ಕ್ಯೂನಿಂತ ಪ್ರಯಾಣಿಕರ ಕೈಗೆ ರೈಲ್ವೆ ಟಿಕೆಟ್, ಬೆಂಗಳೂರಿನಲ್ಲಿ ಏನಿದು ಹೊಸ ಯೋಜನೆ?

ಬೆಂಗಳೂರು, ನವೆಂಬರ್ 06: ರೈಲ್ವೆ ಟಿಕೆಟ್ ಹಂಚಿಕೆಯಲ್ಲಿ ಹಳೆಯ ಸಂಪ್ರದಾಯಗಳನ್ನು ಈಗಾಗಲೇ ಬದಲಾವಣೆ ಮಾಡಲಾಗುತ್ತಿದೆ. ತಾಸುಗಟ್ಟಲೇ ಕ್ಯೂನಿಂತು ಟಿಕೆಟ್ ಪಡೆಯುತ್ತಿದ್ದ ಹಲವರು ಈಗ ಆನ್‌ಲೈನ್ ಮೂಲಕ ಸುಲಭವಾಗಿ ಟಿಕೆಟ್ ಬುಕ್ ಮಾಡುತ್ತಿದ್ದಾರೆ. ಈಗ ಭಾರತೀಯ ರೈಲ್ವೆ ಇನ್ನಷ್ಟು ಪ್ರಯಾಣಿಕ ಸ್ನೇಹಿ ವ್ಯವಸ್ಥೆಯನ್ನು ಜಾರಿಗೊಳಿಸುತ್ತಿದೆ. ನೈಋತ್ಯ ರೈಲ್ವೆ ಬೆಂಗಳೂರು ನಗರದ ಮೂರು ರೈಲು ನಿಲ್ದಾಣದಲ್ಲಿ ಈ ಮಾದರಿಯ ಟಿಕೆಟಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸಿದೆ.

ಬೆಂಗಳೂರು ನಗರದಲ್ಲಿ ಪ್ರಾಯೋಗಿಕವಾಗಿ ಪ್ರಯಾಣಿಕರು ಕ್ಯೂನಿಂತ ಜಾಗದಲ್ಲಿಯೇ ಅವರಿಗೆ ಟಿಕೆಟ್ ತಲುಪಿಸುವ ವ್ಯವಸ್ಥೆಯನ್ನು ನೈಋತ್ಯ ರೈಲ್ವೆ ಪರಿಚಯಿಸಿದೆ. ಕಾಯ್ದಿರಿಸದ ಮೊಬೈಲ್ ಟಿಕೆಟ್ ವ್ಯವಸ್ಥೆ ಅಡಿ ಕೌಂಟರ್ ಬದಲು ಪ್ರಯಾಣಿಕರು ತಾವು ನಿಂತಲ್ಲಿಯೇ ರೈಲ್ವೆ ಟಿಕೆಟ್ ಪಡೆಯಬಹುದಾಗಿದೆ. ಈ ವ್ಯವಸ್ಥೆಗೆ ಪ್ರಯಾಣಿಕರ ಮೆಚ್ಚುಗೆಯೂ ವ್ಯಕ್ತವಾಗಿದೆ.

Passengers Can Collect Railway Tickets At Queue In Bengaluru

ನೈಋತ್ಯ ರೈಲ್ವೆ ನಗರದ ಜನದಟ್ಟಣೆಯ ಮೂರು ರೈಲು ನಿಲ್ದಾಣಗಳಲ್ಲಿ ಕ್ಯೂನಿಂತ ಪ್ರಯಾಣಿಕರ ಕೈಗೆ ಟಿಕೆಟ್ ನೀಡುವ ಸೌಲಭ್ಯವನ್ನು ಜಾರಿಗೊಳಿಸಿದೆ. ನಿಲ್ದಾಣದ 500 ಮೀಟರ್‌ವ್ಯಾಪ್ತಿಯಲ್ಲಿ ಪ್ರಯಾಣಿಕರು ಟಿಕೆಟ್‌ಗಾಗಿ ಸಾಲುಗಟ್ಟಿ ನಿಂತಿದ್ದರೆ ಈ ವ್ಯವಸ್ಥೆ ಮೂಲಕ ಅವರು ನಿಂತ ಜಾಗದಲ್ಲಿಯೇ ಟಿಕೆಟ್‌ಗಳನ್ನು ಖರೀದಿ ಮಾಡಬಹುದಾಗಿದೆ.

ಯಾವ-ಯಾವ ನಿಲ್ದಾಣಗಳು?; ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗ ಕೆಎಸ್ಆರ್ ಬೆಂಗಳೂರು (ಮೆಜೆಸ್ಟಿಕ್), ಯಶವಂತಪುರ ಮತ್ತು ಸರ್ ಎಂ. ವೀಶ್ವೇಶ್ವರಯ್ಯ ಟರ್ಮಿನಲ್ ಬೈಯಪ್ಪನಹಳ್ಳಿ ರೈಲು ನಿಲ್ದಾಣದೊಳಗೆ 500 ಮೀಟರ್‌ ವ್ಯಾಪ್ತಿಯಲ್ಲಿ ಪ್ರಯಾಣಿಕರು ಟಿಕೆಟ್‌ಗಾಗಿ ಸಾಲುಗಟ್ಟಿ ನಿಂತಿದ್ದರೆ ಅವರ ಕೈಗೆ ಟಿಕೆಟ್ ನೀಡುವ ವ್ಯವಸ್ಥೆ ಜಾರಿಗೊಳಿಸಿದೆ.

