• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕರ್ನಾಟಕ ಬಜೆಟ್ 2021: ಬಿಚ್ಚಿಡುವುದಕ್ಕಿಂತ, ಬಚ್ಚಿಡುವುದು ಹೆಚ್ಚಾಗಿದೆ ಎಂದ ಸಿದ್ದರಾಮಯ್ಯ

|

ಬೆಂಗಳೂರು, ಮಾರ್ಚ್ 08: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಮಂಡಿಸಿದ ಪ್ರಸ್ತುತ ಸಾಲಿನ ಬಜೆಟ್‌ ಬಗ್ಗೆ ವಿರೋಧಪಕ್ಷ ನಾಯಕ ಸಿದ್ದರಾಮಯ್ಯ ಅವರಿಂದ ಟೀಕೆ ಟಿಪ್ಪಣಿಗಳು ಮುಂದುವರೆದಿವೆ.

ನಮ್ಮ ಬಜೆಟ್ ಪಾರದರ್ಶಕವಾಗಿರುತ್ತಿತ್ತು, ಕಳೆದ ವರ್ಷದ್ದು ಹಾಗೆಯೇ ಮುಂದೆ ಏನು ಮಾಡುತ್ತೀವಿ ಎನ್ನುವುದನ್ನು ತಿಳಿಸುತ್ತಿದ್ದೆವು. ಪ್ರತಿ ಇಲಾಖೆಯ ಖರ್ಚು, ವೆಚ್ಚ ಹಾಗೂ ಸಾಧನೆ ಬಗ್ಗೆ ಹೇಳುತ್ತಿದ್ದೆವು.

ರಾಜ್ಯ ಬಜೆಟ್: ಸಾಲದ ಸರ್ಕಾರದ ಬಗ್ಗೆ ಡಾ. ಜಿ. ಪರಮೇಶ್ವರ್ ಸಿಡಿಮಿಡಿ

ಆದರೆ ಯಡಿಯೂರಪ್ಪ ಅವರು ಆರು ವಲಯ ಮಾಡಿ ಮಂಡಿಸಿದ್ದಾರೆ, ಇದರಲ್ಲಿ ಪಾರದರ್ಶಕತೆಯಿಲ್ಲ. ಬಚ್ಚಿಡುವುದಕ್ಕಿಂತ ಜನರ ಮುಂದೆ ಇಡುವುದು ಮುಖ್ಯ ಎಂದು ಇದೊಂದು ಟೊಳ್ಳು ಬಜೆಟ್ ಎಂದು ಸಿದ್ದರಾಮಯ್ಯ ಹೇಳಿದರು.

ಈ ಬಜೆಟ್ ರೆವಿನ್ಯೂ ಕೊರತೆಯುಳ್ಳ ಬಜೆಟ್ ಆಗಿದೆ, 2020-21ರ ಬಜೆಟ್ 142 ಕೋಟಿ 32 ಲಕ್ಷ ರೆವಿನ್ಯೂ ಸರ್‌ಪ್ಲಸ್‌ ಬಜೆಟ್, ಅದೇ ಬಜೆಟ್‌ನಲ್ಲಿ ಪರಿಷ್ಕೃತ ಮಾಡಿದಾಗ 19,485 ಕೋಟಿ 84 ಲಕ್ಷ ರೆವಿನ್ಯೂ ಕೊರತೆ ಇದೆ ಎಂದು ಈಗ ಹೇಳಿದ್ದಾರೆ.

ನಾನು ಮೊದಲ ಬಜೆಟ್ ಮಂಡನೆ ಮಾಡಿದಾಗ 1 ಲಕ್ಷ 36 ಸಾವಿರ ಕೋಟಿ ಸಾಲವಿತ್ತು, ಕೊನೆಯ ಬಜೆಟ್ ಮಂಡನೆಯಾದಾಗ 2 ಲಕ್ಷ 42 ಸಾವಿರ ಕೋಟಿ ಸಾಲವಿತ್ತು. ಆದರೆ ಇವರು ಎರಡೇ ವರ್ಷದಲ್ಲಿ ಸುಮಾರು ಒಂದೂವರೆ ಲಕ್ಷ ಕೋಟಿಯಷ್ಟು ಸಾಲ ಮಾಡಿದ್ದಾರೆ ಎಂದರು.

