ರಂಗಶಂಕರದಲ್ಲಿ ಸಲಿಂಗ ಪ್ರೇಮ ಕುರಿತ ನಾಟಕ ನೋಡಿ
ಬೆಂಗಳೂರು, ಜನವರಿ 20: ಪೂರ್ವಾಗ್ರಹಗಳ ಆಚೆ ಇರಬಹುದಾದ ಒಂದು ಸಹಜ, ನವಿರಾದ ಪ್ರೀತಿಯ ಕಥೆ 'ಒಂದು ಪ್ರೀತಿಯ ಕಥೆ'. 1982ರಲ್ಲಿ ವಿಜಯ್ ತೆಂಡೂಲ್ಕರ್ ಅವರು ರಚಿಸಿದ 'ಮಿತ್ರಾಚಿ ಗೋಶ್ಟ್' ನಾಟಕವನ್ನು ವೆಂಕಟೇಶ್ ಪ್ರಸಾದ್ 'ಒಂದು ಪ್ರೀತಿಯ ಕಥೆ' ಎಂಬ ಹೆಸರಿನೊಂದಿಗೆ ಕನ್ನಡಕ್ಕೆ ರೂಪಾಂತರಿಸಿ ನಿರ್ದೇಶಿಸಿದ್ದಾರೆ. ಈ ನಾಟಕ ಮತ್ತೊಮ್ಮೆ ಜನವರಿ 20ರಂದು ರಂಗಶಂಕರದಲ್ಲಿ ಪ್ರದರ್ಶನವಾಗುತ್ತಿದೆ.
ನಾಟಕದ ಬಗ್ಗೆ : ಒಂದು ಪ್ರೀತಿಯ ಕಥೆ, ಮೈಸೂರಿನ ಎಂಜಿನೀಯರ್ ಕಾಲೇಜೊಂದರದಲ್ಲಿ ನಡೆದಿರಬಹುದಾದ 'ಪ್ರೀತಿ' ಎಂಬ ಯುವತಿಯ ಒಂದು ಸಹಜ ಪ್ರೀತಿಯ ಕಥೆ. ಯುವಕರಲ್ಲಿ ಮೂಡಬಹುದಾದ ಗೆಳೆತನದ ಹಲವು ಆಯಾಮಗಳು, ಪ್ರೀತಿ, ಅಸೂಯೆಗಳತ್ತ ಒಂದು ನೋಟವನ್ನ ಈ ನಾಟಕ ಚೆಲ್ಲುತ್ತದೆ. ಮೂಲತಃ 'ಪ್ರೀತಿ'ಯ ಗೊಂದಲ ಮತ್ತು ಪ್ರೇಮದ ವಿಷಯದ ಮೇಲೆ ಕೇಂದ್ರೀಕೃತವಾಗಿದ್ದರೂ, ಪ್ರೀತಿಯ ಗೆಳೆಯ ಅಜಯನನ್ನು ಕೇಂದ್ರ ಪಾತ್ರವನ್ನಾಗಿಸಿ, ಅವನ ಮೂಲಕ ನಿರೂಪಿಸಲ್ಪಟ್ಟಿದೆ.
ಪ್ರೀತಿ ಮತ್ತು ಅಜಯರ ನಡುವಿನ ಗೆಳೆತನದ ನಡುವಿನ ತ್ವರಿತ ಬೆಳವಣಿಗೆ, ಅದರ ಸಂಕೀರ್ಣತೆ ಮತ್ತು ನಾಗರಿಕ ಜಗತ್ತಿನಲ್ಲಿ ಇರಬಹುದಾದ ನೈತಿಕ ಚೌಕಟ್ಟು, ನಾಗರಿಕ ಸಮಾಜದ ಕಟ್ಟುಪಾಡುಗಳನ್ನು ಎಳೆ ಎಳೆಯಾಗಿ ತೆರೆದು ತೋರಿಸುತ್ತದೆ. ಪೂರ್ವಾಗ್ರಹಗಳ ಆಚೆ ಇರಬಹುದಾದ ಒಂದು ಸಹಜ, ನವಿರಾದ ಪ್ರೀತಿಯ ಕಥೆ 'ಒಂದು ಪ್ರೀತಿಯ ಕಥೆ'.
ನಾಟಕ : ಒಂದು ಪ್ರೀತಿಯ ಕಥೆ..!
