ಆನ್‌ಲೈನ್ ಮೂಲಕವೂ ನಂದಿನಿ ಹಾಲು ಲಭ್ಯ
ಬೆಂಗಳೂರು, ಜೂ. 01 : ಇನ್ನು ಮುಂದೆ ಬೆಂಗಳೂರಿನಲ್ಲಿ ನಂದಿನಿ ಹಾಲು ತರಲು ಬೂತ್‌ಗಳನ್ನು ಹುಡುಕಿಕೊಂಡು ಹೋಗಬೇಕಾಗಿಲ್ಲ. ಮನೆಯಲ್ಲಿಯೇ ಕುಳಿತುಕೊಂಡು ಮೊಬೈಲ್ ಅಪ್ಲಿಕೇಶನ್ ಮೂಲಕ ಬುಕ್ ಮಾಡಬಹುದಾಗಿದೆ. ಕೆಎಂಎಫ್ ಈ ನೂತನ ವ್ಯವಸ್ಥೆಯನ್ನು ಜಾರಿಗೆ ತಂದಿದೆ.
ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಬಿಗ್ ಬಾಸ್ಕೆಟ್.ಕಾಮ್ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಆನ್ ಲೈನ್ ಮೂಲಕ ಆರ್ಡರ್ ಮಾಡಿದವರಿಗೆ ಮನೆ ಬಾಗಿಲಿಗೆ ಹಾಲು ಪೂರೈಕೆ ಮಾಡಲು ಮುಂದಾಗಿದೆ. ಜೂನ್ 1ರಿಂದ ಪ್ರಾಯೋಗಿಕವಾಗಿ ಈ ಸೇವೆಗೆ ಚಾಲನೆ ನೀಡಿದೆ.

ಬೆಂಗಳೂರಿನಲ್ಲಿ ಬೆಳೆಯುತ್ತಿರುವ ಆನ್ ಲೈನ್ ವ್ಯವಹಾರವನ್ನು ಗಮನದಲ್ಲಿಟ್ಟುಕೊಂಡು ಈ ಸೇವೆಯನ್ನು ಆರಂಭಿಸಲಾಗಿದೆ. ಆನ್ ಲೈನ್ ಮತ್ತು ಮೊಬೈಲ್ ಅಪ್ಲಿಕೇಶನ್ ಮೂಲಕ ಅರ್ಧ ಮತ್ತು 1 ಲೀಟರ್ ಹಾಲು ಮತ್ತು ಮೊಸರು ಪಡೆಯಲು ಆರ್ಡರ್ ಮಾಡಬಹುದಾಗಿದೆ. [ಮೊಬೈಲ್ ಅಪ್ಲಿಕೇಶನ್ ಡೌನ್ ಲೋಡ್ ಮಾಡಿ]
ಆನ್‌ಲೈನ್ ಮೂಲಕ ಹಾಲು ಮತ್ತು ಮೊಸರು ಮನೆಗೆ ತರಿಸಿಕೊಂಡರೂ ಕೆಎಂಎಫ್ ನಿಗದಿಪಡಿಸಿದ ದರದಲ್ಲಿಯೇ ದೊರೆಯಲಿದೆ. ಬಿಗ್ ಬಾಸ್ಕೆಟ್.ಕಾಮ್ ಕೆಲವೊಮ್ಮೆ ಆಫರ್‌ಗಳನ್ನು ನೀಡಲಿದ್ದು, ಆ ಸಮಯದಲ್ಲಿ ದರಗಳು ಕಡಿತವಾಗುವ ಸಾಧ್ಯತೆ ಇದೆ. [ಹಾಲಿನ ದರ ಹೆಚ್ಚಳಕ್ಕೆ ನಡೆದಿದೆ ಮಾತುಕತೆ]

ಹೇಗೆ ತಲುಪಿಸಲಾಗುತ್ತದೆ ? : ಗ್ರಾಹಕರು ಮೊದಲು ಬಿಗ್ ಬಾಸ್ಕೆಟ್.ಕಾಮ್ ಮೊಬೈಲ್ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಂಡು ನಂತರ ಅಲ್ಲಿ ದೊರೆಯುವ ನಂದಿನಿ ಉತ್ಪನ್ನಗಳನ್ನು ಪಡೆಯಲು ಆರ್ಡರ್ ಮಾಡಬಹುದು. ಸಮಯಕ್ಕೆ ತಕ್ಕಂತೆ ಅದನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ.












Click it and Unblock the Notifications