ಸಾರ್ವಜನಿಕ ಸಾರಿಗೆ ಮಹಿಳೆಯರಿಗೆ ಎಷ್ಟು ಸೇಫ್: ಸಮೀಕ್ಷೆ ಏನು ಹೇಳುತ್ತೆ?
ಬೆಂಗಳೂರು, ಮಾರ್ಚ್ 7: ನಗರ ಸಾರ್ವಜನಿಕ ಸಾರಿಗೆ ಹೆಣ್ಣುಮಕ್ಕಳಿಗೆ ಎಷ್ಟು ಸುರಕ್ಷಿತ ಎನ್ನುವ ಕುರಿತು ಓಲಾ ಕಂಪನಿಯೊಂದು ಸಮೀಕ್ಷೆ ನಡೆದಿದೆ.
ಸಮೀಕ್ಷೆ ವರದಿ ಪ್ರಕಾರ ನಗರದ ಸಾರ್ವಜನಿಕ ಸಾರಿಗೆಯಲ್ಲಿ ಶೇ.9ರಷ್ಟು ಹೆಣ್ಣುಮಕ್ಕಳು ಮಾತ್ರ ಸುರಕ್ಷಿತ ಎನ್ನುವ ಆತಂಕಕಾರಿ ಮಾಹಿತಿಯನ್ನು ಸಮೀಕ್ಷೆಯೊಂದು ಹೊರಹಾಕಿದೆ.
ಓಲಾ ನಡೆಸಿದ ಸಮೀಕ್ಷೆಯಲ್ಲಿ ಕೆಲವು ಅಂಶಗಳು ಬಹಿರಂಗವಾಗಿವೆ. 11 ನಗರಗಳ ಶೇ.41ರಷ್ಟು ಮಹಿಳೆಯರು ಅಂದರೆ 24,023 ಮಹಿಳೆಯರಿಂದ ಅಭಿಪ್ರಾಯ ಸಂಗ್ರಹಿಸಲಾಗಿದ್ದು, ಹಲವರು ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ.

ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ನಿಂದನೆ, ಹೆಣ್ಣುಮಕ್ಕಳಿದ್ದಲ್ಲಿ ವಿಸಿಲ್ ಹೊಡೆಯುವುದು, ರೇಗಿಸುವುದು, ಕೆಟ್ಟ ಶಬ್ದಗಳಿಂದ ಕರೆಯುವುದು ಇನ್ನಿತರೆ ತೊಂದರೆಯನ್ನು ಅನುಭವಿಸುತ್ತಿದ್ದಾರೆ.
ಬೆಂಗಳೂರು ಸೇರಿ ಒಟ್ಟು 11 ನಗರಗಳಲ್ಲಿ ಶೇ.9ರಷ್ಟು ಹೆಣ್ಣುಮಕ್ಕಳು ಮಾತ್ರ ಸುರಕ್ಷಿತವಾಗಿದ್ದಾರೆ ಎಂದು ಹೇಳಿದೆ.ಶೇ.35ರಂದು ಮಹಿಳೆಯರು ನೀಡಿರುವ ಅಭಿಪ್ರಾಯದ ಪ್ರಕಾರ ರಾತ್ರಿ ಹೊತ್ತು ಸಾರ್ವಜನಿಕ ಸಾರಿಗೆ ಸುರಕ್ಷಿತವಲ್ಲ. ಹೆಚ್ಚು ಮಂದಿ ಪ್ರಯಾಣಿಸದ ಸಮಯದಲ್ಲಿ ಪ್ರಯಾಣ ಮುಜುಗರವನ್ನು ಕೂಡ ಉಂಟು ಮಾಡುತ್ತದೆ ಎಂದು ತಿಳಿಸಿದೆ.
ಲಾಸ್ಟ್ ಮೈಲ್ ಕನೆಕ್ಟಿವಿಟಿ ಇನ್ನಷ್ಟು ಸುಧಾರಿಸಬೇಕಿದೆ.ಶೇ.96ರಷ್ಟು ಮಹಿಳೆಯರು ಸಾರ್ವಜನಿಕ ಸಾರಿಗೆಯನ್ನು ಬಳಕೆ ಮಾಡುತ್ತಾರೆ. ದೂರದ ಪ್ರಯಾಣ, ಭದ್ರತೆ ದೃಷ್ಟಿಯಿಂದ ಸಾರ್ವಜನಿಕ ಸಾರಿಗೆ ಆಯ್ಕೆ ಮಾಡಿಕೊಳ್ಳುತ್ತಾರೆ. ಬೇರೆ ಆಯ್ಕೆಗಳಿಲ್ಲ ಅನಿವಾರ್ಯವಾಗಿ ಬಸ್‌ಗಳನ್ನು ಬಳಕೆ ಮಾಡಲೇಬೇಕು ಎಂದು ಶೇ.15 ರಷ್ಟು ಮಂದಿ ಅಭಿಪ್ರಾಯ ಪಟ್ಟಿದ್ದಾರೆ.












Click it and Unblock the Notifications