Namma Metro; ಪೇಟಿಎಂ ಮೂಲಕವೂ ಟಿಕೆಟ್ ಬುಕ್ ಮಾಡಿ
ಬೆಂಗಳೂರು, ಡಿಸೆಂಬರ್ 07; ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ ನೀಡಿದೆ. ಗುರುವಾರದಿಂದಲೇ ಪ್ರಯಾಣಿಕರು ಪೇಟಿಎಂ, ಯಾತ್ರಾ ಮೊಬೈಲ್ ಅಪ್ಲಿಕೇಶನ್ ಮೂಲಕ ನಮ್ಮ ಮೆಟ್ರೋ ಟಿಕೆಟ್ ಬುಕ್ ಮಾಡಬಹುದಾಗಿದೆ.
ಬಿಎಂಆರ್‌ಸಿಎಲ್ ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ನಮ್ಮ ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ನಮ್ಮ ಮೆಟ್ರೋ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಮೊಬೈಲ್ ಕ್ಯೂಆರ್ ಟಿಕೆಟಿಂಗ್ ಅನ್ನು ಒದಗಿಸುವುದರ ಜೊತೆಗೆ ಡಿಸೆಂಬರ್ 8ರಿಂದ ಹೊಸ ಸೇವೆ ಆರಂಭಿಸಲಾಗುತ್ತಿದೆ ಎಂದುದ ಹೇಳಿದೆ.
ಬೆಂಗಳೂರಿಗರ ಪ್ರಯಾಣ ಸುಲಭಗೊಳಿಸಲಿರುವ ಈ ನಾಲ್ಕು ಮೆಟ್ರೋ ಮಾರ್ಗಗಳ ಬಗ್ಗೆ ತಿಳಿಯಿರಿ
ಬಿಎಂಆರ್‌ಸಿಎಲ್ ಪ್ರಕಟಣೆಯಲ್ಲಿ ಪೇಟಿಎಂ, ಯಾತ್ರಾ ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಕ್ಯೂಆರ್ ಕೋಡ್ ಟಿಕೆಟ್‌ಗಳನ್ನು ಪರಿಚಯಿಸಲಾಗುತ್ತಿದೆ ಎಂದು ತಿಳಿಸಿದೆ. ಜನರು ಪ್ರಯಾಣದ ದಿನದಂದು ಪ್ರವೇಶ ಮತ್ತು ಕೊನೆಯ ನಿಲ್ದಾಣವನ್ನು ನಮೂದು ಮಾಡುವ ಮೂಲಕ ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ QR ಟಿಕೆಟ್ ಪಡೆಯಬಹುದು.
ಬೆಂಗಳೂರಲ್ಲಿ ಪ್ರಿಪೇಯ್ಡ್ ಆಟೋರಿಕ್ಷಾ ಕೌಂಟರ್ ನಿರ್ಮಾಣಕ್ಕೆ ಮುಂದಾದ ಬಿಟಿಪಿ- ನಮ್ಮ ಮೆಟ್ರೋ
ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಿ; ಏಕ ಪ್ರಯಾಣದ ಮೊಬೈಲ್ ಕ್ಯೂಆರ್ ಟಿಕೆಟ್‌ಗಳನ್ನು ಬಳಸಿಕೊಂಡು ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಲು ಪೇಟಿಎಂ ಅಪ್ಲಿಕೇಶನ್ ಅಥವಾ ಯಾತ್ರಾ ಅಪ್ಲಿಕೇಶನ್ ಮೂಲಕ ಮೊಬೈಲ್ ಕ್ಯೂಆರ್ ಟಿಕೆಟ್‌ಗಳನ್ನು ಖರೀದಿಸಬಹುದಾಗಿದೆ.
Namma Metro; ಮೆಟ್ರೋ ಫೇಸ್-3 ಯೋಜನೆ ವಿವರ, ನಿಲ್ದಾಣಗಳು
ಪ್ರಯಾಣಿಕರು ಆಂಡ್ರಾಯ್ಡ್ OS / iOS ಹೊಂದಿರುವ ಮೊಬೈಲ್‌ನಲ್ಲಿ ಪ್ಲೇ ಸ್ಟೋರ್/ ಆಪ್ ಸ್ಟೋರ್‌ನಿಂದ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡು ನೋಂದಾಯಿಸಿಕೊಳ್ಳಬೇಕು.
ನಿಲ್ದಾಣಗಳಲ್ಲಿನ ಸ್ವಯಂಚಾಲಿತ ಗೇಟ್‌ಗಳಲ್ಲಿ ಅಳವಡಿಸಿರುವ ಕ್ಯೂಆರ್ ರೀಡರ್‌ಗಳಿಗೆ ಮೊಬೈಲ್ ಫೋನ್‌ನಲ್ಲಿರುವ ಕ್ಯೂಆರ್ ಟಿಕೆಟ್‌ಗಳನ್ನು ಪ್ರವೇಶ ಮತ್ತು ನಿರ್ಗಮಿಸುವಾಗ ತೋರಿಸಿ ಸ್ಕ್ಯಾನ್ ಮಾಡಬೇಕು.
