ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡೆಡ್ಲಿ ಸೋಮನ ಬಂಟ ಕವಳ ಭೀಕರ ಕೊಲೆ

By Mahesh
|
Google Oneindia Kannada News

ಬೆಂಗಳೂರು, ಜೂ.25: ಡೆಡ್ಲಿ ಸೋಮನ ಎಲ್ಲಾ ಸಹಚರರಿಗೆ ಆದ ಗತಿಯೇ ಆತನ ಒಂದು ಕಾಲದ ಬಲಗೈ ಬಂಟ ಎನಿಸಿದ್ದ ವಿಜಯ್ ಕುಮಾರ್ ಅಲಿಯಾಸ್ ಕವಳನಿಗೂ ಆಗಿದೆ. ರೌಡಿಸಂ ಬಿಟ್ಟರೂ ರೌಡಿಗಳು ಮಾತ್ರ ಆತನ ವಿರುದ್ಧ ಕತ್ತಿ ಎತ್ತುವುದನ್ನು ನಿಲ್ಲಿಸಲಿಲ್ಲ. ಎರಡು ಬಾರಿ ಎಸ್ಕೇಪ್ ಆಗಿದ್ದ ಕವಳ ನಿನ್ನೆ ರಾತ್ರಿ ಹೊಸೂರು ಸಮೀಪ ರಸ್ತೆ ಹೆಣವಾಗಿ ದುರಂತ ಸಾವು ಕಂಡಿದ್ದಾನೆ.

ಒನ್ ವೇ ಹೆಸರಿನ ಕನ್ನಡ ಚಲನಚಿತ್ರ ಆಡಿಯೋ ರಿಲೀಸ್ ಕಾರ್ಯಕ್ರಮ ಮುಗಿಸಿಕೊಂಡು ರಾತ್ರಿ 11.30 ಸುಮಾರಿಗೆ ಹೊಸೂರಿನ ಕಡೆಗೆ ಕವಳ ತೆರಳಿದ್ದಾನೆ. ಸಾಮಾನ್ಯವಾಗಿ ಅವನ ಕಾರಿನ ಹಿಂದೆ ಇನ್ನೆರಡು ಬೆಂಗಾವಲು ಕಾರುಗಳು ಗಡಿ ಭಾಗದ ತನಕ ಸಾಗುತ್ತವೆ. ನಂತರ ಕವಳ ಒಬ್ಬನೇ ಹೊಸೂರು ಕಡೆಗೆ ತೆರಳುತ್ತಾನೆ ಎಂಬ ವಿಷಯ ಅರಿತ ಕುಟ್ಟಿ ಗ್ಯಾಂಗ್ ಹೊಂಚು ಹಾಕಿ ಕುಳಿತ್ತಿತ್ತು.

ರೌಡಿ ಕುಟ್ಟಿ ಹಾಗೂ ಆತನ ಸಹಚರರು ಕೃಷ್ಣಗಿರಿ ಜಿಲ್ಲೆಯ ಅರಸಂಪಟ್ಟಿ ಸಮೀಪದ ಚೆಕ್ ಪೋಸ್ಟ್ ಬಳಿ ಇನ್ನೋವಾ ಕಾರಿನಲ್ಲಿದ್ದ ಕವಳನನ್ನು ಅಡ್ಡಗಟ್ಟಿದ್ದಾರೆ. ಆಪಾಯವನ್ನು ಅರಿತ ಕವಳ ಕಾರಿನಿಂದ ಇಳಿದು ಓಡತೊಡಗಿದ್ದಾನೆ. ಕುಟ್ಟಿ ಗ್ಯಾಂಗಿನ ಐವರು ಆತನ ಮೇಲೆ ಹಲ್ಲೆ ಮಾಡಿ ಕೊಚ್ಚಿ ಕೊಂದಿದ್ದಾರೆ. ತಪ್ಪಿಸಿಕೊಳ್ಳುವ ಯತ್ನದಲ್ಲಿ ಕವಳನ ಬಲಭುಜ ಮುರಿದಿದೆ. ಸ್ಥಳೀಯ ಪೊಲೀಸರು ಕವಳನ ಗುರುತು ಪತ್ತೆಗಾಗಿ ಮಡಿವಾಳ ಠಾಣೆ ಕರೆ ಮಾಡಿ ದೃಢಪಡಿಸಿಕೊಂಡಿದ್ದಾರೆ. ಅದರೆ, ಹತ್ಯೆ ಮಾಡಿರುವುದು ಕುಟ್ಟಿ ಗ್ಯಾಂಗ್ ನವರೇ ಎಂದು ಪೊಲೀಸರು ಅಧಿಕೃತವಾಗಿ ಪ್ರಕಟಿಸಿಲ್ಲ. ಈ ಬಗ್ಗೆ ಶಂಕೆ ಇದೆ ಎಂದಷ್ಟೇ ಹೇಳಿದ್ದಾರೆ.[ಡೆಡ್ಲಿ ಸೋಮನ ಗ್ಯಾಂಗಿನ ಕವಳ-ಕುಟ್ಟಿ ಕಥೆ]

ಜೆಪಿ ನಗರದ ವಿನಯ್ ಆಳ್ವ ಮರ್ಡರ್ ಸೇರಿದಂತೆ ಐದಾರು ಕೊಲೆ ಕೇಸುಗಳು, ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿರುವ ಆರೋಪ, ಬೆದರಿಕೆ ಕರೆ ಮಾಡಿದ್ದು ಸೇರಿದಂತೆ ಸುಮಾರು 36ಕ್ಕೂ ಅಧಿಕ ಕೇಸುಗಳನ್ನು ಮೈಮೇಲೆ ಹೊತ್ತುಕೊಂಡಿದ್ದ 40 ವರ್ಷ ವಯಸ್ಸಿನ ಕವಳನ ಬೆನ್ನ ಹಿಂದೆ ಸಾವು ನೆರಳಾಗಿ ಹಿಂಬಾಲಿಸುತ್ತಲೇ ಇತ್ತು.

