ಆಪರೇಷನ್ ಹಸ್ತ ಸಿದ್ದರಾಮಯ್ಯರಿಂದಲೇ ಆರಂಭ: 3 ಕೇಜಿ ಅಕ್ಕಿ ನೀಡಿ ಸರ್ಕಾರ ಮೋಸ

ಬೆಂಗಳೂರು, ಜುಲೈ 14: ರಾಜ್ಯದಲ್ಲಿ ಆಪರೇಷನ್ ಹಸ್ತ ಸಿದ್ದರಾಮಯ್ಯ ಅವರಿಂದಲೇ ಆರಂಭವಾಗಿದೆ. 2007 ರಲ್ಲಿ ನೀವು ಜೆಡಿಎಸ್‌ಗೆ ರಾಜೀನಾಮೆ ಕೊಟ್ಟು ಕಾಂಗ್ರೆಸ್ ಸೇರಿ ಚುನಾವಣೆಯಲ್ಲಿ ಗೆಲವು ಪಡೆದಿದ್ದೀರಿ. ಅದೇ ರೀತಿಯೆ 17ಮಂದಿ ಪಕ್ಷ ತೊರೆದು ಬಿಜೆಪಿ ಸೇರಿದರು. ಅವರಿಗೂ ನಿಮಗೂ ಏನು ವ್ಯತ್ಯಾಸ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಸವರಾಜ ಬೊಮ್ಮಾಯಿ ಅವರು ಪ್ರಶ್ನಿಸಿದರು.

ರಾಜ್ಯಪಾಲರ ಭಾಷಣದ ಮೇಲಿನ ಚರ್ಚಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಪಕ‌ ಉತ್ತರ ನೀಡಿಲ್ಲ ಎಂದು ಬಿಜೆಪಿ ಖಂಡಿಸಿತು. ಕೇಂದ್ರ ಸರ್ಕಾರ ನೀಡುವ 5 ಕೆಜಿ ಅಕ್ಕಿಯ ಬದಲು ಮೂರು ಕೆಜಿ ಅಕ್ಕಿ ಕೊಡುತ್ತಿರುವುದನ್ನು ವಿರೋಧಿಸಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ಸಭಾತ್ಯಾಗ ನಡೆಸಿದರು.

Operation Hasta Start From CM Siddaramaiah, Congress Cheats Only 3 kg rice Distributed, Bommai

ತದನಂತರ ಸಿದ್ದರಾಮಯ್ಯ ಅವರ ಉತ್ತರಕ್ಕೆ ಆಕ್ಷೇಪಿಸಿ ತಿರುಗೇಟು ನೀಡಿದ ಬೊಮ್ಮಾಯಿ ಅವರು, ಕಾಂಗ್ರೆಸ್ ಪಕ್ಷ 80ರ ನಂತರ ಒಮ್ಮೆ ಅಧಿಕಾರಕ್ಕೆ ಬಂದ ಮೇಲೆ ಮತ್ತೆ ಅಧಿಕಾರಕ್ಕೆ ಬರಲಿಲ್ಲ. ನಿಮ್ಮ ಪರಿಸ್ಥಿತಿಯೂ ಹಾಗೇ ಇದೇ. 2013 ರಲ್ಲಿ ಅಧಿಕಾರ ನಡೆಸಿ ಎಲ್ಲ ಭಾಗ್ಯಗಳನ್ನು ಕೊಟ್ಟರೂ ನೀವು ಯಾಕೆ ಸೋಲಬೇಕಾಯಿತು. ನಿಮ್ಮನ್ನೂ ಜನರು ತಿರಸ್ಕರಿಸಿದ್ದರು ಎಂದು ಮುಖ್ಯಮಂತ್ರಿಗೆ ತಿಳಿಸಿದರು.

