ಬಿಬಿಎಂಪಿ ನೌಕರರ ಸಂಖ್ಯೆ ಹಾಗೂ ವೇತನ ಹೆಚ್ಚಳ? ವಿವರಗಳು

ಸುಮಾರು 7,400 ಉದ್ಯೋಗಿಗಳನ್ನು ಹೊಂದಿರುವ ಬಿಬಿಎಂಪಿಯು ಹೊಸ ವಾರ್ಡ್ ಕಚೇರಿಗಳನ್ನು ನಿರ್ವಹಿಸಲು ಹೆಚ್ಚುವರಿ 2,800 ಜನರನ್ನು ನೇಮಿಸಿಕೊಳ್ಳಲು ಯೋಜಿಸಿದೆ.

ಬೆಂಗಳೂರು, ಫೆಬ್ರವರಿ 8: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ನಗರದಲ್ಲಿ ವಾರ್ಡ್‌ಗಳನ್ನು 198 ರಿಂದ 243ಕ್ಕೆ ಹೆಚ್ಚಿಸುವ ನಿಟ್ಟಿನಲ್ಲಿ ಹೆಚ್ಚುವರಿ ಸಿಬ್ಬಂದಿ ವೆಚ್ಚ 97 ಕೋಟಿ ರೂಪಾಯಿ ಆಗಲಿದೆ ಎಂದು ಬಿಬಿಎಂಪಿ ರಾಜ್ಯ ಸರ್ಕಾರಕ್ಕೆ ಅಂದಾಜು ವಿವರ ಸಲ್ಲಿಸಿದೆ.

ಸುಮಾರು 7,400 ಉದ್ಯೋಗಿಗಳನ್ನು ಹೊಂದಿರುವ ಬಿಬಿಎಂಪಿಯು ಹೊಸ ವಾರ್ಡ್ ಕಚೇರಿಗಳನ್ನು ನಿರ್ವಹಿಸಲು ಹೆಚ್ಚುವರಿ 2,800 ಜನರನ್ನು ಸೇರಿಸಲು ಯೋಜಿಸಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪ್ರಸ್ತುತ ವಾರ್ಷಿಕವಾಗಿ ಸುಮಾರು 800 ಕೋಟಿ ರೂಪಾಯಿಗಳನ್ನು ನೌಕರರ ವೇತನ ಪಾವತಿಗಾಗಿ ಖರ್ಚು ಮಾಡುತ್ತಿದೆ ಎಂದು ಡಿಎಚ್‌ ವರದಿ ಮಾಡಿದೆ.

ರಾಜ್ಯ ಸರ್ಕಾರವು ಬಿಬಿಎಂಪಿಯ ಆಡಳಿತಾತ್ಮಕ ವೆಚ್ಚದಲ್ಲಿ ಸರಿಸುಮಾರು 50% ರಷ್ಟು ಹಣವನ್ನು ನೀಡುತ್ತದೆ. ಆದರೆ ಉಳಿದ ಭಾಗವನ್ನು ಆಸ್ತಿ ತೆರಿಗೆಗಳಂತಹ ನಾಗರಿಕ ಸಂಸ್ಥೆಯ ಆದಾಯದ ಮೂಲಗಳಿಂದ ಪಡೆಯಲಾಗುತ್ತದೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಅವರಿಗೆ ಪತ್ರ ಬರೆದಿರುವ ನಾಗರಿಕ ಮಂಡಳಿಯ ಆಡಳಿತ ವಿಭಾಗವು ಹೆಚ್ಚುವರಿ 2,800 ಹುದ್ದೆಗಳನ್ನು ಸೃಜಿಸಲು ಅನುಮೋದನೆ ಕೋರಿದೆ.

ಬಿಬಿಎಂಪಿ ವಾರ್ಡ್‌ಗಳ ವಿಂಗಡಣೆಯ ನಂತರ ಇದು ಸಿಬ್ಬಂದಿ ವೆಚ್ಚವನ್ನು ಹೆಚ್ಚಿಸುತ್ತದೆ. ಅಭಿವೃದ್ಧಿ ಕಾರ್ಯಗಳ ವೆಚ್ಚವನ್ನು ಕಡಿಮೆ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಆಡಳಿತ ಮತ್ತು ಸಾರ್ವಜನಿಕ ಕಾರ್ಯಗಳ ಹಿತದೃಷ್ಟಿಯಿಂದ ವಾರ್ಡ್ ಮತ್ತು ಉಪವಿಭಾಗದ ಮಟ್ಟದಲ್ಲಿ ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸುವ ತುರ್ತು ಅವಶ್ಯಕತೆಯಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.