Notorious rowdy, Vijaykumar alias Kavala killed

ವರ್ಷಗಳ ಕೆಳಗೆ ಸಿಸಿಬಿ ಪೊಲೀಸರ ಕೈಗೆ ಸಿಕ್ಕಿಕೊಂಡ ಮೇಲೆ ವಿಜಯ್ ಕುಮಾರ್ ಅಲಿಯಾಸ್ ಕವಳನಿಗೆ ಯಾವ ದೇವರು ಬುದ್ಧಿ ಕೊಟ್ಟರೋ ಏನೋ ರೌಡಿಸಂ ಸಹವಾಸ ಸಾಕು ಎಂದು ಆಯುಧ ಕೆಳಗಿಟ್ಟುಬಿಟ್ಟ. ಆನೇಕಲ್ ಕೋರ್ಟಿಗೆ ಶರಣಾಗಿ ಇನ್ಮುಂದೆ ಸಜ್ಜನನಾಗಿ ಬಾಳುತ್ತೇನೆ ಎಂದು ವಾಗ್ದಾನ ನೀಡಿದ್ದ.

ಡೆಡ್ಲಿಸೋಮನ ಹಲವು ಸಹಚರರನ್ನು ರೌಡಿಸಂ ಬಿಡಿಸಿ ಸಜ್ಜನರನ್ನಾಗಿಸಿ ಮುಖ್ಯವಾಹಿನಿಗೆ ಕರೆ ತಂದ ಸೂಪರ್ ಕಾಪ್ ಟೈಗರ್ ಅಶೋಕ್ ಕುಮಾರ್ ಅವರು ಈ ವಿಷಯ ಕೇಳಿ ಸಂತಸ ಪಟ್ಟಿದ್ದರು.

ಮಡಿವಾಳದ ಪೊಲೀಸ್ ಠಾಣೆ ಕೂಗಳತೆ ದೂರದಲ್ಲೆ ಇರುವ ಶಾಲೆಯಲ್ಲಿ ಓದಿ ಬೆಳೆದ ವಿಜಯ್ ಕುಮಾರ್ ಮುಂದೆ ಸೋಮನ ಗ್ಯಾಂಗ್ ಸೇರಿದ. ಹಾಗೆ ನೋಡಿದರೆ ಇಂದು ಕವಳನನ್ನು ಮುಗಿಸಿದ ಕುಟ್ಟಿ ಕೂಡಾ ಇದೆ ಗ್ಯಾಂಗಿನ ಪದವೀಧರ.

ಸಿಕ್ಕಾಪಟ್ಟೆ ಸಿಕ್ಕಿದ್ದೆಲ್ಲ ತಿನ್ನುವ ಹವ್ಯಾಸ ಹೊಂದಿದ್ದ ವಿಜಯ್ ಕುಮಾರ್ ಪೊಲೀಸರು ಹಾಗೂ ಭೂಗತ ಜಗತ್ತಿನಲ್ಲಿ 'ಕವಳ' ಎಂದು ಕರೆಸಿಕೊಂಡಿದ್ದ. ಆದರೆ, ಈಗ್ಗೆ ನಾಲ್ಕುವರ್ಷಗಳಲ್ಲಿ ತಪ್ಪದೆ ಠಾಣೆಗೆ ಹಾಜರಾಗಿ ಸಹಿ ಹಾಕಿ ಬರುತ್ತಿದ್ದ ಕವಳ ತನ್ನ ನೆಲೆಯನ್ನು ತಮಿಳುನಾಡಿನ ತಿರುನಲ್ವೇಲಿ ಹಾಗೂ ಹೊಸೂರು ಕಡೆಗೆ ಬದಲಾಯಿಸಿಬಿಟ್ಟಿದ್ದ. ನಿನ್ನೆ ಹೆಣವಾಗಿ ಮಲಗಿದ ಕವಳನಿಗೆ ಬದುಕುವ ಆಸೆ ಈಗಷ್ಟೆ ಚಿಗುರಿತ್ತು. ಕವಳನಿಗೆ ಐದು ತಿಂಗಳ ಕಂದಮ್ಮ ಇದೆ. ಆದರೆ, ಸಾವು ಕುಟ್ಟಿ ರೂಪದಲ್ಲಿ ಎರಗಿ ಬಿಟ್ಟಿತು.

English summary
Notorious rowdy, Vijaykumar alias Kavala killed by Kutty gang last night.The incident happened in Sipcot police station area, Hosur. Kavala had several murder charges against him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X