ನಿಮಗೆ ಬಹುಮತ ಬಂದಿತ್ತಾ?: ಬೊಮ್ಮಾಯಿ ಪ್ರಶ್ನೆ

2004ರಲ್ಲಿ ಕಾಂಗ್ರೆಸ್‌ಗೆ 65 ಸೀಟು ಬಂದಿತ್ತು, ಆಗಲೂ ನಿಮಗೆ ಬಹುಮತ‌ ಬಂದಿಲಿಲ್ಲ. 2018 ರಲ್ಲಿ ಇವರಿಗೆ ಬಹುಮತ ಬಂದಿತ್ತಾ?, ಯಾರಿಗೆ ಬಹುಮತದ ಪಾಠ ಹೇಳಿತ್ತಿದ್ದಾರೆ ಇವರು?. 1983 ರಲ್ಲೂ ಜನತಾ ಪಕ್ಷಕ್ಕೆ ಬಹುಮತ ಇರಲಿಲ್ಲ‌ ಆಗಲೂ ಸರ್ಕಾರ ಮಾಡಿದ್ದರು. ಆಗಿನಿಂದಲೂ ಮೈತ್ರಿ ಸರ್ಕಾರ ಆರಂಭವಾಗಿದೆ ಎಂದು ಬೊಮ್ಮಾಯಿ ವಿವರಿಸಿದರು.

Operation Hasta Start From CM Siddaramaiah, Congress Cheats Only 3 kg rice Distributed, Bommai

ಬಿಜೆಪಿ ಸೇಡಿನ ರಾಜಕಾರಣ ಮಾಡಿಲ್ಲ. ನಿಮ್ಮ ಕಾಲದಲ್ಲಿ ಆಗಿರುವ ಭ್ರಷ್ಟಾಚಾರಗಳ ತನಿಖೆಯನ್ನು ಲೋಕಾಯುಕ್ತ ಮಾಡುತ್ತಿದೆ. ನಿಮ್ಮ ಅವಧಿಯಲ್ಲಿ ಭ್ರಷ್ಟಾಚಾರ ಆಗಿಲ್ಲ ಎಂದಲ್ಲ. ಆ ಪ್ರಕರಣಗಳು ಈಗಲೂ ಜೀವಂತವಾಗಿವೆ. ತನಿಖೆ ನಡೆಸಿದರೆ ಎಲ್ಲ ಹೊರ ಬರುತ್ತದೆ ಎಂದರು.

ಮುಖ್ಯಮಂತ್ರಿಗಳು ಹಿಂದಿನ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ನಾವು ಇಲ್ಲಿ ಏನು ಮಾತನಾಡಿದ್ದೇವೆ, ಹೊರಗಡೆ ಅದನ್ನೆ ಜನರು ಮಾತನಾಡುತ್ತಿದ್ದಾರೆ. ಸಿಎಂ ತಮ್ಮ ಇಲಾಖೆಯಲ್ಲಿ ಭ್ರಷ್ಟಾಚಾರ ಆಗಿದೆ ಎಂದು ನಾವು ಹೇಳಿಲ್ಲ. ಅವರ ಇಲಾಖೆಯಲ್ಲಿ ಆಗಿಲ್ಲ ಅಂತ‌ ಹೇಳುತ್ತಿದ್ದಾರೆ. ಬೇರೆ ಕಡೆ ಆಗಿರಬಹುದು ಎನ್ನುವ ಮಾತು ಆಡುತ್ತಿದ್ದಾರೆ ಎಂದು ತಿಳಿಸಿದರು.

ಭ್ರಷ್ಟಾಚಾರ ಬಗ್ಗ ಮಾತನಾಡುವ ನೀವೇ ಅಧಿಕಾರದಲ್ಲಿದ್ದೀರಿ, ತನಿಖೆ ಮಾಡಿಸಿ. ನಾವು ಯಾವುದೇ ತಪ್ಪು ಮಾಡಿಲ್ಲ. ನಮಗೆ ಯಾವುದೇ ಭಯ ಇಲ್ಲ. ನಿಮ್ಮ ಅವಧಿಯಲ್ಲಿ ಆಗಿದ್ದ ಭ್ರಷ್ಟಾಚಾರ ಆರೋಪಗಳ ಬಗ್ಗೆ ಲೋಕಾಯುಕ್ತದಲ್ಲಿ ತನಿಖೆ ನಡೆಯುತ್ತಿದೆ. ಅವುಗಳನ್ನು ಸೇರಿಸಿ ತನಿಖೆ ಮಾಡಿಸಿ ನಾವ್ಯಾರು ಬೇಡ ಅಂತ ಹೇಳಿಲ್ಲ. ನಿಮ್ಮ ಬಳಿ ಅಧಿಕಾರ ಇದೆ. ತನಿಖಾ ಸಂಸ್ಥೆಗಳು ಇವೆ. ನಮ್ಮ ಅವಧಿ ನಿಮ್ಮ ಅವಧಿಯಲ್ಲಾಗಿರುವ ಎಲ್ಲ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಿ ನಮಗೇನು ತೊಂದರೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್‌ನಿಂದ ಅಕ್ಕಿ ಕಡಿತದ ಅನ್ಯಾಯ

