• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಏಕ ದೇಶ, ಏಕ ಪಡಿತರ ಚೀಟಿ: ಕರ್ನಾಟಕದಲ್ಲಿ ಜಾರಿಗೆ

|

ಬೆಂಗಳೂರು, ಜನವರಿ 02: ದೇಶಾದ್ಯಂತ ಏಕರೂಪದ ರೇಷನ್ ಕಾರ್ಡ್ ಹೊಂದುವ ಯೋಜನೆಗೆ ಕೇಂದ್ರ ಸರ್ಕಾರ ಜನವರಿ 01 ರಿಂದ ಕರ್ನಾಟಕ ಸೇರಿ 12 ರಾಜ್ಯಗಳಲ್ಲಿ ಜಾರಿಗೆ ತರಲಾಗಿದೆ.

ಏಕರೂಪದ ಪಡಿತರ ಕಾರ್ಡ್ ನ್ನು ಕರ್ನಾಟಕವಲ್ಲದೇ ಕೇರಳ, ಗೋವಾ, ತ್ರಿಪುರಾ, ಮಧ್ಯಪ್ರದೇಶ, ಜಾರ್ಖಂಡ್, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್, ಮಹಾರಾಷ್ಟ್ರ, ಹರಿಯಾಣದಲ್ಲೂ ಈ ಯೋಜನೆಗೆ ಚಾಲನೆ ನೀಡಲಾಗಿದೆ. ಜೂನ್ 01 ರಿಂದ ಕೇಂದ್ರಾಡಲಿತ ಪ್ರದೇಶ ಸೇರಿದಂತೆ ಎಲ್ಲ ರಾಜ್ಯಗಳಲ್ಲಿ ಇದು ವಿಸ್ತಾರಗೊಳ್ಳಲಿದೆ.

ಒನ್ ನೇಶನ್, ಒನ್ ರೇಶನ್: ದೇಶದಾದ್ಯಂತ ಒಂದೇ ಪಡಿತರ ಚೀಟಿ

ಈ ಬಗ್ಗೆ ಮಾತನಾಡಿರುವ ಕೇಂದ್ರ ನಾಗರೀಕ ಆಹಾರ ಪೂರೈಕೆ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರು, "ಈ ಯೋಜನೆಯ ಪ್ರಕಾರ, ಯಾವುದೇ ರೇಷನ್ ಕಾರ್ಡುದಾರನು ಆತ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ದೇಶದ ಯಾವುದೇ ಪಡಿತರ ಅಂಗಡಿಗಳಲ್ಲಿ ತಾನು ಹೊಂದಿರು ಪಡಿತರ ಕಾರ್ಡ್ ತೋರಿಸಿ ರೇಷನ್ ಪಡೆಯಬಹುದಾಗಿದೆ" ಎಂದಿದ್ದಾರೆ.

ಈ ಏಕರೂಪದ ಪಡಿತರ ಯೋಜನೆಯಿಂದ ಈಗಾಗಲೇ ಕರ್ನಾಟಕ ಹಾಗೂ ಕೇರಳ ಪಡಿತರ ಚೀಟಿಗಳನ್ನು ಒಂದಕ್ಕೊಂದು ಸಂಯೋಜನೆ ಮಾಡಲಾಗಿದೆ. ಕರ್ನಾಟಕದ ಕಾರ್ಡುದಾರರು ಕೇರಳದಲ್ಲಿಯೂ ರೇಷನ್ ಪಡೆಯಬಹುದಾಗಿದೆ. ಇದರಿಂದ ವಲಸಿಗರಿಗೆ ಅನುಕೂಲವಾಗಲಿದೆ.

ಒಂದು ದೇಶ, ಒಂದು ರೇಷನ್ ಕಾರ್ಡ್: ರಾಜ್ಯಗಳಿಗೆ ಒಂದು ವರ್ಷದ ಗಡುವು

ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶ ಕೆಲಸಕ್ಕೋ ಅಥವಾ ಇನ್ನಾವುದೋ ಕಾರಣಕ್ಕೆ ವಲಸೆ ಹೋದರೆ, ಪಡಿತರ ಗೊಂದಲವಿರುವುಲ್ಲ. ಏಕರೂಪದ ಪಡಿತರ ಕಾರ್ಡ್ ವ್ಯವಸ್ಥೆ ಹೊಂದಿರುವ ಯಾವುದೇ ರಾಜ್ಯದಲ್ಲಿ ರೇಷನ್ ಕಾರ್ಡ ಬಳಸಬಹುದು.

English summary
The central governments plan to adopt a uniform ration card across the country has been implemented in 12 states, including Karnataka, from January 1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X