• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೈಕಿನಲ್ಲಿ ಯುವತಿ ಜೊತೆ ಅಪಾಯಕಾರಿ ವ್ಹೀಲಿಂಗ್ : ಬಂಧನ

|

ಬೆಂಗಳೂರು, ಜೂನ್ 11: ಯುವತಿ ಜೊತೆ ಬೈಕಿನಲ್ಲಿ ಅಪಾಯಕಾರಿ ವ್ಹೀಲಿಂಗ್ ಮಾಡಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಬೈಕ್‌ನಲ್ಲಿ ಯುಕ, ಯುವತಿ ಅಪಾಯಕಾರಿ ವ್ಹೀಲಿಂಗ್ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆ ಇಬ್ಬರು ಯಾರು ಎಂದು ಪೊಲೀಸರು ತಲೆ ಕೆಡಿಸಿಕೊಂಡಿದ್ದರು.

ಜಕ್ಕೂರು ಮೇಲ್ಸೇತುವೆಯಲ್ಲಿ ಯುವಕರ ಬೈಕ್ ವ್ಹೀಲಿಂಗ್, ಇಬ್ಬರ ಮೇಲೆ ಕೇಸ್

ಬಿಕಾಂ ವಿದ್ಯಾರ್ಥಿಯಾಗಿದ್ದ ನೂರ್ ಅಹ್ಮದ್, ತನ್ನ ಸ್ನೇಹಿತೆ ಜೊತೆ ನಂದಿ ಬೆಟ್ಟಕ್ಕೆ ಹೋಗಿದ್ದ, ಅಲ್ಲಿಂದ ವಾಪಸ್ ಬರುವಾಗ ರಸ್ತೆಯಲ್ಲಿ ವ್ಹೀಲಿಂಗ್ ಮಾಡಿದ್ದ, ಆ ದೃಶ್ಯವನ್ನು ಸ್ನೇಹಿತರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದರು ಬಳಿಕ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದರು.

ವಿಡಿಯೋ ತನಿಖೆ ನಡೆಸಿದಾಗ ಯಲಹಂಕದ ಕಾಲೇಜಿನಲ್ಲಿ ಓದುತ್ತಿರುವ ನೂರ್ ಅಹಮದ್ ಸ್ನೇಹಿತ ಇಮ್ರಾನ್ ಎಂಬುವವರ ತಾಯಿಯ ಹೆಸರಿನಲ್ಲಿ ನೋಂದಣಿಯಾಗಿದ್ದ ವಾಹನವಾಗಿತ್ತು. ಆರೋಪಿಯು ದೇವನಹಳ್ಳಿ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ವ್ಹೀಲಿಂಗ್ ಮಾಡಿದ್ದು, ಸಧ್ಯದಲ್ಲೇ ಪ್ರಕರಣವನ್ನು ಆ ಠಾಣೆಗೆ ವರ್ಗಾಯಿಸಲಾಗಿದೆ. ವಾಹನ ನೀಡಿದ ಆರೋಪದಡಿ ಇಮ್ರಾನ್ ತಾಯಿಯ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಇತ್ತೀಚೆಗಷ್ಟೇ ಏರ್‌ಪೋರ್ಟ್‌ ರಸ್ತೆಯಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಇಬ್ಬರು ಅಪ್ರಾಪ್ತರನ್ನು ಪೊಲೀಸರು ಬಂಧಿಸಿದ್ದರು.

English summary
Deadly wheeling police arrested student. Every day IN Bengaluru with rise in cases of wheelinf and drag racing on the cities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X