ಸಲಿಂಗ ಪ್ರೇಮ ಕುರಿತ ನಾಟಕ- ಒಂದು ಪ್ರೀತಿಯ ಕಥೆ
ಬೆಂಗಳೂರು, ಮೇ 23: ಒಂದು ಪ್ರೀತಿಯ ಕಥೆ, ಸಲಿಂಗ ಪ್ರೀತಿ ಮತ್ತು ಈ ಪ್ರೇಮಿಗಳ ಜೀವನದಲ್ಲಿ ಸಮಾಜ ಸೃಷ್ಟಿಸುವ ತಲ್ಲಣಗಳ ಕಥೆ. 1982ರಲ್ಲಿ ವಿಜಯ್ ತೆಂಡೂಲ್ಕರ್ ಅವರು ರಚಿಸಿದ 'ಮಿತ್ರಾಚಿ ಗೋಶ್ಟ್' ನಾಟಕವನ್ನು ವೆಂಕಟೇಶ್ ಪ್ರಸಾದ್ 'ಒಂದು ಪ್ರೀತಿಯ ಕಥೆ' ಎಂಬ ಹೆಸರಿನೊಂದಿಗೆ ಕನ್ನಡಕ್ಕೆ ರೂಪಾಂತರಿಸಿ ನಿರ್ದೇಶಿಸಿದ್ದಾರೆ. ಈ ನಾಟಕ ಮತ್ತೊಮ್ಮೆ ಮೇ 25ರಂದು ಕೆ ಎಚ್ ಕಲಾಸೌಧದಲ್ಲಿ ಪ್ರದರ್ಶನವಾಗುತ್ತಿದೆ.
ಸಲಿಂಗಿಗಳ ವಿವಾಹ ವಿಷಯ ಕುರಿತು ರಂಗಪ್ರಯೋಗಗಳಾಗಿದ್ದು ವಿರಳ. ತೃತೀಯ ಲಿಂಗಿಗಳು, ಸಲಿಂಗಿಗಳು ಹಾಗೂ ಲೈಂಗಿಕ ಅಲ್ಪಸಂಖ್ಯಾತರನ್ನು ಮುಖ್ಯವಾಹಿನಿಯ ಕಲಾ ಪ್ರಕಾರಗಳಲ್ಲಿ ಹಾಸ್ಯದ ವಸ್ತುವಾಗಿ ಬಳಸಿಕೊಂಡಿದ್ದೇ ಹೆಚ್ಚು. ಇಲ್ಲವೇ ಅವರನ್ನು ವ್ಯವಸ್ಥೆಯ ಬಲಿಪಶುಗಳು ಎನ್ನುವಂತೆ ಬಿಂಬಿಸಲಾಗುತ್ತದೆ.
ಆದರೆ, ಈ ಎರಡೂ ಸಿದ್ಧ ಮಾದರಿಯ ಸಾಧ್ಯತೆಗಳಾಚೆ ಸಲಿಂಗ ವಿವಾಹ ಹಾಗೂ ಸಲಿಂಗ ಪ್ರೀತಿ ಅತಿ ಸಹಜವಾದುದು ಎನ್ನುವುದನ್ನು ಗಟ್ಟಿಯಾದ ನಿಲುವಿನೊಂದಿಗೆ ಪ್ರತಿಪಾದಿಸಲು ಬೆಂಗಳೂರು ಥಿಯೇಟರ್ ಕಲೆಕ್ಟಿವ್' ಈ ಪ್ರಯೋಗದ ಮೂಲಕ ಪ್ರಯತ್ನ ಪಡುತ್ತಿದೆ.
ಸಲಿಂಗ ಕಾಮ ವೈಯಕ್ತಿಕ ಆಯ್ಕೆಯಲ್ಲ. ನೈಸರ್ಗಿಕವಾಗಿಯೇ ಈ ರೀತಿಯ ಆಸಕ್ತಿಗಳು ಮೂಡುತ್ತವೆ ಎಂದು ವೈದ್ಯಕೀಯ ವಿಜ್ಞಾನ ತಿಳಿಸುತ್ತದೆ. ಪ್ರಾಣಿಗಳಲ್ಲಿಯೂ ಈ ಬಗೆಯ ಸಂಬಂಧಗಳನ್ನು ಕಾಣಬಹುದು. ಸಲಿಂಗವು ಅಸಾಮಾನ್ಯ ಪ್ರವೃತ್ತಿಯಲ್ಲ. ಗಂಡು ಹೆಣ್ಣಿನ ಪ್ರೀತಿ ಹೇಗೆ ಸಾಗುತ್ತದೆಯೋ ಹಾಗೆಯೇ ಇಬ್ಬರು ಹೆಣ್ಣು ಮಕ್ಕಳ ಪ್ರೇಮವನ್ನೂ ನಾಟಕದಲ್ಲಿ ಹೆಣೆಯಲಾಗಿದೆ.

