕ ನೀಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+