ಒಯೋ ರೂಮ್‌ಗಳಲ್ಲಿ ಜಾಲಿ, ಜಾಲಿ, ಕಾಂಡೋಮ್ಸೆಲ್ಲಾ ಖಾಲಿ, ಖಾಲಿ: ಹೊಸವರ್ಷದ ರಾತ್ರಿಲಿ ಅನುರಾಗದ ಅಲೇಲಿ ಬೆಂದಕಾಳೂರು
ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದೆಲ್ಲೆಡೆ 2025ರ ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಇನ್ನೂ ಹೊಸ ವರ್ಷದ ಮೊದಲ ರಾತ್ರಿ ದಾಖಲೆ ಮಟ್ಟದಲ್ಲಿ ಓಯೋ ರೂಂಗಳು ಬುಕ್ ಆಗಿದ್ದು, ಮತ್ತೊಂದೆಡೆ ಕಾಂಡೋಮ್‌ಗಳಿಗೂ ಭಾರೀ ಬೇಡಿಕೆ ಬಂದ ಘಟನೆಗಳು ಬೆಂಗಳೂರಿನಲ್ಲಿ ನಡೆದಿವೆ ಎಂದು ತಿಳಿದುಬಂದಿದೆ. ಹಾಗಾದರೆ ಆ ಒಂದೇ ರಾತ್ರಿಗೆ ಎಷ್ಟು ಓಯೋ ರೂಂ ಬುಕಿಂಗ್ ಹಾಗೂ ಎಷ್ಟು ಕಾಂಡೋಮ್‌ಗಳನ್ನು ಮಾರಾಟವಾಗಿವೆ ಎಂದು ಇಲ್ಲಿ ತಿಳಿಯಿರಿ.
ಹೊಸ ವರ್ಷವನ್ನು ಅದ್ಧೂರಿಯಾಗಿ ಬರಮಾಡಿಕೊಂಡಿರುವ ದೇಶದ ಪ್ರಮುಖ ನಗರಗಳ ಪಟ್ಟಿಯಲ್ಲಿ ಕರ್ನಾಟಕದ ರಾಜಧಾನಿ ಬೆಂಗಳೂರು ಕೂಡ ಒಂದಾಗಿದೆ. ಇಲ್ಲಿ ಹೊಸ ವರ್ಷವನ್ನು ಪ್ರತಿ ಬಾರಿಯಂತೆ ಈ ಬಾರಿಯೂ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ನಗರದ ಎಂಜಿ ರಸ್ತೆ, ಬ್ರಿಗೇಡ್, ಚರ್ಚ್ ಸ್ಟ್ರೀಟ್, ಕೋರಮಂಗಲ ಸೇರಿದಂತೆ ಹಲವೆಡೆ 2024ರ ಡಿಸೆಂಬರ್ 31 ಅಂದರೆ ಜನವರಿ 1 2025ರಂದು ಜನಜಂಗುಳಿಯೇ ನೆರೆದಿತ್ತು.

ಇದೇ ವೇಳೆ ಕೆಲವೊಂದು ಫ್ಲೇವರ್‌ಗಳ ಕಾಂಡೋಮ್‌ಗಳನ್ನು ಅತೀ ಹೆಚ್ಚಾಗಿ ಬಳಕೆ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಕೆಲವು ಫ್ಲೇವರ್ ಕಾಂಡೋಮ್‌ಗಳನ್ನು ಹೆಚ್ಚಾಗಿ ಬಳಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಮಾಹಿತಿಯ ಪ್ರಕಾರ, ಓಯೋ ರೂಂಗಳನ್ನು ಬುಕ್ ಮಾಡಿದ ಬಹುತೇಕ ಮಂದಿ ಚಾಕೋಲೇಟ್ ಫ್ಲೇವರ್ ಕಾಂಡೋಮ್ ಬಳಕೆ ಮಾಡಿದ್ದಾರೆ ಎನ್ನುವ ಮಾಹತಿ ಲಭ್ಯವಾಗಿದೆ.
ನಾವು 2024 ಮುಗಿಸಿ 2025ಕ್ಕೆ ಕಾಲಿಟ್ಟಿದ್ದೇವೆ. ಅದರಲ್ಲೂ ಹೊಸ ವರ್ಷದ ಮೊದಲ ರಾತ್ರಿಯಂತೂ ಎಲ್ಲೆಡೆ ಸಂಭ್ರಾಮಾಚರಣೆ ಜೋರಾಗಿಯೇ ಇತ್ತು. ಮತ್ತೊಂದೆಡೆ ಲಾಡ್ಜ್, ಪಬ್, ರೆಸ್ಟೋರೆಂಟ್‌ಗಳೆಲ್ಲವೂ ಕೂಡ ಎಲ್ಲಾ ಬುಕ್ ಆಗಿದ್ದವು. ಆದರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಂತೂ ಕೇಳಬೇಕಾ. ಅಂದೇ ರಾತ್ರಿ ಓಯೋ ರೂಂಗಳು ದಾಖಲೆ ಮಟ್ಟದಲ್ಲಿ ಬುಕ್ ಆಗಿದ್ದವು. ಅಷ್ಟೇ ಪ್ರಮಾಣದಲ್ಲಿ ಕಾಂಡೋಮ್‌ಗಳನ್ನು ಖರೀದಿ ಮಾಡಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.
