• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಟೆಕ್ಕಿಗೆ 12.5 ಲಕ್ಷ ರೂ. ಪರಿಹಾರ ನೀಡಲು ಸೂಚನೆ

|

ಬೆಂಗಳೂರು, ನ. 5 : ಯಾವುದೇ ಕಾರಣ ನೀಡದೇ ನಿಯಮಬಾಹಿರವಾಗಿ ಸಿಬ್ಬಂದಿಯನ್ನು ತೆಗೆದುಹಾಕಿದ್ದಕ್ಕೆ ಪರಿಹಾರವಾಗಿ 12.5 ಲಕ್ಷ ರೂ. ನೀಡಲು ಬೆಂಗಳೂರು ಸಿ.ವಿ.ರಾಮನ್ ನಗರದಲ್ಲಿರುವ ಅಮೆರಿಕ ಮೂಲದ ಐಟಿ ಕಂಪನಿಯೊಂದಕ್ಕೆ ಕರ್ನಾಟಕದ ಕಾರ್ಮಿಕ ಇಲಾಖೆ ಸೂಚನೆ ನೀಡಿದೆ. ಕರ್ನಾಟಕ ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ಐಟಿ ಕಂಪನಿಯೊಂದಕ್ಕೆ ದಂಡ ವಿಧಿಸಿದೆ.

ದೆಹಲಿ ಮೂಲದ 27 ವರ್ಷದ ಟೆಕ್ಕಿಯೊಬ್ಬಳು 2012ರ ಜುಲೈ 16ರಂದು ಅಮೆರಿಕ ಮೂಲದ ಐಟಿ ಕಂಪನಿಗೆ ಟೆಕ್ನಿಕಲ್ ಸಿಸ್ಟಮ್ ಅನಾಲಿಸ್ಟ್ ಆಗಿ ಸೇರಿಕೊಂಡಿದ್ದಳು. ನಂತರ ಮೂರು ತಿಂಗಳಿನಲ್ಲಿಯೇ ಆಕೆಯ ಸೇವೆ ಖಾಯಂ ಮಾಡಲಾಗಿತ್ತು.[ಫೇಕ್ ಫೇಕ್ 169 ಕಂಪನಿ, 25K ಟೆಕ್ಕಿಸ್]

ಅಲ್ಲದೇ 2013ರ ಮೇ 8ರಂದು ಆಕೆಯ ವೇತನ ಶೇ. 8ರಷ್ಟು ಹೆಚ್ಚು ಮಾಡಲಾಗಿತ್ತು. ಆದರೆ ಉಳಿದ ಸಹೋದ್ಯೋಗಿಗಳಿಗೆ ಶೇ. 5ರಷ್ಟು ಮಾತ್ರ ಹೆಚ್ಚು ಮಾಡಲಾಗಿತ್ತು. ಇದಲ್ಲದೇ ಕಂಪನಿಯ ಹಿರಿಯ ಅಧಿಕಾರಿಗಳು ಆಕೆಗೆ ಅಮೆರಿಕದಿಂದ ಪ್ರಶಂಸಾ ಪತ್ರವನ್ನೂ ಕಳುಹಿಸಿದ್ದರು.

ಆದರೆ ಒಂದು ತಿಂಗಳ ನಂತರ ಪರಿಸ್ಥಿತಿ ಭಿನ್ನವಾಗುತ್ತದೆ. ಆಕೆಗೆ ಕಂಪನಿ ಮ್ಯಾನೇಜರ್ ಫರ್ಫಾಮೆನ್ಸ್ ಸುಧಾರಿಸಿಕೊಳ್ಳಿ ಎಂದು ತಿಳಿಸಿಸುತ್ತಾರೆ. ಈ ಬಗ್ಗೆ ಮಹಿಳಾ ಟೆಕ್ಕಿ ಎಚ್ ಆರ್ ಮತ್ತು ಹಿರಿಯ ಅಧಿಕಾರಿಗಳ ಬಳಿ ದೂರು ನೀಡಿದರೂ ಸೂಕ್ತ ಸ್ಪಂದನೆ ಸಿಗುವುದಿಲ್ಲ. 2013ರ ಅಕ್ಟೋಬರ್ 29 ರಂದು ಆಕೆಯನ್ನು ಇದ್ದಕ್ಕಿದ್ದಂತೆ ಕೆಲಸದಿಂದ ತೆಗೆದುಹಾಕಲಾಗುತ್ತದೆ.[ನಾಪತ್ತೆಯಾಗಿದ್ದ ವಿವಾಹಿತ ಮಹಿಳಾ ಟೆಕ್ಕಿ ಮರಳಿ ಮನೆಗೆ]

ಇದನ್ನು ಸಹಿಸದ ಮಹಿಳಾ ಟೆಕ್ಕಿ ಮಹಿಳಾ ಆಯೋಗಕ್ಕೆ ದೂರು ದಾಖಲಿಸಿದ್ದರು. ಅಲ್ಲದೇ ಅನವಶ್ಯಕವಾಗಿ ಕಿರುಕುಳ ನೀಡಿದ್ದಾನೆ ಎಂದು ಮ್ಯಾನೆಜರ್ ಮೇಲೆಯೂ ದೂರು ದಾಖಲಿಸಿದ್ದಳು. ಮಹಿಳಾ ಆಯೋಗ ಪ್ರಕರಣವನ್ನು ಕಾರ್ಮಿಕ ಇಲಾಖೆಗೆ ಹಸ್ತಾಂತರಿಸಿದ ನಂತರ ವಿಚಾರಣೆ ನಡೆಸಿ ಇದೀಗ ಕಂಪನಿಗೆ 12.5 ಲಕ್ಷ ರೂ. ಪರಿಹಾರ ನೀಡುವಂತೆ ಸೂಚನೆ ನೀಡಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
​In a landmark case, a US-based IT firm has been asked to compensate a techie employed at its C V Raman Nagar office in Bengaluru for illegally terminating her services without providing valid reasons and for causing harassment. The labour department, which heard the case, has directed the company to shell out Rs 12.5 lakh. The 27-year-old techie, a native of Delhi, had challenged the decision of the company by first approaching the state women's commission and then the labour department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more