ಪಾರ್ಕ್ ವಿಹಾರಕ್ಕೆ 1 ಗಂಟೆ ಹೆಚ್ಚು ಸಮಯ ನೀಡಿದ ಸರ್ಕಾರ
ಬೆಂಗಳೂರು, ಮೇ 25: ಕೊರೊನಾವೈರಸ್ ಲಾಕ್ಡೌನ್ 4.0 ನಡುವೆ ಪಾರ್ಕ್ ಗಳಲ್ಲಿ ವಿಹಾರ, ಜಾಗಿಂಗ್, ವಾಕಿಂಗ್ ಮಾಡಲು ಕರ್ನಾಟಕ ಸರ್ಕಾರ ಅನುಮತಿ ನೀಡಿದೆ. ಮೇ 19ರಂದು ಪಾರ್ಕ್ ಬಳಿ ಕಂಡು ಬಂದಿದ್ದ ದೃಶ್ಯ ಈಗ ಮತ್ತೆ ಸೋಮವಾರ ಪುನರಾವರ್ತನೆಯಾಗಿದೆ. ಸಂಡೆ ಕರ್ಫ್ಯೂ ಬಳಿಕ ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಪಾರ್ಕ್ ಗಳು ಮತ್ತೆ ಓಪನ್ ಆಗಿವೆ.
Recommended Video
ಲಾಲ್ ಬಾಗ್, ಕಬ್ಬನ್ ಪಾರ್ಕ್ ಸೇರಿದಂತೆ ಬಿಬಿಎಂಪಿ ವ್ಯಾಪ್ತಿಯ ಪಾರ್ಕ್ ಗಳು ಓಪನ್ ಆಗಿವೆ. 57 ದಿನಗಳ ನಂತರ ಪಾರ್ಕ್ ಗಳನ್ನು ತೆರೆಯಲು ಗ್ರೀನ್ ಸಿಗ್ನಲ್ ಕೊಟ್ಟಿದ್ದ ಸರ್ಕಾರ, ಬೆಳಗ್ಗೆ 7 ರಿಂದ 9 ಹಾಗೂ ಸಂಜೆ 5 ರಿಂದ 7 ಗಂಟೆವರೆಗೂ ವಿಹಾರಕ್ಕೆ ಅನುಮತಿ ನೀಡಿತ್ತು. ಆದರೆ, ನಡಿಗೆದಾರರ ಸಂಘದವರು ಇನ್ನು ಒಂದು ಗಂಟೆ ಅವಧಿ ವಿಸ್ತರಣೆ ಮಾಡುವಂತೆ ಕಳೆದ ವಾರವೇ ಮನವಿ ಮಾಡಿದ್ದರು.
Morning walk in Lalbagh completed 9.5 KM today #daily10kchallenge @ Lalbagh Botanical Garden, Banglore https://t.co/GYf4UuLHEY
— Poornesh Sharma B (@poornesh4u) May 25, 2020
ಸೋಮವಾರ(ಮೇ 25) ಸರತಿ ಸಾಲಿನಲ್ಲಿ ನಿಂತಿರೋ ವಾಕರ್ಸ್ ಗಳಿಗೆ ಸರ್ಕಾರ ಶುಭ ಸುದ್ದಿ ನೀಡಿದ್ದು, 3 ಗಂಟೆ ವಾಕ್ ಮಾಡೋಕೆ ಅನುಮತಿ ನೀಡಿದೆ. 1 ಗಂಟೆ ಹೆಚ್ಚು ಸಮಯವನ್ನು ನಿಗದಿ ಮಾಡಿರೋ ಸರ್ಕಾರ, ಲಾಲ್ ಬಾಗ್ ಬೆಳಗ್ಗೆ 7 ರಿಂದ 10 ಗಂಟೆವರೆಗೆ ಓಪನ್ ಆಗಿರುತ್ತದೆ ಎಂದು ಹೇಳಿದೆ.

ಲಾಲ್ ಬಾಗ್ ಪ್ರವೇಶಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂಬ ನಿಯಮ ಮಾಡಲಾಗಿದೆ. ಹ್ಯಾಂಡ್ ಸ್ಯಾನಿಟೈಸರ್ ಬಳಸಿ ಕೈ ತೊಳೆದುಕೊಂಡ ಬಳಿಕ ಉದ್ಯಾವನವಕ್ಕೆ ಎಂಟ್ರಿ ನೀಡಲಾಗುತ್ತಿದೆ. ಜೊತೆಗೆ ಪ್ರವೇಶ ದ್ವಾರದ ಬಳಿಕ ಟೆಂಪರೇಚರ್ ಚೆಕ್ ಮಾಡಲಾಗುತ್ತಿದೆ. ಹಲವು ವರ್ಷಗಳಿಂದ ಪ್ರತಿನಿತ್ಯ ಇಲ್ಲಿಗೆ ಬರುವ ನಡಿಗೆದಾರರು ಈ ನಿಯಮಗಳನ್ನು ಪಾಲಿಸುತ್ತಿದ್ದಾರೆ. ಮುಂಜಾನೆ ಬೇಗ ಬಂದು ಸರತಿ ಸಾಲಿನಲ್ಲಿ ನಿಂತು ನಂತರ ಒಳಪ್ರವೇಶಿಸುತ್ತಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯ ಇತರೆ ಪಾರ್ಕ್ ಗಳಲ್ಲಿ ಅಳವಡಿಸಲಾಗಿರುವ ಜಿಮ್ ಸಾಧನಗಳ ಬಳಕೆಯನ್ನು ನಿರ್ಬಂಧಿಸಲಾಗಿದೆ. ಪಾರ್ಕ್‌ನ ಒಳಗಿನ ಜಿಮ್ ಉಪಕರಣಗಳ ಬಳಕೆಯನ್ನು ನಿಷೇಧಿಸಲಾಗಿದ್ದು, ಆ ಉಪಕರಣಗಳನ್ನು ಬಳಸುವ ಮೂಲಕ, ವೈರಸ್ ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಧ್ಯತೆ ಹೆಚ್ಚಿದೆ. ಸಾಮಾಜಿಕ ಅಂತರ ಕಾಪಾಡಿಕೊಂಡು ಪಾರ್ಕ್ ಬಳಕೆ ಮಾಡುವಂತೆ ಬಿಬಿಎಂಪಿ ಅಧಿಕಾರಿ ಸೂಚಿಸಿದ್ದಾರೆ.
-
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ












Click it and Unblock the Notifications