ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋವಿಡ್; ಬೆಂಗಳೂರು ಉತ್ತರದಲ್ಲಿ ತೆರೆದ ಚಿತಾಗಾರ ಸಿದ್ಧ

|
Google Oneindia Kannada News

ಬೆಂಗಳೂರು, ಏಪ್ರಿಲ್ 27; ಬೆಂಗಳೂರು ನಗರದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ನಗರದಲ್ಲಿ ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಶವ ಸಂಸ್ಕಾರ ಮಾಡುವುದು ಸವಾಲಾಗಿದೆ. ಈಗಿರುವ ಚಿತಾಗಾರಗಳ ಬಳಿ ಆಂಬ್ಯುಲೆನ್ಸ್‌ಗಳು ಸಾಲುಗಟ್ಟಿ ನಿಲ್ಲುತ್ತಿವೆ.

ಉತ್ತರ ಬೆಂಗಳೂರಿನ ತಾವರೆಕೆರೆಯ ಗಿಡ್ಡನಹಳ್ಳಿಯಲ್ಲಿ ತೆರೆದ ಚಿತಾಗಾರವನ್ನು ತಯಾರಿ ಮಾಡಲಾಗಿದೆ. ಬೆಂಗಳೂರಿನಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರವನ್ನು ಇಲ್ಲಿ ಮಾಡಲಾಗುತ್ತದೆ.

ಕೋಲಾರ; ವೆಂಟಿಲೇಟರ್ ಸಮಸ್ಯೆ 4 ರೋಗಿಗಳು ಸಾವು ಕೋಲಾರ; ವೆಂಟಿಲೇಟರ್ ಸಮಸ್ಯೆ 4 ರೋಗಿಗಳು ಸಾವು

ಬೆಂಗಳೂರಿನಲ್ಲಿ ಶವಗಳ ಅಂತ್ಯ ಸಂಸ್ಕಾರಕ್ಕೆ ತೊಂದರೆಯಾದ ಹಿನ್ನಲೆಯಲ್ಲಿ ಕಂದಾಯ ಸಚಿವ ಆರ್. ಅಶೋಕ ಹೊಸ ಚಿತಾರಾರವನ್ನು ಆರಂಭಿಸುವುದಾಗಿ ಘೋಷಣೆ ಮಾಡಿದ್ದರು.

ಕೋವಿಡ್; ಶನಿವಾರ ಬೆಂಗಳೂರಲ್ಲಿ 149 ಸಾವು ಕೋವಿಡ್; ಶನಿವಾರ ಬೆಂಗಳೂರಲ್ಲಿ 149 ಸಾವು

Open Air Crematorium Set Up At North Bengaluru

ಬೆಂಗಳೂರು ನಗರದಲ್ಲಿರುವ ವಿದ್ಯುತ್ ಚಿತಾಗಾರಗಳಲ್ಲಿ ಶವಗಳ ಅಂತ್ಯ ಸಂಸ್ಕಾರ ಸವಾಲಾಗಿದೆ. ಚಿತಾಗಾರಗಳ ಮುಂದೆ ಸೋಂಕಿತರ ಶವಗಳನ್ನು ಹೊತ್ತ ಅಂಬ್ಯಲೆನ್ಸ್ ಗಂಟೆಗಟ್ಟಲೇ ಕಾಯಬೇಕಾಗಿದೆ.

ಕೊರೊನಾ ಪ್ರಕರಣ; ಮುಂಬೈಗಿಂತ ಬೆಂಗಳೂರಲ್ಲೇ ಹೆಚ್ಚು! ಕೊರೊನಾ ಪ್ರಕರಣ; ಮುಂಬೈಗಿಂತ ಬೆಂಗಳೂರಲ್ಲೇ ಹೆಚ್ಚು!

ಕೋವಿಡ್ ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಸಂಬಂಧಿಕರು ಸರ್ಕಾರದ ವಿರುದ್ಧ ಆಕ್ರೋಶವನ್ನು ಹೊರ ಹಾಕಿದ್ದರು. ಶವಗಳ ಅಂತ್ಯಸಂಸ್ಕಾರಕ್ಕೆ ಸಹ ವ್ಯವಸ್ಥೆ ಮಾಡಲು ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ್ದರು.

ಗಿಡ್ಡನಹಳ್ಳಿಯಲ್ಲಿರುವ ತೆರೆದ ಚಿತಾಗಾರದಲ್ಲಿ ಶವಗಳ ಅಂತ್ಯ ಸಂಸ್ಕಾರ ಮಾಡಲು ಅರಣ್ಯ ಇಲಾಕೆ ಕಟ್ಟಿಗೆಯನ್ನು ಪೂರೈಕೆ ಮಾಡಲಿದೆ. ಈ ಚಿತಾಗಾರದ ಸಮೀಪವೇ 40 ಶವಗಳ ಸಂಸ್ಕಾರ ಮಾಡುವ ಮತ್ತೊಂದು ಚಿತಾಗಾರವನ್ನು ಸಿದ್ದಗೊಳಿಸಲಾಗುತ್ತಿದೆ.

Recommended Video

24 ಗಂಟೆಗಳಲ್ಲಿ ಈ 8 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ಯಾವುದೇ ಕೋವಿಡ್‌ ಸಾವು ಪತ್ತೆಯಾಗಿಲ್ಲ | Oneindia Kannada

ಸೋಮವಾರ ಬೆಂಗಳೂರು ನಗರದಲ್ಲಿ 16,545 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. 105 ಜನರು ಮೃತಪಟ್ಟಿದ್ದಾರೆ. ಇದುವರೆಗೂ ನಗರದಲ್ಲಿ ಮೃತಪಟ್ಟವರ ಸಂಖ್ಯೆ 5,905.

English summary
Karnataka government set up the new open-air crematorium at Tavarekere near Giddanahalli, North Bengaluru. Electric crematoria across Bengaluru are overwhelmed with bodies of Covid-19 victims.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X