ಸೆ.1ರಿಂದ ಬೆಂಗಳೂರಲ್ಲಿ ಮನೆಗಳಿಂದ ಹಸಿ ಕಸ ಮಾತ್ರ ಸಂಗ್ರಹ

ಬೆಂಗಳೂರು, ಜುಲೈ 04 : ಬೆಂಗಳೂರು ನಗರದಲ್ಲಿ ಸೆಪ್ಟೆಂಬರ್ 1ರಿಂದ ಪ್ರತಿದಿನ ಕಸಿ ಕಸವನ್ನು ಮಾತ್ರ ಸಂಗ್ರಹ ಮಾಡಲಾಗುತ್ತದೆ. ಹಸಿ, ಒಣ ಕಸವನ್ನು ಬೇರ್ಪಡಿಸದ ಮನೆಗಳಿಗೆ ದಂಡ ವಿಧಿಸಲಾಗುತ್ತದೆ ಎಂದು ಬಿಬಿಎಂಪಿ ಹೇಳಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಅವರು ಈ ಕುರಿತು ಮಾಹಿತಿ ನೀಡಿದರು. 'ಕಸ ಸಂಗ್ರಹಣೆಗೆ ಹೊಸ ಟೆಂಡರ್ ಕರೆಯಲಾಗಿದೆ. ಅದು ಅಂತಿಮ ಹಂತದಲ್ಲಿದ್ದು, ಗುತ್ತಿಗೆ ಪಡೆದವರು ಕಸಿ ಕಸವನ್ನು ಮಾತ್ರ ಸಂಗ್ರಹ ಮಾಡಲಿದ್ದಾರೆ' ಎಂದರು.

'ಹೊಸ ಟೆಂಡರ್ ನೀಡುವ ವೇಳೆ ವಾರಕ್ಕೆ ಎರಡು ಬಾರಿ ಮಾತ್ರ ಒಣ ಕಸ ಸಂಗ್ರಹಣೆ ಮಾಡಬೇಕು ಎಂದು ಸೂಚಿಸಲಾಗಿದೆ. ಒಣ, ಹಸಿ ಕಸ ಒಟ್ಟಾಗಿ ನೀಡುವ ಮನೆಗಳಿಗೆ ದಂಡವನ್ನು ವಿಧಿಸಲಾಗುತ್ತದೆ' ಎಂದು ಆಯುಕ್ತರು ಎಚ್ಚರಿಕೆ ನೀಡಿದರು.

Only wet waste will be picked up during door to door collection

'ಕಸ ವಿಂಗಡನೆ ಮಾಡದ ಮನೆಗಳಿಗೆ ವಿಧಿಸುವ ದಂಡ ಶುಲ್ಕವನ್ನು ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಪ್ರಸ್ತಾವನೆ ಸಿದ್ಧಪಡಿಸಲಾಗಿದ್ದು, ಸಾಮಾನ್ಯ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ' ಎಂದು ಎನ್.ಮಂಜುನಾಥ ಪ್ರಸಾದ್ ಹೇಳಿದರು.

ಸೆಪ್ಟೆಂಬರ್ 1 ರಿಂದ ಶೇ 100ರಷ್ಟು ಮನೆ-ಮನೆ ಕಸ ಸಂಗ್ರಹ, ಶೇ 90ರಷ್ಟು ವಿಂಗಡನೆ ಮಾಡಿದ ಕಸ ಸಂಗ್ರಹ ಮಾಡುವ ಗುರಿಯನ್ನು ಬಿಬಿಎಂಪಿ ಹೊಂದಿದೆ. ಯಾವುದೇ ಕಸವನ್ನು ನೀಡದ ಮನೆಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+