ಮರಾಠಿ ಮೂಲ : ವಿಜಯ್ ತೆಂಡೂಲ್ಕರ್ ರ 'ಮಿತ್ರಾಚಿ ಗೋಷ್ಟ್'
ಅನುವಾದ ಮತ್ತು ನಿರ್ದೇಶನ : ವೆಂಕಟೇಶ್ ಪ್ರಸಾದ್
ನಾಟಕದ ಅವಧಿ - 110 ನಿಮಿಷಗಳು
ದಿನಾಂಕ - 23 ಜನವರಿ 2019, 7:30
ಸ್ಥಳ - ರಂಗ ಶಂಕರ, ಜೆ.ಪಿ. ನಗರ
ಟಿಕೆಟ್ ಗಳಿಗೆ ಸಂಪರ್ಕಿಸಿ - 990012400 /
ರಂಗದ ಹಿಂದೆ
ಸಹ ನಿರ್ದೇಶನ ಉಜ್ವಲ ರಾವ್
ರಂಗ ಸಜ್ಜಿಕೆ ಮತ್ತು ವಿನ್ಯಾಸ ಎಚ್.ಕೆ. ದ್ವಾರಕಾನಾಥ್
ಸಹಾಯ ಧನುಷ್
ಬೆಳಕು ವಿನಯ ಚಂದ್ರ ಪಿ.
ಸಹಾಯ ಅರುಣ್ ಡಿ.ಟಿ.
ನೃತ್ಯ ಸಂಯೋಜನೆ ಪ್ರವೀಣ್ (ಜೆನೆಸಿಸ್)
ಸಂಗೀತ ಸುಮೇರು ರಾವುತ್
ಗಿಟಾರ್ ಸಿಲ್ವೆಸ್ಟೆರ್ ಪ್ರದೀಪ್
ನಿರ್ಮಾಣ ನಿರ್ವಹಣೆ ಅಮಿತ್ ರೆಡ್ಡಿ, ಸಂಜಯ್ ಭಾರದ್ವಾಜ್, ಜಯಶಂಕರ್
ಪೋಸ್ಟರ್ ವಿನ್ಯಾಸ ಬಾದಲ್ ನಂಜುಂಡ ಸ್ವಾಮಿ
ರಂಗದ ಮೇಲೆ
ಅಜಯ್ ಶೃಂಗ ಬಿ.ವಿ.
ಪ್ರೀತಿ ಉಜ್ವಲ ರಾವ್
ಪಾಟೀಲ ಸುನಿಲ್ ಕುಮಾರ್
ಲಹರಿ ವೈಜಯಂತಿ ಅಡಿಗ

ಒಂದು ಪ್ರೀತಿಯ ಕಥೆ ನಿರ್ದೇಶಕರ ನುಡಿ
ಪ್ರೀತಿ ಎನ್ನುವುದು ದೇಶ ಕಾಲಗಳನ್ನು ಮೀರಿದ ಸಂವೇದನೆ, ಪ್ರೀತಿ ಎನ್ನುವುದು ಎಲ್ಲ ಜೀವಿಗಳಲ್ಲೂ ಇರಬಹುದಾದ, ಬಣ್ಣಿಸಲಾಗದ, ಬಿಡಿಸಲಾಗದ ಮತ್ತು ಬದುಕಿಗೆ ಅವಶ್ಯಕವಾದ ಅನುಬಂಧ. ಹಾಗಿದ್ದರೂ ನಾಗರಿಕ ಜಗತ್ತಿನಲ್ಲಿ ಪ್ರೀತಿಗಿರಬಹುದಾದ ನೈತಿಕ ಚೌಕಟ್ಟು, ಸಾಮಾಜಿಕ ಕಟ್ಟುಪಾಡುಗಳು, ರೂಪುರೇಷೆಗಳು ಬೇರಾವ ಸಂವೇದನೆಗೂ ಕಾಣಸಿಗುವುದಿಲ್ಲ. ದ್ವೇಷ, ಸಿಟ್ಟು, ಅಸೂಯೆಯನ್ನು ವ್ಯಕ್ತಪಡಿಸುವಷ್ಟು ಸುಲಭವಾಗಿ ಪ್ರೀತಿಯನ್ನು ವ್ಯಕ್ತಪಡಿಸಲಾಗದಿರುವುದು ಆಧುನಿಕ ಜಗತ್ತಿನ ಬಹು ದೊಡ್ಡ ವ್ಯಂಗ್ಯ.