ಕಾಯ್ದಿರಿಸದ ಮೊಬೈಲ್ ಟಿಕೆಟ್ ವ್ಯವಸ್ಥೆ ಅಡಿ ಪ್ರಯಾಣಿಕರು ಕೌಂಟರ್ ಬದಲು, ತ್ವರಿತವಾಗಿ ನಿಂತ ಜಾಗದಲ್ಲಿಯೇ ಟಿಕೆಟ್ ಪಡೆಯಬಹುದಾಗಿದೆ. ಸದ್ಯ ಮೂರು ನಿಲ್ದಾಣಗಳಲ್ಲಿ ಈ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಜನದಟ್ಟಣೆಯ ಎಲ್ಲಾ ನಿಲ್ದಾಣಗಳಲ್ಲಿ ಈ ವ್ಯವಸ್ಥೆ ಜಾರಿಗೊಳಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರೈಲ್ವೆ ಟಿಕೆಟ್ ನೀಡುವ ಪ್ರಕ್ರಿಯೆ ಸರಳಗೊಳಿಸಲು ಮತ್ತು ಪ್ರಯಾಣಿಕರು ತಾಸುಗಟ್ಟಲೇ ಟಿಕೆಟ್‌ಗಾಗಿ ಕಾಯುವುದನ್ನು ತಪ್ಪಿಸಲು ಬಹುಬೇಗ ಪ್ರಯಾಣಿಕರ ಕೈಗೆ ಟಿಕೆಟ್ ನೀಡುವ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಇದಕ್ಕಾಗಿಯೇ ಬಸ್ ನಿರ್ವಾಹಕರ ಕೈಯಲ್ಲಿರುವ ಮಾದರಿಯಲ್ಲಿ ಟಿಕೆಟಿಂಗ್ ಯಂತ್ರಗಳನ್ನು ಪರಿಚಯಿಸಲಾಗಿದೆ. ರೈಲ್ವೆ ಇಲಾಖೆ ಸಿಬ್ಬಂದಿ ಈ ಸಾಧನದ ಮೂಲಕ ಹಣ ಪಡೆದು, ಸ್ಥಳದಲ್ಲಿಯೇ ಪ್ರಯಾಣಿಕರಿಗೆ ಟಿಕೆಟ್‌ಗಳನ್ನು ತ್ವರಿತವಾಗಿ ನೀಡಲಿದ್ದಾರೆ.

ಈ ವ್ಯವಸ್ಥೆಯಲ್ಲಿ ಕ್ಯೂ ಆರ್ ಕೋಡ್ ಸ್ಕ್ಯಾನ್‌ ಮಾಡಿ ಟಿಕೆಟ್‌ಗೆ ಹಣ ಪಾವತಿ ಮಾಡುವ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. ಇದರಿಂದಾಗಿ ರೈಲ್ವೆ ನಿಲ್ದಾಣಗಳಲ್ಲಿ ಜನರು ಕಾಯುವುದು ತಪ್ಪಲಿದೆ. ಸಾಂಪ್ರದಾಯಿಕ ಟಿಕೆಟ್ ಕೌಂಟರ್‌ಗಳ ಮುಂದೆ ಪ್ರಯಾಣಿಕರ ದಟ್ಟಣೆಯೂ ಕಡಿಮೆಯಾಗಲಿದೆ. ಜನರು ಸಹ ರೈಲ್ವೆ ಇಲಾಖೆ ಹೊಸ ಕ್ರಮವನ್ನು ಮೆಚ್ಚಿದ್ದಾರೆ. ತಾವು ನಿಂತ ಸ್ಥಳದಲ್ಲಿಯೇ ಟಿಕೆಟ್‌ ಪಡೆಯುತ್ತಿದ್ದಾರೆ.

ಭಾರತೀಯ ರೈಲ್ವೆ ಇನ್ನಷ್ಟು ಪ್ರಯಾಣಿಕ ಸ್ನೇಹಿಯಾಗಲು ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ರೈಲ್ವೆ ಟಿಕೆಟ್ ಬುಕ್, ಪ್ಲಾಟ್ ಫಾರ್ಮ್‌ ಟಿಕೆಟ್ ಬುಕ್ಕಿಂಗ್, ಆಹಾರ ಬುಕ್ ಎಲ್ಲದಕ್ಕೂ ಅನುಕೂಲವಾಗುವ ಒಂದೇ ಅಪ್ಲಿಕೇಶನ್‌ನನ್ನು ರೈಲ್ವೆ ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡಲಿದೆ. ಆನ್‌ಲೈನ್ ಟಿಕೆಟಿಂಗ್ ವ್ಯವಸ್ಥೆಯಲ್ಲಿಯೂ ಹಲವು ಬದಲಾವಣೆ ಮಾಡಿದ್ದು, ಜನರು ಈಗ ಸುಲಭವಾಗಿ ಟಿಕೆಟ್ ಕಾಯ್ದಿರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+