ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಕ್ರೈಂ ಇತಿಹಾಸದಲ್ಲೇ ಸಿಸಿಬಿಯಿಂದ ಬೃಹತ್ ದಾಳಿ

|
Google Oneindia Kannada News

Recommended Video

ಬೆಂಗಳೂರಿನಲ್ಲಿ ಕ್ರೈಂ ಹಿಸ್ಟರಿಯಲ್ಲಿ ಸಿಸಿಬಿಯಿಂದ ಅತೀ ದೊಡ್ಡ ದಾಳಿ | Oneindia Kannada

ಬೆಂಗಳೂರು, ಸೆ.27: ಬೆಂಗಳೂರು ಕೇಂದ್ರ ಅಪರಾಧ ವಿಭಾಗದ ಮುಖ್ಯಸ್ಥರಾಗಿ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ವಾಪಸ್ ಬಂದ ಮೇಲೆ ಸಿಸಿಬಿಯ ಖದರ್ ಬೇರೆಯಾಗಿದೆ.

ಬೆಂಗಳೂರಿನಲ್ಲಿ ಗುರುವಾರ ಬೆಳಗ್ಗೆ ಅಪರಾಧ ಇತಿಹಾಸದಲ್ಲೇ ದೊಡ್ಡ ದಾಳಿ ನಡೆದಿದ್ದು ಬೆಂಗಳೂರಿನ ಕುಖ್ಯಾತ ರೌಡಿಗಳ ಮನೆಗಳು, ಅಡ್ಡೆಗಳು, ಕಟ್ಟಡಗಳ ಮೇಲೆ 100 ಕ್ಕೂ ಹೆಚ್ಚು ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಮಂಗಳೂರಿನಲ್ಲಿ ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟ: ಮೂವರ ಬಂಧನಮಂಗಳೂರಿನಲ್ಲಿ ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟ: ಮೂವರ ಬಂಧನ

ಬೆಂಗಳೂರಿನ ಅಪರಾಧ ಜಗತ್ತಿನಲ್ಲಿ ಸಧ್ಯ ಕೇಳಿಬರುತ್ತಿರುವ ಕುಖ್ಯಾತ ರೌಡಿಗಳಾದ ಮುಲಾಮ, ಲಕ್ಷ್ಮಣ, ಮಹಿಮ್, ದಡಿಯಾ ಮಹೇಶ್, ದೂದ್ ರವಿ, ಆತುಷ್, ತನ್ವೀರ್, ಜೆಸಿಬಿ ನಾರಾಯಣ, ಮೈಕಲ್, ಲಕ್ಕಸಂದ್ರ ವಿಜಿ ಸೇರಿದಂತೆ ಇನ್ನೂ ಹಲವಾರು ರೌಡಿಗಳ ಮನೆಗಳು ಹಾಗೂ ಕಟ್ಟಡಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ರಿಯಲ್ ಎಸ್ಟೇಟ್ ಗೆ ಸಂಬಂಧಿಸಿದ ದಾಖಲೆಗಳನ್ನು ಅಕ್ರಮವಾಗಿ ಕೂಡಿಟ್ಟಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

Over 100 CCB 100 officials raid notorious rowdies

ಅಲ್ಲದೆ ಮಾರಕಾಸ್ತ್ರಗಳಾದ ಡ್ರ್ಯಾಗರ್, ಚಾಕುಗಳು, ತಲವಾರ್ ಹಾಗೂ ಕಣ್ಣಿಗೆ ಎರಚುವ ಸ್ಪ್ರೇ ಸೇರಿದಂತೆ ಹಲವಾರು ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಈ ವೇಳೆ ಲಕ್ಷಾಂತರ ಬೆಲೆ ಬಾಳು, ಕಾರು, ಆಭರಣಗಳು, ಮೊಬೈಲ್ ಫೋನ್ ಗಳು ಮತ್ತಿತರೆ ದುಬಾರಿ ವಸ್ತಗಳನ್ನು ವಶಪಡಿಸಿಕೊಂಡಿದ್ದಾರೆ.

ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ: ಸಿಸಿಬಿಗೆ ವಾಪಸ್ ಆದ ಸಿಂಗಂಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ: ಸಿಸಿಬಿಗೆ ವಾಪಸ್ ಆದ ಸಿಂಗಂ

ಕಳೆದ ಮೂರ್ನಾಲ್ಕು ವರ್ಷಗಳಿಂದ ಸಿಸಿಬಿ ಎಂದರೆ ಮತ್ತೊಂದು ಪೊಲೀಸ್ ಠಾಣೆ ಎನ್ನುವಂತಾಗಿದೆ ಎಂಬ ಆರೋಪವಿತ್ತು, ಇತ್ತೀಚಿನ ದಿನಗಳಲ್ಲಿ ಬೆಂಗಳೂರು ನಗರದಲ್ಲಿ ಮನೆಗಳ್ಳತನ, ಸರಗಳ್ಳತನ, ಕೊಲೆ, ಸುಲಿಗೆ, ಅತ್ಯಾಚಾರದಂತ ಪ್ರಕರಣಗಳು ಹೆಚ್ಚಾಗಿದ್ದವು. ಅಲ್ಲದೆ ಸಿಸಿಬಿ ಪೊಲೀಸರಿಂದರೆ ಅಪರಾಧ ಲೋಕಕ್ಕೆ ಭಯವೇ ಇಲ್ಲಂದಾಗಿತ್ತು ಇದೀಗ ಅಲೋಕ್ ಕುಮಾರ್ ಸಿಸಿಬಿ ಅಧಿಕಾರವಹಿಸಿಕೊಂಡ ಬಳಿಕ ಸಿಸಿಬಿ ಕಾರ್ಯ ಪ್ರವೃತ್ತಿಯಲ್ಲಿ ಬದಲಾವಣೆಗಳು ಕಾಣತೊಡಗಿದೆ.

English summary
Over 100 officials of Bengaluru Central Crime Branch (CCB) have conducted raid on notorious rowdies in Bengaluru on Thursday morning. It was a mega raid on criminals in the history of Bangalore underworld sources claimed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X