ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು; ಜಮೀನಿನಲ್ಲಿ ಲೇಔಟ್, ಪಟ್ಟಣೆಗೆರೆ ರೈತರ ಪ್ರತಿಭಟನೆ

|
Google Oneindia Kannada News

ಬೆಂಗಳೂರು, ಮೇ. 22: ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿ ರೈತರ ಜಮೀನಿನಲ್ಲಿ ಅಕ್ರಮವಾಗಿ ಬಡಾವಣೆ ನಿರ್ಮಾಣ ಮಾಡುತ್ತಿರುವ ಖಾಸಗಿ ಕಂಪನಿ ವಿರುದ್ಧ ಪಟ್ಟಣಗೆರೆ ರೈತರು ತಿರುಗಿ ಬಿದ್ದಿದ್ದಾರೆ.

ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ಸಹ ಪಟ್ಟಣಗೆರೆ ಗ್ರಾಮದ 3 ಎಕರೆ ಜಮೀನಿನಲ್ಲಿ ಬಡಾವಣೆ ನಿರ್ಮಿಸಲು ಟ್ರಿಂಕೋ ಇನ್‌ ಫ್ರಾ. ಪ್ರೈವೆಟ್ ಲಿ. ಮುಂದಾಗಿತ್ತು. ಲೇಔಟ್‌ನಲ್ಲಿ ಜೆಸಿಬಿಗಳ ಮೂಲಕ ಕಾಮಗಾರಿ ನಿರ್ವಹಿಸಲು ಯತ್ನಿಸಿತ್ತು.

ಟಿವಿ ನಿರೂಪಕರಿಗೆ ಹೊಸ ಆದೇಶ ಹೊರಡಿಸಿದ; ತಾಲಿಬಾನ್ ಟಿವಿ ನಿರೂಪಕರಿಗೆ ಹೊಸ ಆದೇಶ ಹೊರಡಿಸಿದ; ತಾಲಿಬಾನ್

ರೈತರ ಜಮೀನನ್ನು ಅಕ್ರಮವಾಗಿ ಆಕ್ರಮಿಸಿಕೊಂಡು ಬಡಾವಣೆ ನಿರ್ಮಾಣ ಮಾಡುವ ನೆಪದಲ್ಲಿ ರೈತರಿಗೆ ನೀಡುತ್ತಿರುವ ಕಿರುಕುಳ ವಿರೋಧಿಸಿ ರೈತರು ಪ್ರತಿಭಟನೆ ನಡೆಸಿದರು.

Pattanagere Farmers Protest Against Real Estate Company

ಬೆಂಗಳೂರು ದಕ್ಷಿಣ ತಾಲ್ಲೂಕು ಕೆಂಗೇರಿ ಹೋಬಳಿ ಪಟ್ಟಣಗೆರೆ ಗ್ರಾಮದ ಸರ್ವೇ ನಂ 68 (ಹಳೇ ನಂ 10) ರಲ್ಲಿ 3 ಏಕರೆ ರೈತರ ಜಮೀನಿದ್ದು, ಇದಕ್ಕೆ ಸಂಬಂಧಿಸಿದಂತೆ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ಬಾಕಿಯಿದೆ.

ಈ ವಿವಾದಿತ ಜಮೀನಿನಲ್ಲಿ ಯಾವುದೇ ಥರಹದ ಕಾಮಗಾರಿಗಳನ್ನು ಕೈಗೊಳ್ಳಬಾರದು ಎಂದು ತಡೆಯಾಜ್ಞೆ ನೀಡಲಾಗಿದೆ. ಆದರೂ ಸಹ ಸಹ, M/s Trinco Infra Priviate Limited ಸಂಸ್ಥೆ ಲೇಔಟ್ ನಿರ್ಮಿಸುವ ಕಾಮಗಾರಿ ಕೈಗೆತ್ತಿಕೊಂಡಿದೆ. ಕೆಲ ಗೂಂಡಾಗಳು ರೈತರ ಮೇಲೆ ದಬ್ಬಾಳಿಕೆ ಮಾಡುವ ಯತ್ನ ನಡೆಸಿದ್ದಾರೆ.

ಯಾವುದೇ ಲೇಔಟ್‌ ಕೂಡಾ ನಿರ್ಮಿಸದೇ ರೈತರುಗಳೇ ಈ ಜಮೀನನ್ನು ಹೊಂದುವ ಅಭಿಲಾಷೆ ಹೊಂದಿದ್ದರೂ ನಮ್ಮಿಂದ ನಮ್ಮ ಜಮೀನನ್ನು ಕಿತ್ತುಕೊಳ್ಳಲು ಹುನ್ನಾರ ನಡೆದಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿ ಅರಿತ ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು.

Pattanagere Farmers Protest Against Real Estate Company

Recommended Video

ಬೆಸ್ಟ್ ಓಪನರ್ಸ್ ಆಫ್ ಐಪಿಎಲ್ 2022 | OneIndia Kannada

English summary
Farmers protested against builder company in Pattanagare village at Bengaluru know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X