ಹಳೆಯ ಬೆಂಗಳೂರು vs ಹೊಸ ಬೆಂಗಳೂರು ಚರ್ಚೆ! ಸೋಷಿಯಲ್ ಮೀಡಿಯಾ ಪೋಸ್ಟ್ ವೈರಲ್.. Viral Video
Old Bengaluru vs New Bengaluru: ಬೆಂಗಳೂರಿನ ಬಗ್ಗೆ ಹೊರಗಿನಿಂದ ಬಂದವರು ಅಪಹಾಸ್ಯ ಮಾಡುವುದು ನಡೆಯುತ್ತಿತ್ತು. ಅಲ್ಲದೇ ಬೆಂಗಳೂರಿನಲ್ಲಿ ಕನ್ನಡ ಮಾತನಾಡಿ ಎಂದು ಹೇಳಿದಾಗಲೂ ವಿವಾದ ಶುರುವಾಗಿತ್ತು. ಇದೀಗ ಬೆಂಗಳೂರಿನ ಎರಡು ಭಾಗ ಅಥವಾ ಪ್ರದೇಶಗಳ ಬಗ್ಗೆ ಹಾಗೂ ಯಾವುದು ಉತ್ತಮ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಬೆಂಗಳೂರಿನ ಜಯನಗರ ಪ್ರದೇಶ ಹಾಗೂ ವೈಟ್‌ಫೀಲ್ಡ್ ಪ್ರದೇಗಳು ಹೇಗಿವೆ ಎನ್ನುವ ಬಗ್ಗೆ ಚರ್ಚೆ ನಡೆದಿದೆ. ಬೆಂಗಳೂರಿನಲ್ಲಿ ವಲಸೆ ಬೆಂಗಳೂರಿಗರು, ಮೂಲ ಬೆಂಗಳೂರಿಗರು ಅಂತಾ ಇರುವಂತೆಯೇ ಹಳೆಯ ಬೆಂಗಳೂರು ಮತ್ತು ಹೊಸ ಬೆಂಗಳೂರು ಎನ್ನುವ ವಿಷಯವೂ ಆಗ್ಗಾಗ್ಗೆ ಚರ್ಚೆಯಾಗುವುದು ಇದೆ.
ಬೆಂಗಳೂರು ಮೂಲದ ಹೃದ್ರೋಗ ತಜ್ಞರೊಬ್ಬರು ಈ ವಿಷಯವನ್ನು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪ್ರಸ್ತಾಪಿಸಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ವೈಟ್‌ಫೀಲ್ಡ್ ಪ್ರದೇಶದ ಬಗ್ಗೆ ಟ್ರೋಲ್ ನಡೆಯುತ್ತಿದ್ದು ಇದಕ್ಕೆ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಡಾ. ದೀಪಕ್ ಕೃಷ್ಣಮೂರ್ತಿ ಎನ್ನುವವರು ವೈಟ್‌ಫೀಲ್ಡ್ ಮತ್ತು ಬೆಂಗಳೂರಿನ ಪೂರ್ವ ಭಾಗದ ಪ್ರದೇಶ ಹಾಗೂ ಇಲ್ಲಿನ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಬೆಂಗಳೂರಿನ ಹಳೆಯ ಪ್ರದೇಶ ಹಾಗೂ ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ದಕ್ಷಿಣ ವಲಯಗಳಾದ ಜಯನಗರ, ಬಸವನಗುಡಿ ಮತ್ತು ಮಲ್ಲೇಶ್ವರ ಪ್ರದೇಶದಿಂದ ವೈಟ್‌ಫೀಲ್ಡ್ ತುಂಬಾ ದೂರ ಇದೆ. ಅಂದರೆ ಈ ಪ್ರದೇಶಗಳು ಚೆನ್ನಾಗಿವೆ ವೈಟ್‌ಫೀಲ್ಡ್ ಹೇಳಿಕೊಳ್ಳುವಂತೆ ಇಲ್ಲ ಎಂದು ಕೆಲವರು ಆನ್‌ಲೈನ್‌ನಲ್ಲಿ ಟ್ರೋಲ್ ಮಾಡುವುದು ಇದೆ.

ಇದೇ ವಿಚಾರವನ್ನು ಕೃಷ್ಣಮೂರ್ತಿ ಎನ್ನುವವರು ಪ್ರಸ್ತಾಪಿಸಿದ್ದು 2004 ರಿಂದ ವೈಟ್‌ಫೀಲ್ಡ್‌ನಲ್ಲಿ ವಾಸಿಸುತ್ತಿದ್ದೇವೆ. ಈ ಪ್ರದೇಶವು ಬೆಂಗಳೂರಿನ ಸಾಂಪ್ರದಾಯಿಕ ಪ್ರದೇಶಗಳಿಗಿಂತ ಭಿನ್ನವಾಗಿಲ್ಲ ಎಂದಿದ್ದಾರೆ.
