• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಾಸ್ಕ್ ಹಾಕದವರಿಂದ ಬಿಬಿಎಂಪಿ ಸಂಗ್ರಹಿಸಿದ ದಂಡ ಎಷ್ಟು?

|

ಬೆಂಗಳೂರು, ಅಕ್ಟೋಬರ್ 08: ಜನರ ಆಕ್ರೋಶಕ್ಕೆ ಮಣಿದ ಸರ್ಕಾರ ನಗರ ಪ್ರದೇಶದಲ್ಲಿ ಮಾಸ್ಕ್ ಹಾಕದಿದ್ದರೆ ವಿಧಿಸುತ್ತಿದ್ದ ದಂಡದ ಮೊತ್ತವನ್ನು ಕಡಿಮೆ ಮಾಡಿದೆ. ಆದರೆ, ಬಿಬಿಎಂಪಿಗೆ ದಂಡ ಮೊತ್ತದಿಂದಲೇ ಭಾರೀ ಆದಾಯ ಬಂದಿದೆ.

ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸದ, ಸಾಮಾಜಿಕ ಅಂತರ ಕಾಪಾಡದ ಜನರಿಗೆ ನಗರ ಪ್ರದೇಶದಲ್ಲಿ 1 ಸಾವಿರ ರೂ., ಗ್ರಾಮೀಣ ಪ್ರದೇಶದಲ್ಲಿ 500 ರೂ. ದಂಡ ಹಾಕಲಾಗುತ್ತಿತ್ತು. ಸರ್ಕಾರ ಬುಧವಾರ ದಂಡ ಮೊತ್ತವನ್ನು ಕಡಿತಗೊಳಿಸಿದೆ.

ಕೋವಿಡ್ ಪರೀಕ್ಷೆ; ಹೊಸ ದಾಖಲೆ ಬರೆದ ಬಿಬಿಎಂಪಿ

ಹೊಸ ಆದೇಶದಂತೆ ನಗರ ಪ್ರದೇಶದಲ್ಲಿ 250 ರೂ. ಮತ್ತು ಗ್ರಾಮೀಣ ಪ್ರದೇಶದಲ್ಲಿ 100 ರೂ. ದಂಡವನ್ನು ಹಾಕಲಾಗುತ್ತದೆ. ಆದರೆ, ಅಕ್ಟೋಬರ್ 1ರಿಂದ 7ರ ತನಕ ಬಿಬಿಎಂಪಿ 1000 ರೂ.ದಂಡವನ್ನು ಜನರಿಂದ ವಸೂಲಿ ಮಾಡಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದಿದ್ದರೆ 1 ಸಾವಿರ ರೂ. ದಂಡ

ಸಂಗ್ರಹವಾದ ಮೊತ್ತ ಎಷ್ಟು?: ಬುಧವಾರ ಬಿಬಿಎಂಪಿ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ ಹಾಕದ 529 ಜನರು, ಸಾಮಾಜಿಕ ಅಂತರ ಪಾಲನೆ ಮಾಡದ 31 ಜನರಿಗೆ ದಂಡವನ್ನು ವಿಧಿಸಿದೆ. ಇದರಿಂದಾಗಿ 5,60,067 ಮೊತ್ತವನ್ನು ಸಂಗ್ರಹ ಮಾಡಿದೆ.

ಮಾಸ್ಕ್ ದಂಡ ಕಡಿತಗೊಳಿಸಿ ಸಿಎಂ ಯಡಿಯೂರಪ್ಪ ಮಹತ್ವದ ಆದೇಶ!

ಅಕ್ಟೋಬರ್ 7ರ ತನಕ ಮಾಸ್ಕ್ ಹಾಕದ 4,777 ಹಾಗೂ ಸಾಮಾಜಿಕ ಅಂತರ ಕಾಪಾಡದ 488 ಜನರಿಗೆ ದಂಡವನ್ನು ಹಾಕಲಾಗಿದೆ. ಇದರಿಂದಾಗಿ 29,93,101 ಲಕ್ಷ ರೂ. ಸಂಗ್ರಹ ಮಾಡಲಾಗಿದೆ.

ಬಿಬಿಎಂಪಿ ಮಾರ್ಷಲ್‌ಗಳ ಮೂಲಕ ಮಾತ್ರ ದಂಡ ಸಂಗ್ರಹ ಮಾಡುತ್ತಿರಲಿಲ್ಲ. ಬೆಂಗಳೂರು ಪೊಲೀಸರಿಗೂ ದಂಡ ಹಾಕಲು ಅನುಮತಿ ನೀಡಿತ್ತು. ಪೊಲೀಸರು ಒಟ್ಟು 800 ಪ್ರಕರಣಗಳಲ್ಲಿ ದಂಡ ಪ್ರಯೋಗ ಮಾಡಿದ್ದಾರೆ ಎಂಬ ಮಾಹಿತಿ ಇದೆ.

ಮಾಸ್ಕ್ ಹಾಕದಿದ್ದರೆ 1000 ರೂ. ದಂಡ ವಿಧಿಸುವ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಮಾರ್ಷಲ್‌ಗಳ ಜೊತೆ ಗಲಾಟೆ ಮಾಡಿದ್ದರು. ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್, "ದಂಡ ಮೊತ್ತವನ್ನು ಕಡಿಮೆ ಮಾಡುವ ಪ್ರಸ್ತಾವನೆ ಇಲ್ಲ" ಎಂದು ಹೇಳಿದ್ದರು.

ಮಾಧ್ಯಮಗಳಲ್ಲಿ ಮಾಸ್ಕ್ ಹಾಕದಿದ್ದರೆ ದಂಡ ವಿಧಿಸುವ ಬಗ್ಗೆ ಸರಣಿ ವರದಿಗಳು ಪ್ರಸಾರವಾದವು. ಬೆಂಗಳೂರು ನಗ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ತುರ್ತು ಆದೇಶ ಹೊರಡಿಸಿ ದಂಡದ ಮೊತ್ತವನ್ನು ಕಡಿಮೆ ಮಾಡಿದ್ದರು.

ಬೆಂಗಳೂರು ನಗರದಲ್ಲಿ ಸತತ ಎರಡು ದಿನಗಳಿಂದ 5000 ಕ್ಕೂ ಹೆಚ್ಚು ಹೊಸ ಕೋವಿಡ್ ಪ್ರಕರಣಗಳು ದಾಖಲಾಗುತ್ತಿವೆ. ಬುಧವಾರ ನಗರದಲ್ಲಿ 5000 ಹೊಸ ಪ್ರಕರಣ ವರದಿಯಾಗಿದೆ. ನಗರದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 2,62,241. ಸಕ್ರಿಯ ಪ್ರಕರಣಗಳ ಸಂಖ್ಯೆ 58,624.

   Ashwini kumar ನೇಣು ಬಿಗಿದುಕೊಂಡು ಮನೇಲಿ ಆತ್ಮಹತ್ಯೆ | Oneindia Kannada

   English summary
   On October 7, 2020 BBMP fined 529 people for not wearing a mask in public places and collected 5,60,067 Rs. Now Karnataka government reduced fine Rs 1,000 to 250 Rs.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X