ವಿಎಚ್‌ಪಿ ಮಾಜಿ ನಾಯಕ ಪ್ರವೀಣ್ ತೊಗಾಡಿಯಾರಿಂದ ಹೊಸ ಸಂಘಟನೆ
ಬೆಂಗಳೂರು, ಮೇ 21: ಒಂದು ಕಾಲದ ದೇಶದ ಉಗ್ರ ಹಿಂದೂ ನಾಯಕರೆನಿಸಿದ್ದ ವಿಶ್ವ ಹಿಂದೂ ಪರಿಷತ್ ಮುಖ್ಯಸ್ಥ ಡಾ. ಪ್ರವೀಣ್‌ಭಾಯಿ ತೊಗಾಡಿಯಾ ಇದೀಗ ಪ್ರತ್ಯೇಕ ಹಿಂದೂ ಸಂಘಟನೆ ರಚನೆಗೆ ಮುಂದಾಗಿದ್ದಾರೆ. ಮಾತ್ರವಲ್ಲ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಹರಿಹಾಯ್ದಿದ್ದಾರೆ.
ಸಂಘಟನೆ ಕುರಿತು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜೂನ್ 24ರಂದು ದೆಹಲಿಯಲ್ಲಿ ಸಂಘಟನೆ ಉದ್ಘಾಟನೆಗೊಳ್ಳಲಿದೆ, ಜಾತ್ಯತೀತ ಶಕ್ತಿಗಳು ಒಗ್ಗೂಡುತ್ತಿರುವ ರೀತಿಯಲ್ಲಿ ,ಹಿಂದೂ ಪರ ಸಂಘಟನೆಗಳನ್ನು ಒಗ್ಗೂಡಿಸಿ ಮುನ್ನಡೆಯಲು ಈ ಸಂಘಟನೆ ಆರಂಭಿಸಲಾಗುತ್ತಿದೆ ಎಂದರು.

ರಂಜಾನ್ ಹಿನ್ನೆಲೆ ಸೈನಿಕರ ಮೇಲೆ ಕಲ್ಲು ತೂರುವವರ ವಿರುದ್ಧ ಕ್ರಮ ಇಲ್ಲ ಎಂದು ಮೋದಿ ಹೇಳಿದ್ದರು. ಪಾಕಿಸ್ತಾನದವರು ರಂಜಾನ್ ಸಂದರ್ಭದಲ್ಲಿಯೇ 8 ಜನ ಭಾರತೀಯರು ಸೇರಿ ಬಿಎಸ್ಎಫ್ ಯೋಧನನ್ನು ಕೊಂದಿದ್ದಾರೆ ಅವರಿಗಿಲ್ಲದ ರಂಜಾನ್ ಚಿಂತೆ ಮೋದಿಗಿದೆ ಎಂದು ಹರಿಹಾಯ್ದಿದ್ದಾರೆ.












Click it and Unblock the Notifications