ಖರೀದಿಸಿದ ಮೊಬೈಲ್ ಕ್ಯೂಆರ್ ಟಿಕೆಟ್‌ಗಳು ದಿನದ ರೈಲು ಸೇವೆಯ ಕೊನೆಯವರೆಗೂ ಮಾನ್ಯವಾಗಿರುತ್ತವೆ. ಪ್ರಯಾಣಿಕರು ಪ್ರಯಾಣ ಮಾಡದಿದ್ದರೆ ಅವರು ಅದೇ ದಿನದಂದು ಟಿಕೆಟ್ ರದ್ಧತಿಯನ್ನು ಮಾಡಿ, ಮೊತ್ತವನ್ನು ಮರುಪಾವತಿಯಾಗಿ ಪಡೆಯಬಹುದಾಗಿದೆ.
ರಿಯಾಯಿತಿ ವಿವರ; QR ಟಿಕೆಟ್‌ಗಳನ್ನು ಟೋಕನ್ ದರಕ್ಕಿಂತ ಶೇ5 ರಿಯಾಯಿತಿಯಲ್ಲಿ ನೀಡಲಾಗುತ್ತಿದೆ. ಡಿಜಿಟಲೀಕರಣವನ್ನು ಉತ್ತೇಜಿಸಲು ಮತ್ತು ಕಡಿಮೆ ವೆಚ್ಚದಲ್ಲಿ ಅನುಕೂಲಕರವಾಗಿ ಪ್ರಯಾಣಿಸಲು ಎಲ್ಲಾ ಪ್ರಯಾಣಿಕರು ಮೊಬೈಲ್ ಕ್ಯೂಆರ್ ಟಿಕೆಟ್‌ಗಳ ಸೌಲಭ್ಯವನ್ನು ಬಳಸಿಕೊಳ್ಳ ಬೇಕು ಎಂದು ಬಿಎಂಆರ್‌ಸಿಎಲ್ ಮನವಿ ಮಾಡಿದೆ.
ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ; ಬಿಎಂಆರ್‌ಸಿಎಲ್ ಆರಂಭಿಸಿರುವ ಕ್ಯುಆರ್ ಕೋಡ್ ಟಿಕೆಟ್ ವ್ಯವಸ್ಥೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನವೆಂಬರ್ ತಿಂಗಳಿನಲ್ಲಿ 2.1 ಲಕ್ಷ ಜನರು ಈ ಸೇವೆಯನ್ನು ಬಳಕೆ ಮಾಡಿದ್ದಾರೆ.
ನವೆಂಬರ್ ಮೊದಲ ವಾರದಲ್ಲಿ ಪ್ರತಿದಿನ 3167 ಜನರು ಕ್ಯೂಆರ್ ಟಿಕೆಟ್ ಸೌಲಭ್ಯ ಬಳಕೆ ಮಾಡಿದ್ದಾರೆ. 2ನೇ ವಾರದಲ್ಲಿ 6365 ಮತ್ತು 3ನೇ ವಾರದಲ್ಲಿ 9070 ಜನರು ಸೌಲಭ್ಯ ಬಳಸಿದ್ದಾರೆ. 4ನೇ ವಾರದಲ್ಲಿ ಕ್ಯೂಆರ್ ಕೋಡ್ ಟಿಕೆಟ್ ಪಡೆದವರು 10,100 ಜನ.
ಶೇ 58.5ರಷ್ಟು ಟಿಕೆಟ್‌ಗಳು ವಾಟ್ಸಪ್ ಮೂಲಕ ಬುಕ್ ಆಗಿವೆ. 41.4ರಷ್ಟು ಟಿಕೆಟ್ ನಮ್ಮ ಮೆಟ್ರೋ ಅಪ್ಲಿಕೇಶನ್ ಮೂಲಕ ಬುಕ್ ಮಾಡಲಾಗಿದೆ. 1.4 ಲಕ್ಷ ಜನರು ಈ ಸೌಲಭ್ಯವನ್ನು ತಮ್ಮ ಮೆಟ್ರೋ ಸ್ಮಾರ್ಟ್ ಕಾರ್ಡ್ ರಿಚಾರ್ಜ್ ಮಾಡಲು ಬಳಕೆ ಮಾಡಿದ್ದಾರೆ.
ಸದ್ಯ ನಮ್ಮ ಮೆಟ್ರೋದಲ್ಲಿ ಪ್ರತಿದಿನ ಸಂಚಾರ ನಡೆಸುವ ಜನರ ಸಂಖ್ಯೆ ಸುಮಾರು 5.2 ಲಕ್ಷ. ಇವರಲ್ಲಿ ಶೇ 58ರಷ್ಟು ಜನರು ಸ್ಮಾರ್ಟ್‌ಕಾರ್ಡ್ ಬಳಕೆ ಮಾಡುತ್ತಾರೆ.
ಗ್ರೂಪ್ ಟಿಕೆಟ್ ವ್ಯವಸ್ಥೆ; ನಮ್ಮ ಮೆಟ್ರೋ ಜನವರಿಯಲ್ಲಿ ಗ್ರೂಪ್ ಟಿಕೆಟ್ ವ್ಯವಸ್ಥೆ ಪರಿಚಯಿಸಲಿದೆ. ಒಂದು ಗ್ರೂಪ್ ಟಿಕೆಟ್‌ನಲ್ಲಿ 6 ಜನರು ಸಂಚಾರ ನಡೆಸಬಹುದಾಗಿದೆ. ಟಿಕೆಟ್ ಪಡೆದ ವ್ಯಕ್ತಿ ಮೊದಲು ಸ್ಕ್ಯಾನ್ ಮಾಡಿ ಪ್ರವೇಶಿಸಬೇಕು. ಬಳಿಕ ಉಳಿದವರು ಹೋಗಬಹುದು.