ಬಜೆಟ್‌ನ್ನು ಜನಸಾಮಾನ್ಯರ ಮುಂದೆ ಇಡಬೇಕು, ಈ ಬಜೆಟ್‌ನಲ್ಲಿ ಪಾರದರ್ಶಕತೆ ಎಂಬುದೇ ಇಲ್ಲ, ರಾಜ್ಯ ಸರ್ಕಾರ ವಿಧಾನಸಭೆ ಜನರಿಗೆ ಉತ್ತರದಾಯಿಯಾಗಿರುತ್ತದೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಸಾಲದ ಮೊತ್ತ ಹೆಚ್ಚಳವಾಗಿದೆ. ನಮ್ಮ ಅವಧಿಯಲ್ಲಿ ಎಂದೂ ಕೊರತೆಯಾಗಿರಲಿಲ್ಲ ಎಂದು ಹೇಳಿದರು.

ಮೊದಲ ಬಜೆಟ್‌ನಲ್ಲಿ ಎಷ್ಟು ಸಾಲವಿತ್ತು

ರಾಜ್ಯವನ್ನು ದಿವಾಳಿ ಮಾಡಿದ ಸರ್ಕಾರ

ರಾಜ್ಯವನ್ನು ದಿವಾಳಿ ಮಾಡಿದ ಸರ್ಕಾರ

ಸಾಲ ಸಿಗುತ್ತೆ ಎಂದು ಪಡೆದುಕೊಂಡು, ರಾಜ್ಯವನ್ನು ಬಿಜೆಪಿ ದಿವಾಳಿ ಮಾಡಿದೆ, ತೀರಿಸುವ ಅರ್ಹತೆ ಇದ್ದರೆ ಮಾತ್ರ ಸಾಲ ತೆಗೆದುಕೊಳ್ಳಬೇಕು, ಇವರದ್ದೇ ಸರ್ಕಾರ ದೇಶದಲ್ಲಿರುವುರಿಂದ ಸಾಲ ತೆಗೆದುಕೊಳ್ಳಲು ಅವಕಾಶ ಸಿಕ್ಕಿದೆ.

ಬಿಜೆಪಿ ಅಧಿಕಾರಾವಧಿಯಲ್ಲಿ ಸಾಲ ಮೊತ್ತ ಏರಿಕೆ

ಬಿಜೆಪಿ ಅಧಿಕಾರಾವಧಿಯಲ್ಲಿ ಸಾಲ ಮೊತ್ತ ಏರಿಕೆ

ಬಜೆಟ್‌ನಲ್ಲಿ ಪಾರದರ್ಶಕತೆ ಎಂಬುದೇ ಇಲ್ಲ, ಕಳೆದ 5 ವರ್ಷಗಳಲ್ಲಿ ಆದಾಯ ಕೊರತೆಯಾಗಿರಲಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಸಾಲದ ಮೊತ್ತ ಹೆಚ್ಚಾಗಿದೆ. 19,485.84 ಕೋಟಿ ಕಂದಾಯ ಕೊರತೆ ಎದುರಾಗಿದೆ.

ಮುಂದಿನ ಬಾರಿಯೂ ಸಿದ್ದರಾಮಯ್ಯ ವಿರೋಧಪಕ್ಷದಲ್ಲೇ ಕೂರುತ್ತಾರೆ

ಮುಂದಿನ ಬಾರಿಯೂ ಸಿದ್ದರಾಮಯ್ಯ ವಿರೋಧಪಕ್ಷದಲ್ಲೇ ಕೂರುತ್ತಾರೆ

ಬಜೆಟ್ ಮಂಡನೆ ಸಂದರ್ಭದಲ್ಲಿ ವಿಪಕ್ಷಗಳು ಹೊರಗೆ ನಡೆದ ಘಟನೆ ಕೇಂದ್ರ ಅಥವಾ ರಾಜ್ಯದಲ್ಲಿ ನಡೆದಿದೆಯಾ, ಅವರಿಗೆ ನೈತಿಕತೆ ಇಲ್ಲ. ಸಿದ್ದರಾಮಯ್ಯ ಅವರನ್ನು ಮುಂದಿನ ಬಾರಿಯೂ ಪ್ರತಿಪಕ್ಷದಲ್ಲಿಯೇ ಕೂರಿಸುತ್ತೇನೆ, 130 ರಿಂದ 135 ಪಡೆದು ತೋರಿಸುತ್ತೇವೆ ಎಂದು ಯಡಿಯೂರಪ್ಪ ಸವಾಲು ಹಾಕಿದರು.

   Karnataka Budget 2021 : ಯಡಿಯೂರಪ್ಪ ಅವರ 2021 ಬಜೆಟ್ ! | Oneindia Kannada

   English summary
   opposition leader Siddaramaiah says CM Yediyurappa's budget is debt ridden not people friendly. Read on.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X