ಬಕಾಸುರನ ಹೊಟ್ಟೆಗೆ ಮಜ್ಜಿಗೆಯಂತಾದ ಟ್ರಾಫಿಕ್ ಮತ್ತು ಪೊಲೀಸರು!

ಬೆಂಗಳೂರು, ಮಾರ್ಚ್ 05: ತುಂಬಿ ತುಳುಕುತ್ತಿರುವ ಬೆಂಗಳೂರು ನಗರದ ರಸ್ತೆಗಳನ್ನು ಒಂದು ವೇಳೆ ಖಾಲಿಯಾಗಿ ನೋಡಿದರೆ ನಿಮಗೆ ದುಸ್ವಪ್ನ ಎಂದೇ ಭಾಸವಾಗಬಹುದು. ಅಷ್ಟರ ಮಟ್ಟಿಗೆ ನಗರದ ರಸ್ತೆಗಳು ಟ್ರಾಫಿಕ್ ಜಾಮ್ ನಿಂದ ತತ್ತರಿಸಿ ಹೋಗಿದೆ ಎಂಬ ಕುಖ್ಯಾತಿಗೆ ಬೆಂಗಳೂರು ನಗರ ಪಾತ್ರವಾಗಿದೆ.

ಬೆಂಗಳೂರು ವಾಹನಗಳ ಸಂಖ್ಯೆ 70 ಲಕ್ಷಕ್ಕೆ ಹೆಚ್ಚಾಗುತ್ತಿದ್ದಂತೆ ಬೆಂಗಳೂರು ಟ್ರಾಫಿಕ್ ಪೊಲೀಸರು ಈ ಸಂಖ್ಯೆಯ ವಾಹನಗಳಿಗೆ ಹೋಲಿಸಿದರೆ, ತುಂಬಾ ಕಡಿಮೆ ಎನ್ನುವುದು ಎದ್ದು ಕಾಣಿಸುತ್ತಿದೆ.

ವಿಭಾಗಕ್ಕೆ ಒಟ್ಟು 5200 ಹುದ್ದೆಗಳನ್ನು ಒದಗಿಸಲಾಗಿದ್ದರೆ ಆ ಪೈಕಿ4 ಸಾವಿರ ಸಿಬ್ಬಂದಿಗಳು ಮಾತ್ರ ಈ ವರೆಗೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಸರಿಸುಮಾರು 4 ಸಾವಿರ ಪೊಲೀಸರು 70 ಲಕ್ಷ ವಾಹನಗಳಿಗೆ ಹೋಲಿಸಿದರೆ ನಿಯಂತ್ರಣ ಅಸಾದ್ಯ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ.

Over 70 lakh vehicles, only 3,400 traffic police

ಒಂದೂವರೆ ಕೋಟಿ ಜನಸಂಖ್ಯೆ ಹಾಗೂ 70 ಲಕ್ಷಕ್ಕೂ ಹೆಚ್ಚು ವಾಹನಗಳಿರುವ 8 ಸಾವಿರ ಚದರ ಕಮೀ ಉದ್ದ ರಸ್ತೆಗಳಿಗೆ ಕೇವಲ 4 ಸಾವಿರ ಟ್ರಾಫಿಕ್ ಪೊಲೀಸರು ನಿಯಂತ್ರಣ ಮಾಡುವುದು ಎಂದರೆ ಹಾಸ್ಯಾಸ್ಪದವೇ ಸರಿ. 2016ರಲ್ಲಿ ಬೆಂಗಳೂರು ನಗರದ ಟ್ರಾಫಿಕ್ ಪೊಲೀಸರು ಸಂಖ್ಯೆಯನ್ನು 3600 ಕ್ಕೆ ಹೆಚ್ಚಿಸಲಾಗಿತ್ತು.