ಕೇಂದ್ರ ಸರ್ಕಾರ ಆಹಾರ ಭದ್ರತೆ‌ ಕಾಯ್ದೆ ಪ್ರಕಾರ ಐದು ಕೆಜಿ ಅಕ್ಕಿ ಕೊಟ್ಟಿದ್ದು, ನೀವು ಮೂರು ಕೆ.ಜಿ, ಅಕ್ಕಿಯನ್ನು ಮಾತ್ರ ಕೊಡುತ್ತಿದ್ದೀರಿ ನಿಮಗೆ ನಾಚಿಕೆಯಾಗಬೇಕು ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ರಾಜ್ಯಕ್ಕೆ ಅಕ್ಕಿ ಪೂರೈಸಿ ಎಂದು ಕೇಂದ್ರ ಸರ್ಕಾರದ‌ ಜೊತೆ ಮಾತನಾಡದೇ ಡೆಪ್ಯುಟಿ ಮ್ಯಾನೇಜರ್ ಹತ್ತಿರ ಹೋಗಿ ಕೇಳಿದರೆ ಹೇಗೆ?, ಅವರಿಗೇನು ಅಕ್ಕಿ ಕೊಡುವ ಅಧಿಕಾರ ಇದಿಯಾ?. ಎಫ್ ಸಿಐ ಕೇಂದ್ರ ಸರ್ಕಾರದ ಏಜೆನ್ಸಿ, ಐದು ವರ್ಷ ಅಧಿಕಾರ ನಡೆಸಿದ್ದಾರೆ‌ ಯಾರೊಂದಿಗೆ ಮಾತನಾಡಬೇಕು ಅನ್ನುವ ಸಾಮಾನ್ಯ ಜ್ಞಾನ ಇಲ್ಲ ಎಂದು ಟೀಕಿಸಿದರು. ಈ ಕುರಿತು ರಾಜ್ಯಪಾಲ ಭಾಷಣದ ಮೇಲೆ ಉತ್ತರ ನೀಡಿದ್ದಕ್ಕೆ ಆಕ್ಷೇಪಿಸಿ ಸಭಾತ್ಯಾಗ ಮಾಡಿದರು.

ರಾಜ್ಯಕ್ಕೆ ಅಕ್ಕಿ ಪೂರೈಸಿ ಎಂದು ಕೇಂದ್ರ ಸರ್ಕಾರದ‌ ಜೊತೆ ಮಾತನಾಡದೇ ಡೆಪ್ಯುಟಿ ಮ್ಯಾನೇಜರ್ ಹತ್ತಿರ ಹೋಗಿ ಕೇಳಿದರೆ ಹೇಗೆ?, ಅವರಿಗೇನು ಅಕ್ಕಿ ಕೊಡುವ ಅಧಿಕಾರ ಇದಿಯಾ?. ಎಫ್ ಸಿಐ ಕೇಂದ್ರ ಸರ್ಕಾರದ ಏಜೆನ್ಸಿ, ಐದು ವರ್ಷ ಅಧಿಕಾರ ನಡೆಸಿದ್ದಾರೆ‌ ಯಾರೊಂದಿಗೆ ಮಾತನಾಡಬೇಕು ಅನ್ನುವ ಸಾಮಾನ್ಯ ಜ್ಞಾನ ಇಲ್ಲ ಎಂದು ಟೀಕಿಸಿದರು. ಈ ಕುರಿತು ರಾಜ್ಯಪಾಲ ಭಾಷಣದ ಮೇಲೆ ಉತ್ತರ ನೀಡಿದ್ದಕ್ಕೆ ಆಕ್ಷೇಪಿಸಿ ಸಭಾತ್ಯಾಗ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+