ಬೆಂಗಳೂರು ಓಕಳಿಪುರಂ ಸಿಗ್ನಲ್ ಫ್ರಿ ಕಾರಿಡಾರ್: ಡಿಸೆಂಬರ್ ನಲ್ಲಿ ಸಂಪೂರ್ಣ
ಬೆಂಗಳೂರು, ಜೂನ್ 7: ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಓಕಳಿಪುರಂ ಜಂಕ್ಷನ್ ಸಿಗ್ನಲ್ ಫ್ರಿ ಕಾರಿಡಾರ್ ಯೋಜನೆಯನ್ನು ಇದೇ ಡಿಸೆಂಬರ್ ನಲ್ಲಿ ಪೂರ್ಣಗೊಳಿಸಿ, ಸಾರ್ವಜನಿಕ ಸಂಚಾರಕ್ಕೆ ಅನುಕೂಲಮಾಡಿಕೊಡಲಾಗುವುದು ಎಂದು ಬೆಂಗಳೂರು ಅಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ಯೋಜನೆಯ ಕಾಮಗಾರಿಯಿಂದಾಗಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಯೋಜನೆಯ ತ್ವರಿತಗತಿಗೆ ಅನುವು ಮಾಡಿಕೊಡುವ ಸಲುವಾಗಿ ಈ ಭಾಗದಲ್ಲಿ ತಾತ್ಕಾಲಿಕ ಕೆಳಸೇತುವೆಯನ್ನು ನಿರ್ಮಿಸಲಾಗಿದೆ. ಈ ಕೆಳ ಸೇತುವೆಯನ್ನು ಉದ್ಘಾಟಿಸಿದ ಕೆ.ಜೆ.ಜಾರ್ಜ್ ಡಿಸೆಂಬರ್ ಹೊತ್ತಿಗೆ ಯೋಜನೆ ಸಾರ್ವಜನಿಕ ಮುಕ್ತವಾಗಲಿದೆ ಎಂದು ತಿಳಿಸಿದರು.[ಚಿತ್ರಗಳು : ಓಕಳಿಪುರಂ ಸಿಗ್ನಲ್ ಫ್ರೀ ಕಾರಿಡಾರ್ ಯೋಜನೆ]

ಸದಾಕಾಲ ಸಂಚಾರ ದಟ್ಟಣೆಯಿಂದ ತುಂಬುವ ಓಕಳಿಪುರಂ ಜಂಕ್ಷನ್ ನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ತುಮಕೂರು ರಸ್ತೆಯಿಂದ ಮಲ್ಲೇಶ್ವರ ಮತ್ತು ಮೆಜೆಸ್ಟಿಕ್ ಕಡೆ ಸಾಗುವ ಮಾರ್ಗದಲ್ಲಿ ಉದ್ದೇಶಿತ ಸಿಗ್ನಲ್ ಫ್ರಿ ಕಾರಿಡಾರ್ ಯೋಜನೆ ಜಾರಿಗೊಳಿಸಲಾಗುತ್ತಿದೆ.[ಓಕಳಿಪುರಂ ಅಷ್ಟಪಥ ಕಾಮಗಾರಿಯ ಅಡ್ಡಿಗಳು ನಿವಾರಣೆ]
ಈ ಹಿನ್ನೆಲೆಯಲ್ಲಿ ಕಾಮಗಾರಿ ಚುರುಕುಗೊಳಿಸುವ ಉದ್ದೇಶದಿಂದ, ಕಾಮಕಾರಿ ಮುಗಿಯುವವರೆಗೂ ಪರ್ಯಾ ಮಾರ್ಗದ ವ್ಯವಸ್ಥೆ ಮಾಡಲಾಗಿದ್ದು, ಓಕಳಿಪುರಂ ಬಳಲಿ ತಾತ್ಕಾಲಿಕ ಕೆಳ ಸೇತುವೆ ನಿರ್ಮಿಸಲಾಗಿದೆ. ಈ ಯೋಜನೆಯಿಂದಾಗಿ ವಿಜಯನಗರ, ರಾಜಾಜಿನಗರ, ಬಸವೇಶ್ವರ ನಗರದ ಕಡೆಯಿಂದ ಮೆಜೆಸ್ಟಿಕ್, ಮಲ್ಲೇಶ್ವರಂ ಗೆ ಹೋಗುವ ಜನರಿಗೆ ಉಪಯೋಗವಾಗಲಿದೆ.












Click it and Unblock the Notifications