ಪ್ರೀತಿಯ ಪರಿಭಾಷೆಗಳು ಕಾಲ ಕಾಲಕ್ಕೆ ಬದಲಾಗುತ್ತಿದ್ದರೂ, ಪ್ರೀತಿಗಂಟಿದ ಪೂರ್ವಾಗ್ರಹಗಳು ಇಂದು ನಿನ್ನೆಯದಲ್ಲ. ಅವುಗಳಲ್ಲಿ ಬಹಳ ಮುಖ್ಯವಾದುದು, ಗಂಡು ಹೆಣ್ಣಿನ ನಡುವಿನ ಪ್ರೀತಿಯೇ ಸಹಜ ಪ್ರೀತಿ, ಉಳಿದಿದ್ದೆಲ್ಲ ಅಸಹಜ ಪ್ರೀತಿ ಎಂಬುದು. ಸಂತಾನೋತ್ಪತ್ತಿಯೇ ಪ್ರೀತಿಯ ಬಹುಮುಖ್ಯ ಅಗತ್ಯ ಎಂಬ ಸಾಮಾಜಿಕ, ಧಾರ್ಮಿಕ ಕಾರಣಗಳೂ ಈ ಪೂರ್ವಾಗ್ರಹವನ್ನು ಬೆಳೆಸಿವೆ, ಪೋಷಿಸಿವೆ, ನಮ್ಮೆಲ್ಲರಲ್ಲಿ ಬೇರುಬಿಟ್ಟ ಮರವಾಗಿಸಿವೆ.

ಲೈಂಗಿಕ ಅಲ್ಪಸಂಖ್ಯಾತರ ಕುರಿತು ಪೂರ್ವಗ್ರಹಗಳಿವೆ
ಈ ನಾಟಕ ರಚನೆಯಾದದ್ದು 1980ರ ದಶಕದಲ್ಲಿ. ಅಂದಿನ ದಿನಗಳಿಗೂ, ಇಂದಿನ ಪರಿಸ್ಥಿತಿಗೂ ಸಲಿಂಗಿಗಳ ಕುರಿತು ನಮ್ಮ ಸಮಾಜ ಹೊಂದಿರುವ ಮನಸ್ಥಿತಿಯಲ್ಲಿ ಬಹುದೊಡ್ಡ ಬದಲಾವಣೆಗಳಾಗಿಲ್ಲ. ಲೈಂಗಿಕ ಅಲ್ಪಸಂಖ್ಯಾತರ ಕುರಿತು ಜನರು ಹೊಂದಿರುವ ಪೂರ್ವಾಗ್ರಹಗಳು ಜನರಲ್ಲಿ ಗಟ್ಟಿಯಾಗಿ ಬೇರೂರಿವೆ. ಸಲಿಂಗ ವಿವಾಹವಾಗುವವರು ಅಸಾಮಾನ್ಯರು, ಅಸಹಜರು ಎನ್ನುವ ಧೋರಣೆಯನ್ನು ತೊಲಗಿಸುವ ನಿಟ್ಟಿನಲ್ಲಿ ರಂಗತಂಡ ಕಾರ್ಯಪ್ರವೃತ್ತವಾಗಿದೆ

ಸಹಜ ನಿರೂಪಣೆಯ ನಾಟಕ
ಸಲಿಂಗ ಪ್ರೇಮಿಗಳನ್ನು ಮುಖ್ಯವಾಹಿನಿಯ ಕಲಾಪ್ರಕಾರಗಳಲ್ಲಿ ಹಾಸ್ಯದ ವಸ್ತುವಾಗಿ ಬಳಸಿಕೊಂಡದ್ದೇ ಹೆಚ್ಚು; ಅಥವಾ ಅವರು ವ್ಯವಸ್ಥೆಯ ಬಲಿಪಶುಗಳು ಎಂಬುದನ್ನು ವೈಭವೀಕರಿಸಿ ಬಿಂಬಿಸಲಾಗುತ್ತಿದೆ. ಆದರೆ ಈ ಎರಡೂ ಸಿದ್ಧ ಮಾದರಿಯ ಸಾಧ್ಯತೆಗಳಾಚೆ ಸಲಿಂಗ ಪ್ರೀತಿ ಆತ್ಯಂತ ಸಹಜ ಎನ್ನುವುದನ್ನು ಗಟ್ಟಿಯಾದ ನಿಲುವಿನೊಂದಿಗೆ ಪ್ರತಿಪಾದಿಸಲು ಬೆಂಗಳೂರು ಥಿಯೇಟರ್ ಕಲೆಕ್ಟಿವ್ ಈ ಪ್ರಯೋಗದ ಮೂಲಕ ಪ್ರಯತ್ನ ಪಡುತ್ತಿದೆ. ಇದು ಸಮಸ್ಯೆಯ ವೈಭವೀಕರಣವಲ್ಲ. ನವಿರಾದ ಪ್ರೀತಿಯ ಕಥೆ - ಒಂದು ಪ್ರೀತಿಯ ಕಥೆ

