ಬೆಂಗಳೂರು ಸುತ್ತುವ ಬಿಎಂಟಿಸಿ ಬಸ್ಸಿಗೆ ಮೂರೇ ಬಣ್ಣ!

ಬೆಂಗಳೂರು, ಮಾ.5 : ಬೆಂಗಳೂರಿನ ರಸ್ತೆಗಳಲ್ಲಿ ಇನ್ನು ಬಣ್ಣ-ಬಣ್ಣದ ಬಿಎಂಟಿಸಿ ಬಸ್ಸುಗಳು ಸಂಚರಿಸುವುದಿಲ್ಲ. ಸಂಸ್ಥೆಯ ಎಲ್ಲಾ ಬಸ್ಸುಗಳು ಇನ್ನು ಮುಂದೆ ಮೂರು ಬಣ್ಣಗಳನ್ನು ಮಾತ್ರ ಹೊಂದಿರಲಿದ್ದು, ಪ್ರಯಾಣಿಕರಿಗೆ ಆಗುವ ಗೊಂದಲವೂ ಕಡಿಮೆಯಾಗಲಿದೆ.

ಬೆಂಗಳೂರು ಮಹಾ­ನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಎಲ್ಲಾ ಬಸ್ಸುಗಳ ಬಣ್ಣ ಬದಲಾವಣೆ ಮಾಡಲಿದೆ. ಹಸಿರು, ಕಿತ್ತಲೆ, ನೀಲಿ ಬಣ್ಣಗಳನ್ನು ಹೊಂದಿರುವ ಬಸ್ಸುಗಳನ್ನು ಮಾತ್ರ ಇನ್ನುಮುಂದೆ ಕಾಣಬಹುದಾಗಿದೆ. ಮುಂದಿನ ಒಂದು ವರ್ಷದಲ್ಲಿ ಈ ಯೋಜನೆ ಸಂಪೂರ್ಣವಾಗಿ ಜಾರಿಗೆ ಬರಲಿದೆ. [ಬಿಎಂಟಿಸಿ ಬಸ್ಸಿನ ಬಣ್ಣ ಬದಲು]

Bus

ಬಿಎಂಟಿಸಿ ವ್ಯವ­ಸ್ಥಾಪಕ ನಿರ್ದೇಶಕಿ ಏಕ್‌ರೂಪ್‌ ಕೌರ್‌ ಈ ಕುರಿತು ಮಾಹಿತಿ ನೀಡಿದ್ದು, ಬಿಎಂಟಿಸಿಯಲ್ಲಿ 6,700ಕ್ಕೂ ಹೆಚ್ಚು ಬಸ್ಸುಗಳಿದ್ದು, ಸುಮಾರು 18 ಬಣ್ಣದ ಬಸ್ಸುಗಳು ಸಂಚಾರ ನಡೆಸುತ್ತಿವೆ. ಇದರಿಂದ ಗೊಂದಲ ಉಂಟಾಗುತ್ತಿದ್ದು, ಆದ್ದರಿಂದ ಬಸ್ಸುಗಳ ಬಣ್ಣ ಬದಲಾವಣೆ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.[ಎಲೆಕ್ಟ್ರಾನಿಕ್ ಸಿಟಿಗೆ ಹೋಗುವುದು ಸುಲಭ]

ಕೇವಲ ಬಸ್ಸಿನ ಬಣ್ಣಗಳನ್ನು ಮಾತ್ರ ಬದಲಾವಣೆ ಮಾಡುವುದಿಲ್ಲ. ಬಸ್ಸು ಸೇವೆಗಳ ಹೆಸರು­ಗಳನ್ನು ಕನ್ನಡದಲ್ಲಿ ಬರೆಯಲಾಗುತ್ತದೆ. ಸುಮಾರು ಒಂದು ವರ್ಷದಲ್ಲಿ ಈ ಕಾರ್ಯ ಪೂರ್ಣಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದ್ದು, ಇದಕ್ಕೆ ಹೆಚ್ಚು ವೆಚ್ಚವೂ ಆಗುವುದಿಲ್ಲ. [ಬೆರಳತುದಿಯಲ್ಲಿ ಬಿಎಂಟಿಸಿ ಮಾಹಿತಿ ಪಡೆಯಿರಿ]

ಯಾವ ಬಸ್ಸಿಗೆ ಯಾವ ಬಣ್ಣ : ಸಾಮಾನ್ಯ ದರವಿರುವ ಬಸ್ಸಿಗೆ 'ಹಸಿರು ಸರಣಿ' ಎಂದು ನಾಮಕರಣ ಮಾಡಲಾಗುತ್ತದೆ. ಸಾಮಾನ್ಯ, ಬಿಗ್‌ ಟ್ರಂಕ್‌, ಬಿಗ್‌ ಸರ್ಕಲ್‌ ಸೇವೆಗಳು ಹಸಿರು ಬಣ್ಣದಲ್ಲಿ ಕಂಗೊಳಿಸಲಿವೆ.

'ಕಿತ್ತಳೆ ಸರಣಿ' ಬಸ್ಸುಗಳಲ್ಲಿಯೂ ಸಾಮಾನ್ಯ ದರವಿದ್ದು, ಫೀಡರ್‌ ಸೇವೆಯ ಬಸ್ಸುಗಳು ಈ ಮಾದರಿಗೆ ಸೇರ್ಪಡೆಯಾಗುತ್ತವೆ. ಇನ್ನೂ 'ನೀಲಿ ಸರಣಿ' ಬಸ್ಸುಗಳಲ್ಲಿ ವಜ್ರ, ವಾಯುವಜ್ರ ಸೇವೆಗಳು ಸೇರಲಿದ್ದು ಪ್ರಯಾಣದರ ಹೆಚ್ಚಾಗಿರುತ್ತದೆ.

ಗೊಂದಲವೇನು : ಬಿಎಂಟಿಸಿಯ ನಾನಾ ಬಣ್ಣದ ಬಸ್ಸುಗಳು ರಸ್ತೆಗಿಳಿಯುವುದರಿಂದ ಹಲವಾರು ಗೊಂದಲಗಳು ಉಂಟಾಗುತ್ತಿದ್ದವು. ಕೆಂಪು ಬಣ್ಣದ ವೋಲ್ವೊ ಬಸ್‌ಗಳಲ್ಲಿ ಪ್ರಯಾಣದರ ಹೆಚ್ಚು, ಸಾಮಾನ್ಯ ದರವಿರುವ ಹಲವು ಬಸ್ಸುಗಳು ಕೆಂಪು ಬಣ್ಣಹೊಂದಿದ್ದವು. ಆದ್ದರಿಂದ ಜನರು ಇದರಲ್ಲಿ ಪ್ರಯಾಣಿಸುತ್ತಿರಲಿಲ್ಲ. ಬಣ್ಣ ಬದಲಾವಣೆ ಮಾಡಿದರೆ ಈ ಗೊಂದಲ ನಿವಾರಣೆಯಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+