2020-21ರಲ್ಲಿ ಬಿಬಿಎಂಪಿಯು ಸಾಮಾನ್ಯ ಆಡಳಿತ, ಮುಖ್ಯವಾಗಿ ಸಂಬಳಕ್ಕಾಗಿ ಅಂದಾಜು 732 ಕೋಟಿ ರೂಪಾಯಿ ಖರ್ಚು ಮಾಡಿದೆ. ಹಿಂದಿನ ಹಣಕಾಸು ವರ್ಷದಲ್ಲಿ ವಾರ್ಷಿಕ ವೆಚ್ಚ 745 ಕೋಟಿ ರೂಪಾಯಿಗೆ ಏರಿಕೆಯಾಗಿದ್ದು, ಈ ವರ್ಷದ ಅಂತ್ಯದ ವೇಳೆಗೆ 800 ಕೋಟಿ ರೂ.ಗೆ ತಲುಪುವ ಅಂದಾಜಿದೆ. ಕುಂದುಕೊರತೆಗಳನ್ನು ಪರಿಹರಿಸಲು ಅಥವಾ ಸರಳವಾಗಿ ವಿವರಣೆ ಒದಗಿಸಲು ಬಿಬಿಎಂಪಿಯ ಸಿಬ್ಬಂದಿ ಸಹಾಯ ಮಾಡುವುದಿಲ್ಲ ಎಂಬ ನಂಬಿಕೆ ಸಾಮಾನ್ಯವಾಗಿದೆ.

ಸಾರ್ವಜನಿಕರಿಂದ ದೂರುಗಳು ಹೆಚ್ಚಳ

ಸಾರ್ವಜನಿಕರಿಂದ ದೂರುಗಳು ಹೆಚ್ಚಳ

ಆಸ್ತಿ ತೆರಿಗೆ ಮತ್ತು ಖಾತಾ ವರ್ಗಾವಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಳಂಬದಿಂದ ಹಿಡಿದು, ಬೀದಿ ದೀಪಗಳನ್ನು ದುರಸ್ತಿ ಮಾಡುವಲ್ಲಿ ಉತ್ಸಾಹದ ಕೊರತೆ ಮತ್ತು ದೈನಂದಿನ ಕಸ ಸಂಗ್ರಹಣೆಯಲ್ಲಿ ನಿರಾಸಕ್ತಿಯ ಬಗ್ಗೆ ಸಾರ್ವಜನಿಕರಿಂದ ದೂರುಗಳು ಹೆಚ್ಚಾಗಿವೆ. ಹೆಮ್ಮಿಗೆಪುರ ನಿವಾಸಿ ವಿ ಕೆ ಶ್ರೀವತ್ಸ ಮಾತನಾಡಿ, ಬಿಬಿಎಂಪಿ ನೌಕರರು ಸಮಸ್ಯೆ ಪರಿಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸದೆ ನಾಗರಿಕರನ್ನು ಅಲೆದಾಡುವಂತೆ ಮಾಡುತ್ತಾರೆ ಎಂದು ಆರೋಪಿಸಿದ್ದಾರೆ.