"ವೈಟ್‌ಫೀಲ್ಡ್ ಒಂದು ನಗರ ಪ್ರದೇಶ ಇದು ತುಂಬಾ ದೂರ ಎಂದು ಭಾವಿಸುವ ಜನರು... ಇಲ್ಲಿಗೆ ಬರಬೇಕಾಗಿಲ್ಲ. ಉಳಿದವರಿಗೆ ಮೆಟ್ರೋ ಮತ್ತು ವೋಲ್ವೋ ಬಸ್‌ಗಳಿವೆ. ನಮ್ಮಲ್ಲಿ ಉತ್ತಮ ಶಾಲೆಗಳು, ಆಸ್ಪತ್ರೆಗಳು, ರಾತ್ರಿಜೀವನ, ರೆಸ್ಟೋರೆಂಟ್‌ಗಳು, ಮಾಲ್‌ಗಳು ಇವೆ, ನೀವು ಹೆಸರಿಸಿ." ಎಂದು ಟ್ವೀಟ್ ಮಾಡಿದ್ದಾರೆ.
ಹಳೆಯ ಬೆಂಗಳೂರಿನ ಭಾಗದಲ್ಲಿ ಇರುವವರು ಅವರ ಹಿರಿಯ ದುಡ್ಡಿನ ಅಥವಾ ಅನುವಂಶಿಕವಾಗಿ ಬಂದಿರುವ ಆಸ್ತಿಯನ್ನು ಬಳಸುತ್ತಿದ್ದಾರೆ. ಜಯನಗರ ಅಥವಾ ಮಲ್ಲೇಶ್ವರದಂತಹ ಪ್ರದೇಶಗಳಲ್ಲಿ ಇರುವವರು ಈಗಾಗಲೇ ಹಿರಿಯರು ಗಳಿಸಿರುವ ಆಸ್ತಿಯಲ್ಲಿ ಮನೆ ಕಟ್ಟಿಕೊಂಡಿದ್ದಾರೆ. ಆದರೆ, ಹಿರಿಯರು ಸಂಪತ್ತು ಇಲ್ಲದೆ ಇರುವವರು ಸರ್ಜಾಪುರ ಹಾಗೂ ವೈಟ್‌ಫೀಲ್ಡ್‌ನಂತಹ ಸ್ಥಳಗಳಲ್ಲಿ ಮನೆಗಳನ್ನು ನಿರ್ಮಿಸಿದ್ದೇವೆ ಎಂದು ಅವರು ಹೇಳಿಕೊಂಡಿದ್ದಾರೆ.
I live in Whitefield since 2004.
— Dr Deepak Krishnamurthy (@DrDeepakKrishn1) August 5, 2025
The number of times I'd need to leave Whitefield in a month is almost zero.
Why?
Whitefield is a city by itself.
People who think this is way too far.. no need to come here.
For the rest.. there is Metro and Volvo buses.
Good schools, good… pic.twitter.com/IAYJxatpaP
ಜಯನಗರ, ಬಸವನಗುಡಿ ಹಾಗೂ ಮಲ್ಲೇಶ್ವರದಂತಹ ಪ್ರದೇಶಗಳು ಇನ್ನೂ ಹಳೆಯ ಬೆಂಗಳೂರಿನ ಗುರುತನ್ನು ಹಿಡಿದಿಟ್ಟುಕೊಂಡಿವೆ. ಹೊಸ ವಲಯಗಳು ನಗರ ವಿಸ್ತಾರದಂತೆ ಅಷ್ಟೇ ಕಾಣಿಸುತ್ತಾದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ಹಳೆಯ ಬೆಂಗಳೂರಿನಲ್ಲಿ ಸಂಸ್ಕೃತಿ, ಸಂಪ್ರದಾಯ ಮತ್ತು ಕನ್ನಡ ಮಾತನಾಡುವವರು ಇದ್ದಾರೆ ಎಂದು ಕೆಲವರು ಹೇಳಿದ್ದಾರೆ. ಒಟ್ಟಾರೆ ಇದೀಗ ಬೆಂಗಳೂರಿನ ಬಗ್ಗೆ ಹೊರಗಿನವರು ಚರ್ಚೆ ಮಾಡುವುದಕ್ಕೆ ಮತ್ತೊಂದು ಹೊಸ ಟಾಪಿಕ್ ಸಿಕ್ಕಂತೆ ಆಗಿದೆ.
-
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Bengaluru Second Airport: 5 ತಿಂಗಳಲ್ಲಿ ಬೆಂಗಳೂರು 2ನೇ ವಿಮಾನ ನಿಲ್ದಾಣ ಸ್ಥಳ ಫೈನಲ್: 3 ತಾಣಗಳಿಗೆ ಕಾರ್ಯಸಾಧ್ಯತಾ ವರದಿ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
Viral Video: ತೆಂಗಿನ ಚಿಪ್ಪನ್ನು ಮಗುವಿನ ಶೌಚಾಲಯ ಮಾಡಿಕೊಂಡ ದಂಪತಿ, ವಿಡಿಯೋ ವೈರಲ್ -
Free Biryani: ಒಂದು ಸಿಲಿಂಡರ್ ಕೊಡಿ, ತಿಂಗಳು ಪೂರ್ತಿ ಉಚಿತ ಬಿರಿಯಾನಿ ತಿನ್ನಿ: ಹೊಸೂರು ಹೋಟೆಲ್ನಿಂದ ಭರ್ಜರಿ ಆಫರ್ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ












Click it and Unblock the Notifications