ಬೆಂಗಳೂರು ಥಿಯೇಟರ್ ಕಲೆಕ್ಟಿವ್ ಪ್ರಯೋಗ
ಸಲಿಂಗ ಕಾಮ ಅಸಹಜವಲ್ಲ ಎನ್ನುವುದನ್ನು ಪ್ರೇಕ್ಷಕರ ಮನಮುಟ್ಟುವಂತೆ ಸಾರುವುದೇ ನಾಟಕದ ಉದ್ದೇಶ. ಗಂಡು ಹೆಣ್ಣಿನ ಪ್ರೇಮಕ್ಕೆ ಎದುರಾಗುವ ಎಲ್ಲ ಅಡೆತಡೆಗಳು ಸಲಿಂಗಿಗಳ ಪ್ರೀತಿಗೂ ಎದುರಾಗುತ್ತವೆ, ಆದರೆ, ಸಲಿಂಗ ಕಾಮಿಗಳನ್ನು ಈ ಸಮಾಜ ನೋಡುವ ಬಗೆ ಮತ್ತು ಅವರ ಪ್ರೀತಿಗೆ ಸಮಾಜ ಕೊಡುವ ಅನೈತಿಕತೆಯ ಪಟ್ಟ, ಅದರಿಂದಾಗಿ ಈ ಪ್ರೇಮಿಗಳ ಬದುಕಿನಲ್ಲಾಗುವ ಪರಿಣಾಮಗಳ ಬಗೆಗೆ ನಾಟಕ ಬೆಳಕು ಚೆಲ್ಲುತ್ತದೆ.

ಪೂರ್ವಾಗ್ರಹಗಳು ಜನರಲ್ಲಿ ಗಟ್ಟಿಯಾಗಿ ಬೇರೂರಿವೆ
ಈ ನಾಟಕ ರಚನೆಯಾದದ್ದು 1980ರ ದಶಕದಲ್ಲಿ. ಅಂದಿನ ದಿನಗಳಿಗೂ, ಇಂದಿನ ಪರಿಸ್ಥಿತಿಗೂ ಸಲಿಂಗಿಗಳ ಕುರಿತು ನಮ್ಮ ಸಮಾಜ ಹೊಂದಿರುವ ಮನಸ್ಥಿತಿಯಲ್ಲಿ ಬಹುದೊಡ್ಡ ಬದಲಾವಣೆಗಳಾಗಿಲ್ಲ. ಲೈಂಗಿಕ ಅಲ್ಪಸಂಖ್ಯಾತರ ಕುರಿತು ಜನರು ಹೊಂದಿರುವ ಪೂರ್ವಾಗ್ರಹಗಳು ಜನರಲ್ಲಿ ಗಟ್ಟಿಯಾಗಿ ಬೇರೂರಿವೆ. ಸಲಿಂಗ ವಿವಾಹವಾಗುವವರು ಅಸಾಮಾನ್ಯರು, ಅಸಹಜರು ಎನ್ನುವ ಧೋರಣೆಯನ್ನು ತೊಲಗಿಸುವ ನಿಟ್ಟಿನಲ್ಲಿ ರಂಗತಂಡ ಕಾರ್ಯಪ್ರವೃತ್ತವಾಗಿದೆ