ಸಲಿಂಗ ಕಾಮ ಅಸಹಜವಲ್ಲ ಎನ್ನುತ್ತದೆ ನಾಟಕ
ಸಲಿಂಗ ಕಾಮ ಅಸಹಜವಲ್ಲ ಎನ್ನುವುದನ್ನು ಪ್ರೇಕ್ಷಕರ ಮನಮುಟ್ಟುವಂತೆ ಸಾರುವುದೇ ನಾಟಕದ ಉದ್ದೇಶ. ಗಂಡು ಹೆಣ್ಣಿನ ಪ್ರೇಮಕ್ಕೆ ಎದುರಾಗುವ ಎಲ್ಲ ಅಡೆತಡೆಗಳು ಸಲಿಂಗಿಗಳ ಪ್ರೀತಿಗೂ ಎದುರಾಗುತ್ತವೆ, ಆದರೆ, ಸಲಿಂಗ ಕಾಮಿಗಳನ್ನು ಈ ಸಮಾಜ ನೋಡುವ ಬಗೆ ಮತ್ತು ಅವರ ಪ್ರೀತಿಗೆ ಸಮಾಜ ಕೊಡುವ ಅನೈತಿಕತೆಯ ಪಟ್ಟ, ಅದರಿಂದಾಗಿ ಈ ಪ್ರೇಮಿಗಳ ಬದುಕಿನಲ್ಲಾಗುವ ಪರಿಣಾಮಗಳ ಬಗೆಗೆ ನಾಟಕ ಬೆಳಕು ಚೆಲ್ಲುತ್ತದೆ.
-
SSLC ಪರೀಕ್ಷೆ-1 ಆರಂಭ: ಮಲ್ಲೇಶ್ವರಂನ ಕೆಪಿಎಸ್ ಶಾಲೆಗೆ ಸಚಿವ ಮಧು ಬಂಗಾರಪ್ಪ ಭೇಟಿ, ವಿದ್ಯಾರ್ಥಿಗಳಿಗೆ ಶುಭಹಾರೈಕೆ -
RCB: ಆರ್ಸಿಬಿಯಲ್ಲಿ ಜೋಶ್ ಹ್ಯಾಜಲ್ವುಡ್ ಸ್ಥಾನ ತುಂಬುವ ಆಟಗಾರ ಇವರೇ ನೋಡಿ -
ಶೆಲ್ ಬಂಕ್ನಲ್ಲಿ ಪೆಟ್ರೋಲ್ ದರ ಏರಿಕೆ: ಬೆಂಗಳೂರಿನಲ್ಲಿ 10 ದಿನಗಳಲ್ಲಿ 4.50 ರೂಪಾಯಿ ಹೆಚ್ಚಳ; ಇಲ್ಲಿದೆ ದರಪಟ್ಟಿ -
Gold Price Today: ಯುಗಾದಿಗೂ ಮೊದಲೇ ಚಿನ್ನದ ದರದಲ್ಲಿ ಭಾರೀ ಇಳಿಕೆ; ಆಭರಣ ಪ್ರಿಯರಿಗೆ ಇಂದೇ ಹಬ್ಬ -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
ಮಗುವನ್ನ ಸಾಕಲು ಹಣ ಬೇಕಾದ್ರೆ ಯಾರ ಜೊತೆ ಬೇಕಿದ್ರೂ ಮಲಗುವೆ: ಬಿಗ್ಬಾಸ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್ -
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು












Click it and Unblock the Notifications