ಈ ಮಧ್ಯೆ ಹಲವಾರು ಸಿಬ್ಬಂದಿಯ ನೇಮಕ ಹಾಗೂ ತರಬೇತಿ ಕಾರ್ಯ ನಡೆಯುತ್ತಿದ್ದರೂ ಈ ಪೈಕಿ ಕೇವಲ 80 ಜನ ಅಧಿಕಾರಿಗಳು ಟ್ರಾಫಿಕ್ ಗೆ ಸಂಬಂಧ ಪಟ್ಟವರು ಎನ್ನುವುದು ಪೊಲೀಸ್ ದಾಖಲೆಗಳ ಮೂಲಕ ತಿಳಿಯುತ್ತದೆ.ಈ ಪೈಕಿ ಉಳಿದವರನ್ನು ಕಾನೂನು ಮತ್ತು ಸುವ್ಯವಸ್ಥೆಗೆ ನಿಯೋಜಿಸಲಾಗುತ್ತಿದ್ದು ಟ್ರಾಫಿಕ್ ನಿರ್ವಹಣೆಗೊಳ್ಳುತ್ತಿರುವ ಸಿಬ್ಬಂದಿಗಳ ಸಂಖ್ಯೆ ತೀರಾ ಕಡಿಮೆ.

ನೇಮಕಗೊಳ್ಳುವ ಒಟ್ಟು ಪೊಲೀಸ್ ಸಂಖ್ಯೆಯಲ್ಲಿ ಆದ್ಯತೆ ಮೇರೆಗೆ ಟ್ರಾಫಿಕ್ ವಿಭಾಗಕ್ಕೆ ನಿಯೋಜನೆ ಮಾಡಲಾಗುತ್ತಿದೆ ಎಂದು ಟ್ರಾಫಿಕ್ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಆರ್. ಹಿತೇಂದ್ರ ತಿಳಿಸಿದ್ದಾರೆ. ನಾಗಾಲೋಟದಲ್ಲಿ ಬೆಳೆಯುತ್ತಿರುವ ವಾಹನಗಳ ಸಂಖ್ಯೆಯ ಪ್ರಮಾಣಕ್ಕೆ ತಕ್ಕಂತೆ ಟ್ರಾಫಿಕ್ ಪೊಲೀಸರನ್ನು ನಿಯೋಜಿಸಬೇಕು ಎನ್ನವುದು ಬೆಂಗಳೂರು ಟ್ರಾಫಿಕ್ ಪೊಲೀಸರಿಗೂ ತಲೆನೋವಾಗಿ ಪರಿಣಮಿಸಿದೆ.

ಕೇವಲ ಸಿಬ್ಬಂದಿ ಮೇಲೆ ಒತ್ತಡ ಮಾತ್ರವಲ್ಲದೆ ಬೆಳಗ್ಗೆ 10 ರಿಂದ ರಾತ್ರಿ 10 ಗಂಟೆಯ ಅವಧಿಯಲ್ಲಿ ಅತೀ ಕಡಿಮೆ ಸಿಬ್ಬಂದಿಯನ್ನು ಇತರೆ ಕೆಲಸಗಳಿಗೆ ಬಳಸಿ ಟ್ರಾಫಿಕ್ ನಿಯಂತ್ರಣಕ್ಕಾಗಿ ಅತಿ ಹೆಚ್ಚು ಜನರನ್ನು ಬಳಸಲಾಗುತ್ತಿದೆ ಎಂದು ಹಿತೇಂದ್ರ ತಿಳಿಸಿದ್ದಾರೆ.

ಭವಿಷ್ಯದಲ್ಲಿ ಇಷ್ಟು ಪ್ರಮಾಣದ ಟ್ರಾಫಿಕ್ ಪೊಲೀಸರನ್ನು ಒದಗಿಸುವುದು ಇಲಾಖೆಗೂ ಸಾದ್ಯವಿಲ್ಲದಂತಾಗಿದೆ.4300 ಸಿಬ್ಬಂದಿಗಳ ಪೈಕಿ ಕೆಲವರು ರಜೆ ಮತ್ತಿತರೆ ಕಾರಣಗಳಿಗಾಗಿಕರ್ತವ್ಯದಿಂದ ದೂರ ಉಳಿದರೆ ಟ್ರಾಫಿಕ್ ನಿಯಂತ್ರಣ ಇನ್ನುಳಿದ ಸಿಬ್ಬಂದಿಗಳಿಂದ ಸಾದ್ಯವೇ ಇಲ್ಲ ಎಂಬಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+