ಮನೆಗೆ ಬರಲಿದೆ Oxygen Concentrator; ಓಲಾದಲ್ಲಿ ಬುಕ್ ಮಾಡಿ
ಬೆಂಗಳೂರು, ಮೇ 12; ಕೋವಿಡ್ 2ನೇ ಅಲೆ ಸಂದರ್ಭದಲ್ಲಿ ಆಕ್ಸಿಜನ್ ಬೆಡ್‌ಗೆ ಭಾರೀ ಬೇಡಿಕೆ ಇದೆ. ಹೋಂ ಐಸೋಲೇಷನ್‌ನಲ್ಲಿರುವ ಸೋಂಕಿತರಿಗೆ ಸಹ ಆಕ್ಸಿಜನ್ ಅಗತ್ಯವಿರುತ್ತದೆ. ಇದರಿಂದಾಗಿ ಆಕ್ಸಿಜನ್ ಕಾನ್ಸ್‌ನ್‌ಟೇಟರ್‌ಗಳಿಗೆ ಬೇಡಿಕೆ ಹೆಚ್ಚಿದೆ.
ಹೋಂ ಐಸೋಲೇಷನ್‌ನಲ್ಲಿರುವ ಸೋಂಕಿತರಿಗೆ ನೆರವಾಗಲಯ ಓಲಾ, Zerodha ಮತ್ತು GiveIndia ಸಹಯೋಗದೊಂದಿಗೆ ಹೊಸ ಯೋಜನೆಯನ್ನು ರೂಪಿಸಿದೆ. ಅಗತ್ಯ ಇರುವ ಸೋಂಕಿತರ ಮನೆ ಬಾಗಿಲಿಗೆ ಆಕ್ಸಿಜನ್ ಕಾನ್ಸ್‌ನ್‌ಟೇಟರ್ ಉಸಿತವಾಗಿ ತಲುಪಿಸಲಾಗುತ್ತದೆ.
ಬುಧವಾರ ಬೆಂಗಳೂರು ನಗರದಲ್ಲಿ ಉಪ ಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ್ ಈ ಸೇವೆಗೆ ಚಾಲನೆ ನೀಡಿದರು. ಸದ್ಯ ಬೆಂಗಳೂರಿನ ಮಲ್ಲೇಶ್ವರ ಮತ್ತು ಕೋರಮಂಗಲದಲ್ಲಿ ಈ ಸೇವೆ ಲಭ್ಯವಿದೆ. ನಗರದ ಇತರ ಭಾಗಗಳಿಗೆ ಮತ್ತು ರಾಜ್ಯಾದ್ಯಂತ ಶೀಘ್ರವೇ ಜಾರಿಯಾಗಲಿದೆ.

ಕೋವಿಡ್ ಸೋಂಕಿತರ ಆಕ್ಸಿಜನ್ ಸ್ಯಾಚುರೇಷನ್ ಮಟ್ಟ 94ಕ್ಕಿಂತ ಕಡಿಮೆ ಇರುವವರಿಗೆ ಈ ಸೇವೆ ಸಹಾಯಕವಾಗಲಿದೆ. ಓಲಾ ಅಪ್ಲಿಕೇಶನ್ ಮೂಲಕ ಜನರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಚೇತರಿಸಿಕೊಂಡ ನಂತರ ಅದನ್ನು ವಾಪಸ್ ನೀಡಬೇಕು.
ಮನೆಯ ಆರೈಕೆಯಲ್ಲಿರುವ ಸೋಂಕಿತರು ಆಕ್ಸಿಜನ್ ಮಟ್ಟ ಕುಸಿದಾಗ ಆಕ್ಸಿಜನ್ ಬೆಡ್‌ಗಾಗಿ ಹುಡುಕಾಟ ನಡೆಸುತ್ತಾರೆ. ಅಂತಹ ಸೋಂಕಿತರಿಗೆ ಇದು ಸಹಾಯಕವಾಗಲಿದೆ. ಓಲಾ ಉಚಿತವಾಗಿ ಸೋಂಕಿತರ ಮನೆ ಬಾಗಿಲಿಗೆ ಕಾನ್ಸ್‌ನ್‌ಟ್ರೇಟರ್ ತಲುಪಿಸಲಿದೆ.












Click it and Unblock the Notifications