ಸಿಬ್ಬಂದಿಗೆ ಕಾರ್ಯಕ್ಷಮತೆ ಕೊರತೆ

ಸಿಬ್ಬಂದಿಗೆ ಕಾರ್ಯಕ್ಷಮತೆ ಕೊರತೆ

ಬಿಬಿಎಂಪಿ ವೆಬ್‌ಸೈಟ್ ಯಾರಿಗೂ ಕೂಡ ಸಹಾಯ ಮಾಡುವುದಿಲ್ಲ. ಕಚೇರಿ ಭೇಟಿ ವೇಳೆ ಅಧಿಕಾರಿಗಳು ಲಭ್ಯವಿರುವುದಿಲ್ಲ. ಅವರಲ್ಲಿ ಕೆಲವರು ವಾರ್ಡ್ ಸಮಿತಿ ಸಭೆಗಳಿಗೂ ಬರುವುದಿಲ್ಲ. ಖಾಸಗಿ ವಲಯದಂತೆ ಕಾರ್ಯಕ್ಷಮತೆಯ ಆಧಾರದ ಮೇಲೆ ಕೆಲಸ ಕಳೆದುಕೊಳ್ಳುವ ಬಗ್ಗೆ ಪೌರ ಸಿಬ್ಬಂದಿ ಚಿಂತಿಸುವುದಿಲ್ಲ ಎಂದು ಶ್ರೀವತ್ಸ ಅಭಿಪ್ರಾಯಪಟ್ಟರು.

ಸಿಬ್ಬಂದಿ ಕೊರತೆಯಿಂದ ಪರಿಣಾಮ

ಸಿಬ್ಬಂದಿ ಕೊರತೆಯಿಂದ ಪರಿಣಾಮ

ಮಾಜಿ ಮುಖ್ಯ ಕಾರ್ಯದರ್ಶಿ ಟಿ ವಿ ವಿಜಯ್ ಭಾಸ್ಕರ್ ನೇತೃತ್ವದ ಕರ್ನಾಟಕ ಆಡಳಿತ ಸುಧಾರಣಾ ಆಯೋಗ ಎರಡನೇ ವರದಿ ಸಲ್ಲಿಸಿದ್ದು, ಬಿಬಿಎಂಪಿಯಲ್ಲಿ ಸಿಬ್ಬಂದಿ ಕೊರತೆ ತೀವ್ರವಾಗಿದೆ. ಈ ವರದಿಯ ಪ್ರಕಾರ ಈ ಸಿಬ್ಬಂದಿ ಕೊರತೆಯು ನಾಗರಿಕ ಸೇವೆಗಳು, ಮೂಲಸೌಕರ್ಯಗಳ ಗುಣಮಟ್ಟ ಮತ್ತು ಆಡಳಿತದ ಮೇಲೆ ಗಮನಾರ್ಹ ಪರಿಣಾಮ ಬೀರಿದೆ ಎಂದು ಹೇಳಿದೆ.

ಆಡಳಿತಾತ್ಮಕ ವೆಚ್ಚದಲ್ಲಿ 97 ಕೋಟಿ ಖರ್ಚು

ಆಡಳಿತಾತ್ಮಕ ವೆಚ್ಚದಲ್ಲಿ 97 ಕೋಟಿ ಖರ್ಚು

ಅಂಕಿಅಂಗಳನ್ನು ನೋಡುವುದಾದರೆ ಬಿಬಿಎಂಪಿಯ ಹೆಚ್ಚುವರಿ ಮೊತ್ತಗಳು 800 ಕೋಟಿ, ಬಿಬಿಎಂಪಿಯು 2022-23ರಲ್ಲಿ ಆಡಳಿತಾತ್ಮಕ ವೆಚ್ಚದಲ್ಲಿ 97 ಕೋಟಿ ಖರ್ಚು ಮಾಡಲಿದೆ ಎಂದು ಅಂದಾಜಿಸಿದೆ. ವಾರ್ಡ್‌ಗಳನ್ನು 243ಕ್ಕೆ ಹೆಚ್ಚಿಸುವುದರೊಂದಿಗೆ 2800 ಸಿಬ್ಬಂದಿಗಳ ಮೇಲಿನ ಹೆಚ್ಚುವರಿ ವೆಚ್ಚವು ಹೆಚ್ಚಾಗಲಿದೆ. ಹೊಸ 45 ವಾರ್ಡ್‌ಗಳಿಗೆ ಹೆಚ್ಚುವರಿ ಸಿಬ್ಬಂದಿ ಪ್ರಸ್ತಾವನೆ ಸಲ್ಲಿಸಿದರು. ಇವರಲ್ಲಿ 2,115 ಮಂದಿ ಸ್ವಚ್ಛತಾ ಸಿಬ್ಬಂದಿ (ಪೌರಕಾರ್ಮಿಕರು) ಇದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+