ರಂಗಶಂಕರದಲ್ಲಿ ಒಂದ್ ಸೆಕೆಂಡ್-ವಾಸ್ತವ ಹುಡುಕಾಟದ ನಾಟಕ
ಬೆಂಗಳೂರು, ಡಿಸೆಂಬರ್ 26: ಬೆಂಗಳೂರಿನ ಜನಪ್ರಿಯವಾದ ವಿಮೂವ್ ಥಿಯೇಟರ್ ನಾಟಕ ಸಂಸ್ಥೆಯು ಕಳೆದ ಹದಿಮೂರು ವರ್ಷಗಳಿಂದ ದೇಶದಾದ್ಯಂತ ತನ್ನ ನಾಟಕಗಳ ಪ್ರತಿ ವರ್ಷ ಹಾಗೂ ರಂಗ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ. ವಿ ಮೂವ್ ತಂಡ ತನ್ನ 16ನೇ ರಂಗ ಪ್ರಯೋಗವಾಗಿ, ''ಒಂದ್ ಸೆಕೆಂಡ್'' ಎಂಬ ಹೊಸ ಕನನ ಡ ನಾಟಕವನ್ನನ ರಂಗದ ಮೇಲೆ ತಂದಿದೆ. ಡಿಸೆಂಬರ್ 27ರಂದು ರಂಗಶಂಕರದಲ್ಲಿ ಪ್ರದರ್ಶನಗೊಳ್ಳುತ್ತಿದೆ.
ನಾಟಕದ ಬಗ್ಗೆ:
ಒಂದ್ ಸೆಕೆಂಡ್ ನಾಟಕವನ್ನು, ಗೋಪಾಲಕೃಷ್ಣಪೆೈ ಅನುವಾದಿಸಿರುವ ಆಧುನಿಕ ಚೀನಿ ಕಥೆಗಳು ಪುಸ್ತಕದಿಂದ ರಂಗಕ್ಕೆ ಅಳವಡಿಸಿಕೊಳ್ಳಲಾಗಿದೆ.

ಈ ನಾಟಕ ಒಬ್ಬ ವ್ಯಕಿಯು ವಾಸ್ತವದ ಹುಡುಕಾಟದ ಕಥೆ, ತನ್ನ ಜೀವನದಲ್ಲಿ ನಡೆದು ಹೋಗಿರುವ ಅತಿ ದೊಡ್ಡ ಸನ್ನಿವೇಶವನ್ನು ಮೆಲುಕು ಹಾಕುತ್ತಾ ಆ ಸನ್ನಿವೇಶ ಹೆೇಗೆ ಅವನ ಜೀವನದ ದಿಕ್ಕನ್ನು ಬದಲಾಯಿಸಿತು ಅನ್ನೋದನ್ನು ಎಳೆ ಎಳೆಯಾಗಿ ಬಿಡಿಸುತ್ತಿರುವಾಗ ಅವನಿಗೆ ಅರಿವಾಗುವ ಸತ್ಯವೇ ಅವನು ಹುಡುಕುತ್ತಿದ್ದ ವಾಸ್ತವವೆೇ? ಅನ್ನೋ ಪ್ರಶ್ನೆಯಿಂದ ನಾಟಕ ಮಕ್ತಾಯವಾಗುತ್ತದೆ.
ನಾಟಕ: ಒಂದ್ ನಾಟಕ
ಸಮಯ: 60 ನಿಮಿಷ.
ರಂಗದ ಮೇಲೆ: ಅನಿರುಧ್ ಮಹೇಶ್
ಸಂಗೀತ: ಅಭಿಷೇಕ್ ನರೈನ್
ಬೆಳಕು: ಮಂಜು ನಾರಾಯಣ್
ರಚನೆ, ನಿರ್ದೇಶನ: ಅಭಿಷೇಕ್ ಅಯ್ಯಂಗಾರ್
ಸ್ಥಳ: ರಂಗ ಶಂಕರ, ಜೆಪಿ ನಗರ, ಬೆಂಗಳೂರು
ದಿನಾಂಕ: ಡಿಸೆಂಬರ್ 27, ಸಂಜೆ 7.30

ಒಬ್ಬ ಮನುಷ್ಯನ ಒಳ ಯೋಚನೆಗಳನ್ನು ಪ್ರತಿಬಿಂಬಿಸುವ ಪ್ರಯತ್ನದಲ್ಲಿ ಹೆೇಗೆ ಜೀವನದ ಕೆಲವು ಮುಖ್ಯ ಸನ್ನಿವೇಶಗಳು ಒಂದು ಜೀವನವನ್ನೇ ಬದಲಾಯಿಸುವುದು ಅನ್ನೋದೆ ನಾಟಕದ ತಿರುಳು! ನಾಟಕದ ಪಾತ್ರಧಾರಿ ತನ್ನ ಕಥೆಯನ್ನು ವ್ಯಕ್ತಪಡಿಸುತ್ತ, ತನ್ನಲ್ಲಿ ಪ್ರತಿಯೊಬ್ಬ ಪ್ರೇಕ್ಷಕನನ್ನು ಬಿಂಬಿಸುವ ತಂತ್ರವನ್ನು ನಾಟಕದಲ್ಲಿ ಅಳವಡಿಸಲಾಗಿದೆ. ನಾಟಕ ವಿಡಂಬನಾತ್ಮಕ ಶೈಲಿಯಲ್ಲಿದ್ದು, ಪಾತ್ರಧಾರನ ಕಥೆಯನ್ನು ಸಮಾಜದ ಆಗು ಹೋಗುಗಳ ಮಧ್ಯೆ ಬಿಂಬಿಸುವ ತನ್ನಲ್ಲಿ ಅಡಗಿರೋ ಪ್ರಶ್ನೆಗಳನ್ನು ಪ್ರೇಕ್ಷಕನಿಗೆ ಕೇಳುತ್ತ ಸಂವಾದಾತ್ಮಕ ಮಾದರಿಯಲ್ಲಿ ನಾಟಕವನ್ನು ಕಟ್ಟಿ ಕೊಡಲು ಪ್ರಯತ್ನ ಮಾಡಲಾಗಿದೆ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications