ನೇಣುಬಿಗಿದ ಸ್ಥಿತಿಯಲ್ಲಿ ಯುವತಿಯ ಮೃತ ದೇಹ ಪತ್ತೆ

ಬೆಂಗಳೂರು, ಜೂನ್ 21: ಯುವತಿಯೊಬ್ಬಳು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ಘಟನೆ ನಡೆದಿದ್ದು, ಲಿವಿಂಗ್ ಟುಗೆದರ್‌ನಲ್ಲಿದ್ದಳು ಎನ್ನಲಾಗಿದೆ.ಗೀತಾ ಮೃತ ಯುವತಿ. ಗೀತಾ ಗೋಲ್ಡನ್ ಸಿಮ್ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದಳು. ಮೂಲತಃ ಶಿವಮೊಗ್ಗದ ಸಾಗರದ ನಿವಾಸಿಯಾಗಿದ್ದು, ಕಳೆದ ಎರಡು ವರ್ಷಗಳಿಂದ ವಿಕಾಸ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ವಿಕಾಸ್ ಕೂಡ ಅದೇ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

ಪೋಷಕರು ಅತ್ಯಾಚಾರ ಮಾಡಿ ಹತ್ಯೆ ಮಾಡಿರುವುದಾಗಿ ದೂರು ನೀಡಿದ್ದಾರೆ. ಈ ಹಿಂದೆ ಮನೆ ಕಟ್ಟಲು ಗೀತಾಳ ಬಳಿ ವಿಕಾಸ್ ಮೂರು ಲಕ್ಷ ಹಣ ಪಡೆದುಕೊಂಡಿದ್ದನು ಎಂದು ತಿಳಿದು ಬಂದಿದೆ. ಸದ್ಯಕ್ಕೆ ವಿಕಾಸ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Parents alleges boyfriend raped and killed her

ಮದುವೆಯ ವಿಚಾರವಾಗಿ ವಿಕಾಸ್ ಮತ್ತು ಗೀತಾ ನಡುವೆ ಜಗಳವಾಗಿತ್ತು. ಎರಡು ವರ್ಷ ಪ್ರೀತಿಸಿ ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದನು. ಈಗ ಗೀತಾಳನ್ನ ಮದುವೆಯಾಗಲು ವಿಕಾಸ್ ನಿರಾಕರಿಸಿದ್ದ. ಇದೇ ವಿಚಾರವಾಗಿ ಪದೇ ಪದೇ ಇಬ್ಬರು ಜಗಳವಾಡುತ್ತಿದ್ದರು.

ಅಷ್ಟೇ ಅಲ್ಲದೇ ತಾನು ಬೇರೆ ಯುವತಿಯನ್ನ ಮದುವೆಯಾಗುವುದಾಗಿ ವಿಕಾಸ್ ಹೇಳಿದ್ದನು. ಈ ಜಗಳವೇ ಆಕೆಯ ಕೊಲೆಗೆ ಕಾರಣ ಎಂದು ಆರೋಪಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+