ಕಲೆಗಳಲ್ಲಿ ಹಾಸ್ಯಕ್ಕೆ ಬಳಸಿಕೊಳ್ಳುವುದು
ಲೈಂಗಿಕ ಅಲ್ಪಸಂಖ್ಯಾತರನ್ನು ಕಲೆಗಳಲ್ಲಿ ಹಾಸ್ಯಕ್ಕೆ ಬಳಸಿಕೊಳ್ಳುವುದು ಅಥವಾ ಅವರ ಸಮಸ್ಯೆಗಳನ್ನು ವೈಭವೀಕರಿಸುವುದು, ಅಲ್ಲದೆ ವೀಕ್ಷಕರಿಂದ ಕಣ್ಣೀರು ಹಾಕಿಸಿ, ಸಮಾಜದಲ್ಲಿ ಸಲಿಂಗಿಗಳು ಸಹಜವಾಗಿ ಬದುಕಲು ಸಾಕಷ್ಟು ಶ್ರಮಪಡಬೇಕಾಗುತ್ತದೆ ಎಂಬುದನ್ನು ತಿಳಿಸುವುದು ಸರಿಯಲ್ಲ. ಇದರಿಂದ ಸಲಿಂಗಿಗಳನ್ನು ನೋಡುವ ಸಮಾಜದ ದೃಷ್ಟಿಕೋನದಲ್ಲಿ ಯಾವುದೇ ಬದಲಾವಣೆಗಳಾಗುವುದಿಲ್ಲ. ಹಾಗಾಗಿ ಈ ನಾಟಕದ ನಿರೂಪಣೆಯನ್ನು ಸಹಜವಾಗಿ ಕಟ್ಟಲಾಗಿದೆ.

ನವಿರಾದ ಪ್ರೀತಿಯ ಕಥೆ
ಇದು ಸಮಸ್ಯೆಯ ವೈಭವೀಕರಣವಲ್ಲ. ನವಿರಾದ ಪ್ರೀತಿಯ ಕಥೆ - ಒಂದು ಪ್ರೀತಿಯ ಕಥೆ ನಾಟಕ : ಒಂದು ಪ್ರೀತಿಯ ಕಥೆ..!
ಕನ್ನಡ ನಾಟಕ 110 ನಿಮಿಷಗಳು
ಮರಾಠಿ ಮೂಲ : ವಿಜಯ್ ತೆಂಡೂಲ್ಕರ್ ರ 'ಮಿತ್ರಾಚಿ ಗೋಶ್ಟ್'
ನಿರ್ದೇಶನ : ವೆಂಕಟೇಶ್ ಪ್ರಸಾದ್
ಸಹ ನಿರ್ದೇಶನ : ಉಜ್ವಲ ರಾವ್
ಮೇ 25 ರಂದು ಸಂಜೆ 7:30 | 150/- ಟಿಕೆಟ್‍ಗಳು ಕೆ ಎಚ್ ಕಲಾಸೌಧದಲ್ಲಿ ದೊರೆಯುತ್ತವೆ.
-
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
RCB Vs SRH: ಎಸ್ಆರ್ಎಚ್ ವಿರುದ್ಧದ ಐಪಿಎಲ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕಿಂಗ್ ಕುರಿತು ಆರ್ಸಿಬಿ ಬಿಗ್ ಅಪ್ಡೇಟ್ -
ತಿಂಗಳಿಗೆ 50 ಸಾವಿರ ಸಂಬಳ ಇದೆಯಾ? 2026ರಲ್ಲಿ ಬೆಂಗಳೂರಿನಂತಹ ಮಹಾನಗರದಲ್ಲಿ ಜೀವನ ವೆಚ್ಚ ಎಷ್ಟಾಗುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ -
ಜೋಶ್ ಹ್ಯಾಜಲ್ವುಡ್ ಔಟ್, 7 ಕೋಟಿಯ ಆಟಗಾರನಿಗಿಲ್ಲ ಸ್ಥಾನ; ಅಶ್ವಿನ್ ಹೇಳಿದ ಆರ್ಸಿಬಿ ಸಂಭಾವ್ಯ ಪ್ಲೇಯಿಂಗ್ 11 ಇಲ್ಲಿದೆ -
AI ಮೂಲಕ ಬರುವ ಉದ್ಯೋಗ ಅರ್ಜಿಗಳಿಂದ ಬೆಂಗಳೂರು ಉದ್ಯಮಿ ಬೇಸರ: 'ಅರ್ಜಿಗಳು ಜಾಸ್ತಿ, ಅರ್ಹತೆ ಕಡಿಮೆ’ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain












Click it and Unblock the Notifications