2025ರ ಹೊಸ ವರ್ಷದಂದು ಅಂದರೆ ಡಿಸೆಂಬರ್ 31, 2024ರ ರಾತ್ರಿ ಒಂದೇ ದಿನ ಬ್ಲಿಂಕಿಟ್, ಝೊಮ್ಯಾಟೊ, ಸ್ವಿಗ್ಗಿಯಲ್ಲಿ ಅತೀ ಹೆಚ್ಚು ಆಹಾರ ಆರ್ಡರ್ ಮಾಡಿದರೆ, ಇನ್ನು ಒಯೋ ರೂಮ್‌ಗಳನ್ನು ಕೂಡ ಅದೇ ರೀತಿಯಲ್ಲಿ ಅತೀ ಹೆಚ್ಚಾಗಿ ಬುಕ್ ಮಾಡಿದ್ದಾರೆ. ಮತ್ತು ಫುಡ್ ಡೆಲಿವರಿ ಕಂಪನಿ ಝೊಮೆಟೋದಲ್ಲಿಯೂ ಕೂಡ ಡಿಸೆಂಬರ್ 31, 2024ರಂದು ಒಂದೇ ದಿನದಲ್ಲಿ ಅತಿ ಹೆಚ್ಚು ಆರ್ಡರ್‌ಗಳನ್ನು ಮಾಡಿದ್ದಾರೆ ಎನ್ನುವ ಶಾಕಿಂಗ್ ಮಾಹಿತಿಯೊಂದು ಹೊರಬಿದ್ದಿದೆ.
ಇನ್ನು ಕಳೆದ ವರ್ಷ ಅಂದರೆ 2024ರ ಹೊಸ ವರ್ಷದ ಮುನ್ನಾದಿನವೇ ದಾಖಲೆ ಮಟ್ಟದಲ್ಲಿ ಕಾಂಡೋಮ್‌ಗಳನ್ನು ಬುಕ್ ಮಾಡಿದ್ದರು. 3.2 ಲಕ್ಷಕ್ಕೂ ಹೆಚ್ಚು ವಿತರಣಾ ಪಾಲುದಾರರು ಆರ್ಡರ್‌ಗಳನ್ನು ಸ್ವೀಕರಿಸಿ ವಿತರಿಸಿದ್ದರು ಮತ್ತು ಹೆಚ್ಚಿನ ಆರ್ಡರ್‌ಗಳನ್ನು ಮಹಾರಾಷ್ಟ್ರದಿಂದ ಮಾಡಲಾಗಿತ್ತು ಎಂದು ತಿಳಿದುಬಂದಿತ್ತು. ಅಂಕಿಅಂಶಗಳ ಪ್ರಕಾರ, 125 ಐಟಂಗಳನ್ನು ಲಭ್ಯವಿದ್ದು, ಹೊಸ ವರ್ಷದ ಮುನ್ನಾದಿನದಂದು ಕೋಲ್ಕತ್ತಾದಲ್ಲಿ ಜನರು ಜೊಮ್ಯಾಟೊದಲ್ಲಿ ಒಟ್ಟು 97 ಲಕ್ಷ ರೂಪಾಯಿ ಮೊತ್ತದ ಐಟಂಗಳನ್ನು ಖರೀದಿಸಿದ್ದಾರೆ. 1.47 ಲಕ್ಷ ಚಿಪ್ಸ್ ಪ್ಯಾಕೆಟ್‌ಗಳು, 68,231 ಸೋಡಾ ಬಾಟಲಿಗಳು, 2,412 ಪ್ಯಾಕೆಟ್ ಐಸ್ ಕ್ಯೂಬ್‌ಗಳು ಮತ್ತು 356 ಲೈಟರ್‌ಗಳನ್ನು ಆರ್ಡರ್ ಮಾಡಿದ್ದರು ಎಂದು ವರದಿಯಾಗಿತ್ತು.
ಮತ್ತೊಂದೆಡೆ ಈ ಬಾರಿ ಹೊಸ ವರ್ಷ ಸಂಭ್ರಮಾಚರಣೆಗೆ ಗಿರಿಧಾಮಗಳಂತಹ ಪ್ರವಾಸಿ ತಾಣಗಳಿಗೆ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದಾರೆ. ಇನ್ನೂ ಈ ಸ್ಥಳಗಳಲ್ಲೇ ಹೆಚ್ಚಾಗಿ ಓಯೋ ರೂಂಗಳನ್ನು ಬುಕ್ ಮಾಡಿದ್ದಾರೆ ಎಂದು ಓರೋ ರೂಮ್ಸ್ ಸಿಇಓ ರಿತೇಶ್ ಅಗರ್ವಾಲ್ ಅವರು ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ. ಅಲ್ಲದೆ, ಅದರಲ್ಲೂ ಕರ್ನಾಟದ ವಿಚಾರಕ್ಕೆ ಬಂದರೆ ಕೊಡಗು ಜಿಲ್ಲೆಯಲ್ಲಿ ಬರು ಹಚ್ಚ ಹಸಿರಿನಿಂದ ಕಂಗೊಳಿಸುವ ಸುಂದರ ತಾಣವಾದ ಕೋರ್ಗ್‌ನಲ್ಲಿ ಓಯೋ ರೂಮ್‌ಗಳ ಬುಕಿಂಗ್ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ ಅಂತಲೂ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.












Click it and Unblock the Notifications